Asianet Suvarna News Asianet Suvarna News

ಭಾರತದ ನಿದ್ದೆಗೆಡಿಸಿದ ಹೊಸ ರೂಪಾಂತರಿ, ಓಲಾ, ಊಬರ್ ಆಟೋ ಸೇವೆ ದುಬಾರಿ: ನ.27ರ ಟಾಪ್ 10 ಸುದ್ದಿ!

ಹೊಸ ರೂಪಾಂತರಿ ವೈರಸ್ ಪತ್ತೆಯಾದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕೊರೋನಾ ಸಭೆ ನಡೆಸಲಾಗಿದೆ.  ಶತಮಾನಗಳ ಹಳೆಯ ಅಸ್ಸಾಂ ವಿಜೋರಾಂ ಗಡಿ ಬಿಕ್ಕಟ್ಟು ಅಂತ್ಯಗೊಂಡಿದೆ. ಬಡ ರಾಜ್ಯ ಹಾಗೂ ಜಿಲ್ಲೆಗಳ ವರದಿ ಪ್ರಕಟವಾಗಿದೆ. Ola, Uberಗೂ ಶೇ.5ರಷ್ಟು GST ಕಾರಣ ಆಟೋ ಸೇವೆ ದುಬಾರಿಯಾಗಿದೆ. ನಟಿ ಖಾಸಗಿ ಕಿಸ್ಸಿಂಗ್ ಫೋಟೋ ಲೀಕ್, ಗಾಯಕಿ ಹರಿಣಿ ತಂದೆ ಎಕೆ ರಾವ್ ಸಾವಿಗೆ ಸ್ಫೋಟಕ ತಿರುವು ಸೇರಿದಂತೆ ನವೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
New Omicron variant to jacqueline fernandezs romantic photo top 10 news of November 27 ckm
Author
Bengaluru, First Published Nov 27, 2021, 4:26 PM IST
  • Facebook
  • Twitter
  • Whatsapp

Omicron variant: ಹೊಸ ಕೋವಿಡ್ ರೂಪಾಂತರಿ ತಳಿ ಆತಂಕ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

New Omicron variant to jacqueline fernandezs romantic photo top 10 news of November 27 ckm

ಸೌತ್ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ(Coronavirus) ತಳಿ ಓಮಿಕ್ರಾನ್(Omicron variant) ಇದೀಗ ವಿಶ್ವದ ನಿದ್ದೆಗೆಡಿಸಿದೆ. ಅತೀ  ವೇಗದಲ್ಲಿ ಹರಡವು ಸಾಮರ್ಥ್ಯ, ಲಸಿಕೆಗೂ(Vaccine) ಬಗ್ಗದ ಈ ತಳಿ ವಿಶ್ವದಲ್ಲಿ ಮತ್ತೊಂದು ಅಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Assam Mizoram Border Dispute ಇತ್ಯರ್ಥ : ಅಮಿತ್‌ ಶಾ ಸಂಧಾನ ಯಶಸ್ವಿ!

New Omicron variant to jacqueline fernandezs romantic photo top 10 news of November 27 ckm

ಅಸ್ಸಾಂ (Assam) ಮತ್ತು ಮಿಜೋರಂ (Mizoram) ನಡುವಿನ ಶತಮಾನಗಳ ಹಳೆಯ ಗಡಿ ಬಿಕ್ಕಟ್ಟು ಇತ್ಯರ್ಥಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shash) ನಡೆಸಿದ ಎರಡು ದಿನಗಳ ಸಂಧಾನ ಸಭೆ ಯಶಸ್ವಿಯಾಗಿದೆ. 

cleft lip surgery: ಮಕ್ಕಳ ಮೊಗದಲ್ಲಿ ನಗು ತಂದ ಡಾಕ್ಟರ್‌.... ಮಾಡಿದ್ದು 37000 ಉಚಿತ ಸರ್ಜರಿ

New Omicron variant to jacqueline fernandezs romantic photo top 10 news of November 27 ckm

ಇಂದು ಪ್ಲಾಸ್ಟಿಕ್‌ ಸರ್ಜನ್‌ ಆಗಿ ಖ್ಯಾತಿ ಗಳಿಸಿರುವ ಸುಭೋದ್‌ ವೈದ್ಯಕೀಯ ಶಿಕ್ಷಣ ಪಡೆಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಡತನದ ಹಿನ್ನೆಲೆಯಿಂದ ಬಂದ ಅವರು  1979 ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ(medical science)ದ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಕನ್ನಡಕ ಹಾಗೂ ಸೋಪ್‌ಗಳನ್ನು ಮಾರಾಟ ಮಾಡುತ್ತಿದ್ದರಂತೆ. ಬಹುಶಃ ಬಡತನದ ಹಿನ್ನೆಲೆಯಿಂದ ಬಂದ ಕಾರಣಕ್ಕೆ ಬಡವರ ಕಷ್ಟ ಇವರಿಗೆ ಸುಲಭವಾಗಿ ಅರ್ಥವಾಗಿರಬಹುದು. 

Multidimensional Poverty Index : ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ ದೇಶದ ಅತಿ ಬಡರಾಜ್ಯಗಳು!

New Omicron variant to jacqueline fernandezs romantic photo top 10 news of November 27 ckm

ನೀತಿ ಆಯೋಗದ ‘ಬಹುಆಯಾಮದ ಬಡತನ ವರದಿ’(Multidimensional Poverty Index) ಯಲ್ಲಿ ಬಿಹಾರ (Bihar), ಜಾರ್ಖಂಡ್‌ (Jharkhand) ಹಾಗೂ ಉತ್ತರ ಪ್ರದೇಶಗಳು (Uttar Pradesh) ದೇಶದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. 

Ind vs NZ Kanpur Test: ಅಕ್ಷರ್ ಮೋಡಿ, ಕಮ್‌ಬ್ಯಾಕ್ ಮಾಡಿದ ಟೀಂ ಇಂಡಿಯಾ..!

New Omicron variant to jacqueline fernandezs romantic photo top 10 news of November 27 ckm

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ (Axar Patel) (3) ಹಾಗೂ ರವೀಂದ್ರ ಜಡೇಜಾ (Ravindra Jadeja) ಮಿಂಚಿನ ದಾಳಿಗೆ ತತ್ತರಿಸಿದ ಪ್ರವಾಸಿ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದ ಎರಡನೇ ಸೆಷನ್‌ನಲ್ಲಿ 4 ವಿಕೆಟ್‌ ಕಳೆದುಕೊಂಡಿದೆ. ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡವು (New Zealand Cricket Team) 6 ವಿಕೆಟ್ ಕಳೆದುಕೊಂಡು 249 ರನ್ ಬಾರಿಸಿದ್ದು, ಇನ್ನೂ 96 ರನ್‌ಗಳ ಹಿನ್ನೆಡೆಯಲ್ಲಿದೆ.

Jacqueline Fernandez: ಖಾಸಗಿ ಕಿಸ್ಸಿಂಗ್ ಫೋಟೋ ಲೀಕ್, ನಾಚ್ಕೊಂಡ ಶ್ರೀಲಂಕಾ ಸುಂದರಿ ಜೊತೆಗಿದ್ದಿದ್ದು ಯಾರು?

New Omicron variant to jacqueline fernandezs romantic photo top 10 news of November 27 ckm

Jacqueline Fernandez: ನಟಿಯ ಖಾಸಗಿ ಫೋಟೋ ವೈರಲ್ ಆಗಿದೆ. ಕಿಸ್ಸಿಂಗ್ ಫೊಟೋ ಲೀಕ್ ಆಗಿದ್ದು ಎಲ್ಲಿಂದ ? ಶ್ರೀಲಂಕಾ ಸುಂದರಿಯ ಕೆನ್ನೆಗೆ ಮುತ್ತಿಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡವನ್ಯಾರು ?

Ola, Uberಗೂ ಶೇ.5ರಷ್ಟು GST : ದುಬಾರಿಯಾಗಲಿದೆ ಆಟೋ ಸೇವೆ!

New Omicron variant to jacqueline fernandezs romantic photo top 10 news of November 27 ckm

 ಓಲಾ (Ola), ಊಬರ್‌ನಂಥ (Uber) ಇ-ಕಾಮರ್ಸ್‌ ವೇದಿಕೆಗಳ ಮೂಲಕ ಆಟೋ ರಿಕ್ಷಾ ಸೇವೆ (Auto Rickshaw Service) ಒದಗಿಸುವುದಕ್ಕೆ 2022 ಜನವರಿ 1ರಿಂದ ಶೇ.5ರಷ್ಟುಸರಕು ಮತ್ತು ಸೇವಾ ತೆರಿಗೆ (Goods and Service Tax) ವಿಧಿಸಲಾಗುತ್ತದೆ. 

390 Crore big scam: ಗಾಯಕಿ ಹರಿಣಿ ತಂದೆ ಎಕೆ ರಾವ್ ಸಾವಿಗೆ ಸ್ಫೋಟಕ ತಿರುವು?

New Omicron variant to jacqueline fernandezs romantic photo top 10 news of November 27 ckm

ಖ್ಯಾತ ತೆಲುಗು (Tollywood) ಗಾಯಕಿ ಹರಿಣಿ ರಾವ್ (Harini Rao) ಅವರು ಕೆಲವು ದಿನಗಳ ಹಿಂದೆ  ತಮ್ಮ ತಂದೆ ನಾಪತ್ತೆಯಾಗಿದ್ದಾರೆ (Missing Case) ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಎರಡು ಮೂರು ದಿನಗಳಲ್ಲಿ ಅಂದರೆ ನವೆಂಬರ್ 22ರಂದು ಯಲಹಂಕ- ರಾಜಾನಕುಂಟೆ (Yelahanka-Rajankunte) ರೈಲ್ವೆ ಹಳಿ ಮಧ್ಯೆ ಶವವಾಗಿ ಪತ್ತೆಯಾಗಿದ್ದರು. ಅವರು ಪತ್ತೆಯಾದ ಸ್ಥಿತಿ ನೋಡಿದರೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಕುಟುಂಬಸ್ಥರು ಮತ್ತೆ ದೂರು ದಾಖಲಿಸಿದ್ದರು. 

1971 War victory: ಇಂಡಿಯಾ ಗೇಟ್‌ನಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಭಾರತ ಸಿದ್ಧತೆ

New Omicron variant to jacqueline fernandezs romantic photo top 10 news of November 27 ckm

ದೆಹಲಿ(ನ.27): ಬಾಂಗ್ಲಾದೇಶ ನಿರ್ಮಾಣ ಹಾಗೂ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಜಯ ಸಾಧಿಸಿ 50ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಇದರ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರಂಗವಾಗಿ ಇಂಡಿಯಾ ಗೇಟ್‌ ಕಟ್ಟಡದ ಬಳಿ ಡಿಸೆಂಬರ್‌ 14ರಿಂದ 16ರವರೆಗೆ ದೊಡ್ಡ ಮಟ್ಟದ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಲಿದ್ದಾರೆ. 

Follow Us:
Download App:
  • android
  • ios