ವರ್ಕ್ ಫ್ರಂ ಟ್ರಾಫಿಕ್; ಬೆಂಗಳೂರು ಮಹಿಳಾ ಉದ್ಯೋಗಿಯ ಪಾಡು ನೋಡಿ ಅಯ್ಯೋ ಎಂದ ನೆಟ್ಟಿಗರು
ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳು ಇಡೀ ದಿನವನ್ನು ತಿಂದರೂ ಅಚ್ಚರಿ ಇಲ್ಲ. ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ಕಚೇರಿಯ ಮೀಟಿಂಗ್‌ನಲ್ಲಿ ಭಾಗವಹಿಸುತ್ತಿರುವುದನ್ನು ಸೆರೆಹಿಡಿದಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಕುಖ್ಯಾತಿ ಜಗದಗಲ ಹರಡಿದೆ. ನಗರದಲ್ಲಿನ ಪ್ರಯಾಣಿಕರು ಸರಾಸರಿ 29 ನಿಮಿಷ 10 ಸೆಕೆಂಡುಗಳಲ್ಲಿ ಕೇವಲ 10 ಕಿಲೋಮೀಟರ್‌ಗಳನ್ನು ಕ್ರಮಿಸುತ್ತಾರೆ. ಸಾಮಾಜಿಕ ಮಾಧ್ಯಮವು ಜನರು ತಮ್ಮ ಪ್ರಯಾಣದ ಸಮಯದಲ್ಲಿ ಬಹುಕಾರ್ಯವನ್ನು ಮಾಡುವ ವೀಡಿಯೊಗಳಿಂದ ತುಂಬಿದೆ. ಈ ಮೂಲಕ ಟ್ರಾಫಿಕ್‌ನಲ್ಲಿ ಸಿಲುಕುವ ಸಮಯ ಬಳಸಿಕೊಳ್ಳಲು ಜನರು ಹೆಣಗಾಡುತ್ತಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಟೂ ವ್ಹೀಲರ್‌ನಲ್ಲಿ ಹೋಗುತ್ತಲೇ ಲ್ಯಾಪ್‌ಟಾಪ್ ಆನ್ ಮಾಡಿಕೊಂಡು ಝೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದು ಸುದ್ದಿಯಾಗಿತ್ತು. ಇದೀಗ ಯುವತಿಯೊಬ್ಬಳು ಸ್ಕೂಟಿ ಚಲಾಯಿಸುತ್ತಲೇ ಆಫೀಸ್ ಮೀಟಿಂಗ್ ಅಟೆಂಡ್ ಮಾಡುವ ವಿಡಿಯೋ ವೈರಲ್ ಆಗಿದೆ.
ಎಲೆಕ್ಷನ್ ಬಂತು, ಮತ್ತೆ ಸುದ್ದಿಗೆ ಬಂದ್ರು ಹಳದಿ ಸೀರೆಯ ಎಲೆಕ್ಷನ್ ಅಧಿಕಾರಿ!
ಬಳಕೆದಾರ @Sun46982817Shan ಅವರು Xನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವತಿಯು ಸಿಗ್ನಲ್ನಲ್ಲಿ ತನ್ನ ಸ್ಕೂಟರ್‌ನ ಹ್ಯಾಂಡಲ್‌ನಲ್ಲಿ ಅಳವಡಿಸಲಾಗಿರುವ ಫೋನ್‌ನೊಂದಿಗೆ ವಿಡಿಯೋ ಕಾಲ್‌ನಲ್ಲಿರುವುದನ್ನು ಕಾಣಬಹುದು. ಕರೆಯಲ್ಲಿ ಮಹಿಳೆಯನ್ನು ಹೊರತುಪಡಿಸಿ ಕನಿಷ್ಠ ಇಬ್ಬರು ಜನರಿದ್ದಾರೆ ಮತ್ತು ಅವರು ತಮ್ಮ ವೀಡಿಯೊವನ್ನು ಆಫ್ ಮಾಡಿದ್ದನ್ನು ಕೂಡಾ ನೋಡೋಬಹುದು.
ಕ್ಯಾಮರಾ ಝೂಮ್ ಔಟ್ ಮಾಡುವಾಗ, ವಾಹನಗಳ ಉದ್ದನೆಯ ಸಾಲು ರಸ್ತೆಯುದ್ದಕ್ಕೂ ನಿಂತಿರುವುದನ್ನು ನೋಡಬಹುದು. ವಿಡಿಯೋವು ಬೆಂಗಳೂರು ಪ್ರಯಾಣಿಕರು ಪ್ರತಿದಿನ ಎದುರಿಸುತ್ತಿರುವ ಅವ್ಯವಸ್ಥೆಯನ್ನು ಸೆರೆ ಹಿಡಿಯುತ್ತದೆ.
ನೇಲ್ ಆರ್ಟ್ನಿಂದ ಗಿನ್ನಿಸ್ ರೆಕಾರ್ಡ್ ಮಾಡಿ, ನೇಲ್ ಸ್ಟುಡಿಯೋ ತೆರೆದ ನಟಿ ಸೊನಾಕ್ಷಿ ಸಿನ್ಹಾ!
'ವರ್ಕ್ ಫ್ರಂ ಟ್ರಾಫಿಕ್, ಬೆಂಗಳೂರಿನಲ್ಲಿದು ಸಾಮಾನ್ಯ ದಿನ' ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಪೋಸ್ಟ್ ಬೆಂಗಳೂರಿನ ನಿವಾಸಿಗಳ ಹೊಂದಾಣಿಕೆಯನ್ನು ಪ್ರದರ್ಶಿಸುತ್ತದೆ. ಮಾತ್ರವಲ್ಲದೆ ಭಾರೀ ಟ್ರಾಫಿಕ್ ನಡುವೆ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಅವರು ಎದುರಿಸುತ್ತಿರುವ ಅನನ್ಯ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಜೊತೆಗೆ, ಕಚೇರಿಯ ಒತ್ತಡವನ್ನೂ ಪ್ರತಿಫಲಿಸುತ್ತದೆ.