ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಇಂದು ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯ ಕಾಂತ್ ಭೇಟಿಗೆ ಇಂಡಿಯಾ ಒಕ್ಕೂಟ ಮುಂದಾಗಿತ್ತು. ಭಾರಿ ಮೆರವಣಿಗೆಯೊಂದಿಗೆ ಸಿಜೆಐ ಭೇಟಿಗೆ ನಿಯೋಗ ಪ್ಲಾನ್ ಮಾಡಿತ್ತು. ಆದರೆ ಸಿಜೆಐ ಭೇಟಿ ನಿರಾಕರಿಸಿದ್ದಾರೆ.
ನವದೆಹಲಿ (ಅ.12) ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟೆನೆ ತೀವ್ರಗೊಳಿಸಿರುವ ರಾಹುಲ್ ಗಾಂಧಿ ಹಾಗೂ ಇಂಡಿಯಾ ಒಕ್ಕೂಟ ಕೋಲಾಹಲ ಸೃಷ್ಟಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಈಗಾಗಲೇ ಹೋರಾಟ ನಡೆಸಿದೆ. ಇತ್ತ ಕಾಕ್ರೋಚ್ ಜನತಾ ಪಾರ್ಟಿ ಕೂಡ ಪ್ರತಿಭಟನೆ ನಡೆಸಿದೆ. ಇದೇ ವಿಚಾರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಇಂಡಿಯಾ ಒಕ್ಕೂಟ ನಿಯೋಗ ಮನವಿ ಸಲ್ಲಿಸಿದೆ. ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಭೇಟಿಯಾಗಿ ಮೆಮೋರಾಡಂ ಸಲ್ಲಿಸಲು ಮುಂದಾಗಿತ್ತು. ಆದರೆ ಹಂಗಾಮ ಸೃಷ್ಟಿಸಲು ಮುಂದಾಗಿದ್ದ ಇಂಡಿಯಾ ಒಕ್ಕೂಟಕ್ಕೆ ಸಿಜೆಐ ಶಾಕ್ ನೀಡಿದ್ದಾರೆ. ನಿಯೋಗ ಭೇಟಿಗೆ ಸಿಜೆಐ ನಿರಾಕರಿಸಿದ್ದಾರೆ.
ಭೇಟಿ ಸೂಕ್ತವಲ್ಲ ಎಂದ ಸಿಜೆಐ
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಪ್ರಕರಣ ಈಗಾಲೇ ನ್ಯಾಯಾಲದಲ್ಲಿ ವಿಚಾರಣೆ ಹಂತದಲ್ಲಿದೆ. ಸಬ್‌ಜುಡೀಸ್ ಹಂತದಲ್ಲಿರುವ ಕಾರಣ ನಿಯೋಗ ಬೇಟಿ ಮಾಡಿ ಚರ್ಚಿಸುವುದು ಸೂಕ್ತವಲ್ಲ. ಪ್ರಕರಣ ನ್ಯಾಯಾಲದಲ್ಲಿರುವಾಗ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಈ ವಿಚಾರದಲ್ಲಿ ಬಾಹ್ಯ ಚರ್ಚೆಗಳು ಸೂಕ್ತವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನಿರಾಕರಣೆಗೆ ಕಾರಣ ಹೇಳಿದ್ದಾರೆ.
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸಲಹೆ
ಸಿಜೆಐ ಸೂರ್ಯ ಕಾಂತ್ ಇಂಡಿಯಾ ಒಕ್ಕೂಟದ ನಿಯೋಗಕ್ಕೆ ಸೂಚನೆಯನ್ನು ನೀಡಿದೆ. ಭೇಟಿಗೆ ನಿರಾಕರಿಸಿದ ಸಿಜೆಐ, ಇದೇ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಈ ಮೂಲಕ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಸಿಜೆಐ ಸೂರ್ಯಕಾಂತ್ ಸೂಚನೆ ನೀಡಿದ್ದಾರೆ. ನ್ಯಾಯಾಲಯ ಈ ರೀತಿಯ ಪ್ರಕರಣಗಳನ್ನು ಅರ್ಜಿ ಮೂಲಕ, ನ್ಯಾಯಾಂಗ ಪ್ರಕ್ರಿಯೆ ಮೂಲಕ ಪರಿಶೀಲನೆ ನಡೆಸಲಿದೆ. ಇದರ ಬದಲಾಗಿ ಆಡಳಿತ ಪ್ರತಿನಿಧಿಯನ್ನು, ರಾಜಕೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಸ್ಪಷ್ಟಪಡಿಸಿದ್ದಾರೆ.
ಭಾರಿ ಮೆರವಣಿಗೆ ಪ್ಲಾನ್ ಠುಸ್
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿರುವ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ನಿಯೋಗ, ಇದೀಗ ಸುಪ್ರೀಂ ಕೋರ್ಟ್‌ಗೆ ಮರೆವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲು ಪ್ಲಾನ್ ಮಾಡಿತ್ತು. ಸಿಜೆಐ ಸೂರ್ಯಕಾಂತ್ ನಿಯೋಗ ಭೇಟಿ ನಿರಾಕರಿಸುತ್ತಿದ್ದಂತೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಖಭಂಗವಾಗಿದೆ. ಈ ಮೂಲಕ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕೋಲಾಹಲ ಎಬ್ಬಿಸಲು ಇಂಡಿಯಾ ಒಕ್ಕೂಟ ನಿಯೋಗ ಪ್ಲಾನ್ ಮಾಡಿತ್ತು. ಆದರೆ ಈ ಎಲ್ಲಾ ಪ್ಲಾನ್‌ಗಳು ಠುಸ್ ಆಗಿದೆ. ಕಾಂಗ್ರೆಸ್ ಕಾನೂನು ಹೋರಾಟಕ್ಕಿಂತ ಬೀದಿ ಹೋರಾಟದಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಂತೆ ಕಾಣುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.


