Asianet Suvarna News Asianet Suvarna News

Ola, Uberಗೂ ಶೇ.5ರಷ್ಟು GST : ದುಬಾರಿಯಾಗಲಿದೆ ಆಟೋ ಸೇವೆ!

*ಹಣಕಾಸು ಸಚಿವಾಲಯದಿಂದ ತೆರಿಗೆ ವಿನಾಯಿತಿಯನ್ನು ವಾಪಸ್‌  
*2022 ಜನವರಿ 1ರಿಂದ ಶೇ.5ರಷ್ಟುಸರಕು ಮತ್ತು ಸೇವಾ ತೆರಿಗೆ
*ದುಬಾರಿಯಾಗಲಿವೆ ಓಲಾ, ಉಬರ್‌ ಆಟೋ ಸೇವೆಗಳು 

Booking Auto via Ola Uber may get costlier due to 5 percent Goods and Service Tax mnj
Author
Bengaluru, First Published Nov 27, 2021, 3:31 PM IST

ನವದೆಹಲಿ(ನ.27): ಓಲಾ (Ola), ಊಬರ್‌ನಂಥ (Uber) ಇ-ಕಾಮರ್ಸ್‌ ವೇದಿಕೆಗಳ ಮೂಲಕ ಆಟೋ ರಿಕ್ಷಾ ಸೇವೆ (Auto Rickshaw Service) ಒದಗಿಸುವುದಕ್ಕೆ 2022 ಜನವರಿ 1ರಿಂದ ಶೇ.5ರಷ್ಟುಸರಕು ಮತ್ತು ಸೇವಾ ತೆರಿಗೆ (Goods and Service Tax) ವಿಧಿಸಲಾಗುತ್ತದೆ. ಇ-ಕಾಮರ್ಸ್‌ (E-Commerce) ವೇದಿಕೆಗಳ ಮೂಲಕ ಆಟೋ ರಿಕ್ಷಾ ಸೇವೆ ಒದಗಿಸುವವರಿಗೆ ನೀಡಲಾಗಿದ್ದ ಜಿಎಸ್‌ಟಿ (GST) ವಿನಾಯಿತಿಯನ್ನು ವಾಪಸ್‌ ಪಡೆಯುತ್ತಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ (Ministry of finance) ನ.18ರಂದು ತಿಳಿಸಿದೆ. ಹೀಗಾಗಿ ಇಂಥ ಸೇವೆಗೆ ಜ.1, 2022ರಿಂದ ಶೇ.5ರಷ್ಟುಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಆಫ್‌ಲೈನ್‌ ಮೂಲಕ ಪ್ರಯಾಣಿಕ ಸೇವೆ ಒದಗಿಸುವ ರಿಕ್ಷಾ ಚಾಲಕರಿಗೆ ತೆರಿಗೆಯಿಂದ ವಿನಾಯಿತಿ ಮುಂದುವರೆಯುತ್ತದೆ. ಹೀಗಾಗಿ ಓಲಾ, ಊಬರ್‌ನಂಥ ಈ ಕಾಮರ್ಸ್‌ ವೇದಿಕೆಗಳಿಂದ ಆಟೋ ಬುಕ್‌ ಮಾಡುವ ಗ್ರಾಹಕರಿಗೆ ಇನ್ಮುಂದೆ ದುಬಾರಿ ಶುಲ್ಕ ಬೀಳಬಹುದು.

ಈ ಬದಲಾವಣೆ  ಆಟೋ ರಿಕ್ಷಾ ಚಾಲಕರನ್ನು ರೈಡರ್‌ಗಳೊಂದಿಗೆ (Rider) ಸಂಪರ್ಕಿಸುವ  ಇ-ಕಾಮರ್ಸ್ ಉದ್ಯಮ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.  ಕಡಿಮೆ ವೆಚ್ಚದ ಮತ್ತು ಹೆಚ್ಚು ಅನುಕೂಲಕರ ವ್ಯವಸ್ಥೆಯಿಂದಾಗಿ, ಇ-ಕಾಮರ್ಸ್ ವ್ಯಾಪಾರವು ಪ್ರಯಾಣಿಕರ ಸಾರಿಗೆ ಸೇವೆಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಪಡೆದಿದೆ. ಆದರೆ  ಜಿಎಸ್‌ಟಿ  ವಿನಾಯಿತಿಯನ್ನು ವಾಪಸ್‌ ಪಡೆಯುತ್ತಿರುವುದು ಈ ಸೇವೆಗಳನ್ನು ದುಬಾರಿಯಾಗಿಸಲಿದೆ.

ಒಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್; ಆರಂಭಿಕ ಬೆಲೆ 99,999 ರೂಪಾಯಿ!

ಮತ್ತೊಂದೆಡೆ, ಭಾರತದಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇದು ತಪ್ಪು ಸಂದೇಶವನ್ನು ಕಳುಹಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಉದ್ಯಮಗಳಿಗೆ ಅವಕಾಶ ಒದಗಿಸುವ ಬದಲು, ಇಂತಹ ತೆರಿಗೆಗಳು ಕಂಪನಿಗಳು ಹಿಂದಿರುಗುವಂತೆ ಮಾಡುವ ಸಾಧ್ಯತೆ ಇದೆ. "ಹೊಸದಾಗಿ ಸೇರಿಸಲಾದ ಷರತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬುಕ್ ಮಾಡಲಾದ ರೈಡ್‌ಗಳನ್ನು ಮಾತ್ರ ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ, ಇದರ ಪರಿಣಾಮವಾಗಿ  ಆಫ್‌ಲೈನ್‌ನಲ್ಲಿ ಸೇವೆ ಬಳಸಿದಾಗ  ಅದೇ ಸೇವೆಗೆ ತೆರಿಗೆ ವ್ಯತ್ಯಾಸವಾಗುತ್ತದೆ" ಎಂದು ಇವೈ ಇಂಡಿಯಾ ಟ್ಯಾಕ್ಸ್ ಪಾಟ್ನರ್ (EY India Tax Partner) ಬಿಪಿನ್ ಸಪ್ರಾ ತಿಳಿಸಿದ್ದಾರೆ

ಶಿಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ

ಹೆಚ್ಚುತ್ತಿರುವ ತೈಲೋತ್ಪನ್ನಗಳ ಬೆಲೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದಕ್ಕಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric Vehical)ಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ (Central Govt) ಹಾಗೂ ರಾಜ್ಯ ಸರಕಾರ (State Govt)ಗಳು ಸಾಕಷ್ಟು ಉತ್ತೇಜನವನ್ನು ನೀಡುತ್ತಿವೆ. ಇದರ ಪರಿಣಾಮ ಕಳೆದ ಎರಡ್ಮೂರು ವರ್ಷದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೆಚ್ಚಳವನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹೆದ್ದಾರಿ ರಸ್ತೆ ಸಾರಿಸೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು, ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು, ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬೆಲೆಗೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ. 

2025ರ ಹೊತ್ತಿಗೆ Air Taxi ಸೇವೆ ಆರಂಭಿಸಲಿರುವ ದಕ್ಷಿಣ ಕೊರಿಯಾ!

ಸರಕಾರದ ಭಾರೀ ಉತ್ತೇಜನದ ಹೊರತಾಗಿಯೂ ದುಬಾರಿ ಬೆಲೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಲ್ಲಿ ಜನರು ಖರೀದಿಸುತ್ತಿಲ್ಲ ಎಂಬ ಆರೋಪವಿದೆ. ಆ ಹಿನ್ನನೆಲೆಯಲ್ಲಿ ಗಡ್ಕರಿ ಅವರು ಮಾತುಗಳು ಮಹತ್ವ ಪಡೆದುಕೊಳ್ಳುತ್ತವೆ. ಭಾರತವು ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಿಂದ ಸ್ವಲ್ಪವೇ ದೂರವಿದೆ ಮತ್ತು ಮುಂದಿ ಎರಡು ವರ್ಷಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಪೆಟ್ರೋಲ್, ಡಿಸೇಲ್ ವಾಹನಗಳ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.ಇಂಡಿಯನ್  ಚೇಂಬರ್ಸ್  ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, ಎಲೆಕ್ಟ್ರಿಕ್ ವಾಹನಗಳ ವೆಚ್ಚ ಅಧಿಕವಾಗಿದೆ ಯಾಕೆಂದರೆ, ಅವುಗಳ ಸಂಖ್ಯೆ ಕಡಿಮೆ ಇದೆ. 250ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹೆಚ್ಚು ಅಗ್ಗದಲ್ಲಿ ಇವಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಬಗ್ಗೆ  ಕೆಲಸ ಮಾಡುತ್ತಿವೆ. ಹಾಗಾಗಿ, ಭಾರತವು ಇವಿ ಕ್ರಾಂತಿಯನ್ನು ಎದುರು ನೋಡುತ್ತಿದೆ ಎಂದು ಹೇಳಿದರು. 

Follow Us:
Download App:
  • android
  • ios