ಎಲೆಕ್ಷನ್ ಬಂತು, ಮತ್ತೆ ಸುದ್ದಿಗೆ ಬಂದ್ರು ಹಳದಿ ಸೀರೆಯ ಎಲೆಕ್ಷನ್ ಅಧಿಕಾರಿ!
2019ರ ಚುನಾವಣೆ ಸಂದರ್ಭದಲ್ಲಿ ಹಳದಿ ಸೀರೆಯುಟ್ಟು ಗಾಗಲ್ಸ್ ಧರಿಸಿ, ಕೈಲಿ ಇವಿಎಂ ಮೆಷಿನ್ ಹಿಡಿದು ನಡೆದು ಬರುತ್ತಿದ್ದ ಈ ಮಹಿಳೆ ಸಿಕ್ಕಾಪಟ್ಟೆ ವೈರಲ್ ಆಗಿದ್ರು, ಇವ್ರು ಇರೋ ಬೂತಲ್ಲಿ ಶೇ.100 ಮತದಾನ ಗ್ಯಾರಂಟಿ ಅಂದಿದ್ರು ಜನ. ಇದೀಗ ಮತ್ತೆ ಚುನಾವಣೆ ಬಂದಿದೆ.. ಈ ಸುಂದರಿ ಹೊಸ ಸ್ಟೈಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಲುಕಿದ್ದಾರೆ.
2019ರ ಚುನಾವಣೆ ಸಮಯ, ಸ್ಲೀವ್‌ಲೆಸ್ ಬ್ಲೌಸು, ಗಾಗಲ್ಸ್ ಧರಿಸಿ, ತೆಳು ಹಳದಿ ಸೀರೆಯಲ್ಲಿ ಆಕೆ ಇವಿಎಂ ಮೆಷಿನ್ ಹಿಡಿದು ಬರ್ತಾ ಇರೋದನ್ನು ಫೋಟೋಗ್ರಾಫರ್ ಒಬ್ಬರು ಸೆರೆ ಹಿಡಿದಿದ್ದರು.
ಇದ್ದಕ್ಕಿದ್ದಂತೆ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಯ್ತು. ಯಾರು ಈ ಚುನಾವಣಾ ಅಧಿಕಾರಿ ಎಂಬ ಚರ್ಚೆ, ತನಿಖೆಗಳು ಜೋರಾಗಿ ನಡೆದವು.
ಕಡೆಗೂ ಆಕೆ ಮೂಲತಃ ಡಿಯೋರಿಯಾ ನಿವಾಸಿ ರೀನಾ ದ್ವಿವೇದಿ, ಲಕ್ನೋದ ಗೋಸೈಂಗಂಜ್‌ನಲ್ಲಿರುವ ಬೂತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂತು.
ಕಡೆಗೆ 2022ರ ಚುನಾವಣೆ ಸಂದರ್ಭದಲ್ಲಿ ಕಪ್ಪು ಟಾಪ್, ಬೀಜ್ ಬಣ್ಣದ ಪ್ಯಾಂಟ್ ಧರಿಸಿ ಆಕೆ ಸ್ಟೈಲಾಗಿ ನಡೆದು ಬಂದಾಗಲೂ ಮತ್ತೆ ಸುದ್ದಿಯಾದರು.
ಪೋಲಿಂಗ್ ಅಧಿಕಾರಿ ಇಷ್ಟು ಚೆನ್ನಾಗಿದ್ದರೆ ಪೋಲಿಗಳು ಸುಮ್ಮನಿರುತ್ತಾರೆಯೇ? ಈಕೆ ಇರೋ ಬೂತ್‌ನಲ್ಲಿ ಶೇ.100 ಮತದಾನ ಗ್ಯಾರಂಟಿ ಎಂದೆಲ್ಲ ಕಿಚಾಯಿಸಿ ಕಾಮೆಂಟಿಸಿದರು.
ಆದರೆ, ಆಕೆಗೆ ಸದ್ಯ ಪದವಿ ಓದುವ ಮಗನಿರೋದು ತಿಳೀತಿದ್ದಂತೆ ಈ ಸಂತೂರ್ ಮಮ್ಮಿ ಬಗ್ಗೆ ಬಹಳ ಅಚ್ಚರಿ ಪಟ್ಟರು. ಈಕೆ ಮಿಸ್ ಜೈಪುರ ಕೂಡಾ ಹೌದು.
ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ತನ್ನ ಲುಕ್‌ನಿಂದ ಚರ್ಚೆಗೆ ಬಂದ ರೀನಾ ದ್ವಿವೇದಿ ಮತ್ತೊಮ್ಮೆ ಟ್ರೆಂಡ್‌ನಲ್ಲಿದ್ದಾರೆ.
ಚುನಾವಣೆ ಪರ್ವ ದೇಶದ ಗರ್ವ, ಮೊದಲು ಮತದಾನ ನಂತರ ಜಲಪಾನ ಎಂದು ರೀನಾ ದ್ವಿವೇದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂದೇಶ ಸಾರಿದ್ದಾರೆ.
ಈಕೆಯ ಸೀರೆಗಳು, ಅದಕ್ಕೆ ಮ್ಯಾಚ್ ಮಾಡುವ ಬ್ಲೌಸ್‌ಗಳನ್ನು ಸೋಷ್ಯಲ್ ಮೀಡಿಯಾದಲ್ಲಿ ಸಾಕಷ್ಟು ಮಹಿಳೆಯರು ಅನುಕರಿಸಲು ನೋಡುತ್ತಾರೆ.