MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • IMD Alert: ಮಾರ್ಚ್ 20 ರಿಂದ ಬಿಸಿಗಾಳಿ ಎಚ್ಚರಿಕೆ, ಹಲವು ರಾಜ್ಯಗಳಲ್ಲಿ ಮಳೆ ಮುನ್ಸೂಚನೆ

IMD Alert: ಮಾರ್ಚ್ 20 ರಿಂದ ಬಿಸಿಗಾಳಿ ಎಚ್ಚರಿಕೆ, ಹಲವು ರಾಜ್ಯಗಳಲ್ಲಿ ಮಳೆ ಮುನ್ಸೂಚನೆ

IMD Heatwave Alert 2026: ಈ ಬಾರಿ ಹೋಳಿ ಹಬ್ಬಕ್ಕೂ ಮುನ್ನವೇ ಉತ್ತರ ಮತ್ತು ಮಧ್ಯ ಭಾರತದಲ್ಲಿ ಬೇಸಿಗೆಯ ತಾಪ ತೀವ್ರಗೊಂಡಿದೆ. ಆದರೆ, ಹಬ್ಬದ ಸಂಭ್ರಮದ ನಡುವೆಯೇ ಉತ್ತರ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

1 Min read
Author : Ashwini HR
Published : Mar 03 2026, 11:59 AM IST
Share this Photo Gallery
  • FB
  • TW
  • Linkdin
  • Whatsapp
15
ಆರಂಭದಲ್ಲೇ ಜನರ ಬೆವರಿಳಿಯುತ್ತಿದೆ
Image Credit : Getty

ಆರಂಭದಲ್ಲೇ ಜನರ ಬೆವರಿಳಿಯುತ್ತಿದೆ

ಈ ಬಾರಿ ಉತ್ತರ ಭಾರತದಲ್ಲಿ ಹೋಳಿ ಹಬ್ಬಕ್ಕೂ ಮುನ್ನವೇ ಬೇಸಿಗೆಯು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ವಾಯುವ್ಯ ಮತ್ತು ಮಧ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಏಪ್ರಿಲ್‌ನಲ್ಲಿ ಇರಬೇಕಾದ ಬಿಸಿಲು ಮಾರ್ಚ್ ಆರಂಭದಲ್ಲೇ ಜನರ ಬೆವರಿಳಿಸುತ್ತಿದೆ.

25
ಮಳೆ ಮತ್ತು ಬಿರುಗಾಳಿಯ ಎಚ್ಚರಿಕೆ
Image Credit : Getty

ಮಳೆ ಮತ್ತು ಬಿರುಗಾಳಿಯ ಎಚ್ಚರಿಕೆ

ಹೋಳಿ ಹಬ್ಬಕ್ಕೆ 24 ಗಂಟೆಗಳ ಮೊದಲು ಹವಾಮಾನ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮಾರ್ಚ್ 3 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಅಸ್ಸಾಂ, ಮೇಘಾಲಯದಂತಹ ಈಶಾನ್ಯ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ವಿಶೇಷವೆಂದರೆ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲೂ ಸ್ಥಳೀಯ ಹವಾಮಾನ ಬದಲಾವಣೆಯಿಂದಾಗಿ ಮಳೆಯ ಮುನ್ಸೂಚನೆ ಇದೆ.

Related Articles

Related image1
ರಾಜ್ಯದ ಜನಕ್ಕೆ ಸದ್ಯವೇ ಸಿಗಲಿದೆ ಶಾಕಿಂಗ್ ಸುದ್ದಿ, ಬೇಸಿಗೆ ಆರಂಭದಲ್ಲೇ ವಿದ್ಯುತ್ ದರ ಏರಿಕೆಗೆ ಸಿದ್ಧತೆ!
Related image2
ವಿದ್ಯಾರ್ಥಿಗಳ ಬೇಸಿಗೆ ರಜಾ ಮಜಾ ಕಟ್‌ ಮಾಡದಂತೆ ಕರ್ನಾಟಕದ ಶಾಲೆಗಳಿಗೆ CBSE ಖಡಕ್‌ ಸೂಚನೆ!
35
ಪ್ರಮುಖ ನಗರಗಳಲ್ಲಿ ಹವಾಮಾನ ಹೇಗಿರಲಿದೆ?
Image Credit : Getty

ಪ್ರಮುಖ ನಗರಗಳಲ್ಲಿ ಹವಾಮಾನ ಹೇಗಿರಲಿದೆ?

ದೆಹಲಿ: ಹೋಳಿ ದಿನದಂದು (ಮಾರ್ಚ್ 4) ಆಕಾಶ ಸ್ವಚ್ಛವಾಗಿದ್ದು, ಮಧ್ಯಾಹ್ನ ತಾಪಮಾನ 31 ಡಿಗ್ರಿ ದಾಟಬಹುದು.
ಉತ್ತರ ಪ್ರದೇಶ: ಲಕ್ನೋದಲ್ಲಿ ಸೆಖೆ ಹೆಚ್ಚಿರಲಿದ್ದು, ಗೋರಖ್‌ಪುರ, ಅಜಂಗಢ ಮತ್ತು ಮಿರ್ಜಾಪುರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶ: ಇಲ್ಲಿ ಮಳೆಯ ಸಾಧ್ಯತೆ ತೀರಾ ಕಡಿಮೆ. ಜೈಪುರ ಮತ್ತು ಭೋಪಾಲ್‌ನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಬಿಸಿಲು ತೀವ್ರವಾಗಿರಲಿದೆ.

45
ಮಾರ್ಚ್ 20 ರಿಂದ ಬಿಸಿಗಾಳಿ (Heatwave)
Image Credit : Getty

ಮಾರ್ಚ್ 20 ರಿಂದ ಬಿಸಿಗಾಳಿ (Heatwave)

ಮುಂದಿನ 5 ದಿನಗಳಲ್ಲಿ ಬಯಲು ಪ್ರದೇಶಗಳಲ್ಲಿ ತಾಪಮಾನ ಇನ್ನೂ 2 ರಿಂದ 4 ಡಿಗ್ರಿ ಏರಿಕೆಯಾಗಲಿದೆ. ಮಾರ್ಚ್ 20 ರಿಂದ ಉತ್ತರ ಭಾರತದಲ್ಲಿ ಬಿಸಿಗಾಳಿ (Heatwave) ಬೀಸುವ ಸಾಧ್ಯತೆ ಇರುವುದರಿಂದ, ಜನರು ಹೆಚ್ಚಿನ ನೀರು ಕುಡಿಯಲು ಮತ್ತು ಅನಗತ್ಯವಾಗಿ ಬಿಸಿಲಿಗೆ ಹೋಗದಂತೆ ಜಾಗರೂಕರಾಗಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.

55
ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ
Image Credit : Getty

ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ

ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ (ಬೆಂಗಳೂರು, ಮೈಸೂರು, ಕೊಡಗು ಮತ್ತು ಹಾಸನ ಭಾಗಗಳಲ್ಲಿ) ಸ್ಥಳೀಯ ತೇವಾಂಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಸಂಜೆ ಅಥವಾ ರಾತ್ರಿಯ ವೇಳೆ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸುದ್ದಿ
ಮಳೆ
ಭಾರತ
ಭಾರತ ಸುದ್ದಿ
ಭಾರತೀಯ ಹವಾಮಾನ ಇಲಾಖೆ

Latest Videos
Recommended Stories
Recommended image1
ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
Recommended image2
India Latest News Live: ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!
Recommended image3
ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು: ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?
Related Stories
Recommended image1
ರಾಜ್ಯದ ಜನಕ್ಕೆ ಸದ್ಯವೇ ಸಿಗಲಿದೆ ಶಾಕಿಂಗ್ ಸುದ್ದಿ, ಬೇಸಿಗೆ ಆರಂಭದಲ್ಲೇ ವಿದ್ಯುತ್ ದರ ಏರಿಕೆಗೆ ಸಿದ್ಧತೆ!
Recommended image2
ವಿದ್ಯಾರ್ಥಿಗಳ ಬೇಸಿಗೆ ರಜಾ ಮಜಾ ಕಟ್‌ ಮಾಡದಂತೆ ಕರ್ನಾಟಕದ ಶಾಲೆಗಳಿಗೆ CBSE ಖಡಕ್‌ ಸೂಚನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved