ಹಲವು ದಶಕಗಳಿಂದ ಪ್ರತಿಭಟನಾ ಸ್ಥಳವಾಗಿ ಗುರುತಿಸಿಕೊಂಡಿರುವ ಜಂತರ್ ಮಂತರ್‌ನಲ್ಲಿ ಇನ್ನು ಹೋರಾಟ ಸಾಧ್ಯವಿಲ್ಲ. ಇನ್ನು ಪ್ರತಿಭಟನೆಗೆ ಮೂರು ಸ್ಥಳ ಗುರುತಿಸಲಾಗಿದೆ. ಜಂತರ್ ಮಂತರ್ ಹೋರಾಟ ಅಂತ್ಯಗೊಂಡಿದೆ.

ನವದೆಹಲಿ (ಅ.12) ಕಳೆದ ಕೆಲ ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ಭಾರಿ ಸುದ್ದಿಯಲ್ಲಿದೆ. ಪ್ರತಿಭಟನೆ, ಹೋರಾಟಗಳಿಂದ ಸದಾ ಗಿಜಿಗಿಡುತ್ತಿದ್ದ ಜಂತರ್ ಮಂತರ್ ಇನ್ಮುಂದೆ ಪ್ರತಿಭಟನಾ ಸ್ಥಳವಲ್ಲ. ಇತ್ತೀಚೆಗೆ ಕೋರ್ಟ್ ಸೂಚನೆ ಮೇರೆಗೆ ದೆಹಲಿ ಪೊಲೀಸರು ಪ್ರತಿಭಟನೆಗೆ ಇತರ ಮೂರು ಪ್ರತಿಭಟನಾ ಸ್ಥಳಗಳನ್ನು ಗುರುತಿಸಿದ್ದಾರೆ. ಇನ್ನು ಪ್ರತಿಭಟನೆಗೆ ಜಂತರ್ ಮಂತರ್‌ನಲ್ಲಿ ಅವಕಾಶ ನೀಡುವುದಿಲ್ಲ. ಇದರ ಬದಲು ರಾಂ ಲೀಲಾ ಮೈದಾನ ಸೇರಿಂತೆ ಇತರ ಮೂರು ಸ್ಥಳಗಳಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.

ಅಕ್ಟೋಬರ್ 10ರ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ದೆಹಲಿ ಪೊಲೀಸರು ಅವಕಾಶ ನಿರಾಕರಿಸಿದ್ದರು. ಜೊತೆಗೆ ಮೆಟ್ರೋ ನಿಲ್ದಾಣ ಬಂದ್, ರೈಲು ಸಂಚಾರ ಬಂದ್, ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಮೆಟ್ಟೇಲಿರಿದ್ದರು. ಜಂತರ್ ಮಂತರ್‌ನಲ್ಲಿ ಅವಕಾಶ ನೀಡಲಿಲ್ಲ, ಕೊನೆಗೆ ರಾಮ್ ಲೀಲಾ ಮೈದಾನದಲ್ಲಿ ಅವಕಾಶ ನೀಡಬಹುದಿತ್ತು ಎಂದು ಸಲಹೆ ನೀಡಿದ್ದರು. ಈ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ದಿಲ್ಲಿ ಪೊಲೀಸರು ಇದೀಗ ಮೂರು ಪ್ರತಿಭಟನಾ ಸ್ಥಳಗಳನ್ನು ಗುರುತಿಸಿದ್ದಾರೆ.

ದೆಹಲಿ ಪೊಲೀಸ್ ಗರುತಿಸಿದ ಮೂರು ಪರ್ಯಾ ಸ್ಥಳ ಯಾವುದು

ಜಂತರ್ ಮಂತರ್ ಬದಲಿಗೆ ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪ್ರತಿಭಟನಾ ಸ್ಥಳವಾಗಿ ಗುರುತಿಸಿದೆ. ಇನ್ನು ಹೋರಾಟ ಮಾಡುವ ಪ್ರತಿಭಟನಾ ಮಾಡುವವರು ಈ ಮೂರು ಮೈದಾನಗಳಲ್ಲಿ ಮಾಡಬೇಕು. ಜಂತರ್ ಮಂತರ್‌ನಲ್ಲಿ ಅವಕಾಶವಿರುವುದಿಲ್ಲ.

ಈ ಹಿಂದಿನ ಮಾರ್ಗಸೂಚಿಗಳ ಪ್ರಕಾರ 1000 ವರೆಗಿನ ಜನರ ಪ್ರತಿಭಟನೆಗೆ ಜಂತರ್ ಮಂತರ್ ನೀಡಲಾಗುತ್ತಿತ್ತು. ಜಂತರ್ ಮಂತರ್ ಸರ್ಕಾರದ ಪ್ರಮುಖ ಭದ್ರತಾ ವಲಯಗಳ ಸಮೀಪದಲ್ಲಿರುವ ಕಾರಣ ಹೆಚ್ಚಿನ ಮಂದಿಗೆ ಇಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ. ಇನ್ನು ರಾಂ ಲೀಲಾ ಮೈದಾನದಲ್ಲಿ 50 ಸಾವಿರದ ವರೆಗೆ ಹಾಗೂ 50 ಸಾವಿರಕ್ಕಿಂತ ಮೇಲ್ಪಟ್ಟ ಜನರಿದ್ದರೆ ಬುರಾರಿ ಮೈದಾನ ಮೀಸಲಿಡಲಾಗಿತ್ತು. ಇದೀಗ ಜಂತರ್ ಮಂತರ್ ಬದಲಿಗೆ ಸಿಬಿಡಿ ಮೈದಾನ ಸೇರಿಸಲಾಗಿದೆ.