Asianet Suvarna News Asianet Suvarna News

cleft lip surgery: ಮಕ್ಕಳ ಮೊಗದಲ್ಲಿ ನಗು ತಂದ ಡಾಕ್ಟರ್‌.... ಮಾಡಿದ್ದು 37000 ಉಚಿತ ಸರ್ಜರಿ


ಲಖ್ನೋ(ನ.27): ಉತ್ತರಪ್ರದೇಶದ ವೈದ್ಯರೊಬ್ಬರು ಉಚಿತವಾಗಿ ಬರೋಬರಿ 37 ಸಾವಿರ ಸೀಳ್ದುಟಿಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸಾವಿರಾರು ಮಕ್ಕಳ ಮೊಗದಲ್ಲಿ ನಗು ತಂದಿದ್ದಾರೆ. ಪ್ಲಾಸ್ಟಿಕ್‌ ಸರ್ಜನ್‌ ಆಗಿರುವ ಡಾ. ಸುಭೋದ್‌ ಕುಮಾರ್‌ ಸಿಂಗ್‌( Dr Subodh Kumar Singh) ಎಂಬುವವರೇ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಕ್ಕಳು ಖುಷಿಯಾಗಿ ನಗುವಂತೆ ಮಾಡಿದ್ದಾರೆ. 

cleft lip surgery UP doctor made 37000 free surgeory to make kids smile akb
Author
Uttar Pradesh, First Published Nov 27, 2021, 1:43 PM IST

ಇಂದು ಪ್ಲಾಸ್ಟಿಕ್‌ ಸರ್ಜನ್‌ ಆಗಿ ಖ್ಯಾತಿ ಗಳಿಸಿರುವ ಸುಭೋದ್‌ ವೈದ್ಯಕೀಯ ಶಿಕ್ಷಣ ಪಡೆಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಡತನದ ಹಿನ್ನೆಲೆಯಿಂದ ಬಂದ ಅವರು  1979 ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ(medical science)ದ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಕನ್ನಡಕ ಹಾಗೂ ಸೋಪ್‌ಗಳನ್ನು ಮಾರಾಟ ಮಾಡುತ್ತಿದ್ದರಂತೆ. ಬಹುಶಃ ಬಡತನದ ಹಿನ್ನೆಲೆಯಿಂದ ಬಂದ ಕಾರಣಕ್ಕೆ ಬಡವರ ಕಷ್ಟ ಇವರಿಗೆ ಸುಲಭವಾಗಿ ಅರ್ಥವಾಗಿರಬಹುದು. ಹಾಗಾಗಿಯೇ ಇವರು ಸುಮಾರು 37000 ಮಕ್ಕಳಿಗೆ ಉಚಿತ ಸೀಳ್ದುಟಿಯ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ 25  ಸಾವಿರ ಕುಟುಂಬಗಳಲ್ಲಿ ನಗು ಮೂಡಿಸಿದ್ದಾರೆ. ಬಡವರಿಗೆ ಇವರು ಮಾಡಿದ ಸೇವೆ ಈಗ ಎಲ್ಲೆಡೆ ಗುರುತಿಸಲ್ಪಟ್ಟಿದ್ದು, 2009ರಲ್ಲಿ ಇವರಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು. ಜೊತೆಗೆ 2013ರಲ್ಲಿ ಪುರುಷರ ವಿಂಬಲ್ಡನ್‌ ಸಿಂಗಲ್ಸ್‌ನ ಫೈನಲ್‌(Wimbledon Men Singles Final)ಗೆ ಇವರನ್ನು ಅತಿಥಿಯಾಗಿ ಕರೆಸಲಾಗಿತ್ತು.

1979ರಲ್ಲಿ ಸಮರ್ಪಕ ಚಿಕಿತ್ಸೆ ನೀಡಲಾಗದೇ ಇವರು ತಮ್ಮ ತಂದೆ ಗ್ಯಾನ್‌ ಸಿಂಗ್‌( Gyan Singh) ಅವರನ್ನು ಕಳೆದುಕೊಂಡಿದ್ದರು. ತಂದೆಯ ನಿಧನದ ನಂತರ ಇವರಿಗೆ ಆರ್ಥಿಕ ಸಮಸ್ಯೆ ಬಹುವಾಗಿ ಕಾಡಿತ್ತು. ಇವರು ವಾರಾಣಾಸಿಯ ಸಣ್ಣದಾದ ರೈಲ್ವೆ ಕ್ವಾಟ್ರಸ್‌ನ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಈ ಕಷ್ಟದ ದಿನಗಳನ್ನು ಈಗಲೂ ನೆನೆಯುವ ವೈದ್ಯ ಸುಭೋದ್‌ ಸಿಂಗ್, 'ತಂದೆಯ ಸಾವಿನ ನಂತರ ನಮಗೆ ಗ್ರಾಚ್ಯುಟಿಯಾಗಿ ಏನು ಹಣ ಸಿಕ್ಕಿತ್ತೋ ಅದೆಲ್ಲವನ್ನು ಸಾಲ ತೀರಿಸಲು ನೀಡಬೇಕಾಯಿತು. ಜೀವನ ಸಾಗಣೆಗಾಗಿ ನಾನು ನನ್ನ ಅಣ್ಣನ ಜೊತೆ ಸೇರಿ ಮನೆಯಲ್ಲೇ ತಯಾರಿಸಿದ ಸೋಪ್‌ಗಳನ್ನು ಮಾರಾಟ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಅದರ ಹಣವನ್ನು ಕೇಳಿದಾಗ ನಮ್ಮನ್ನು ಅವಮಾನಿಸಿದರು. ನಂತರದಲ್ಲಿ ಸಹಾನುಭೂತಿಯ ಆಧಾರದ ಮೇಲೆ ನನ್ನ ಅಣ್ಣನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಆದರೆ ಕುಟುಂಬವನ್ನು ನಿರ್ವಹಿಸಲು ಆ ಹಣ ಸಾಕಾಗುತ್ತಿರಲಿಲ್ಲ ಎಂದು  ತಾವು ಪಟ್ಟ ಕಷ್ಟದ ದಿನಗಳನ್ನು ಸುಭೋದ್ ನೆನೆದರು. 


Deepika - Alia: ಪ್ಲಾಸ್ಟಿಕ್‌ ಸರ್ಜರಿ ಮೊರೆ ಹೋಗದ ಸುಂದರಿಯರು!

ನನ್ನ ಬಳಿ ಬರುವ ಪ್ರತಿಯೊಬ್ಬ ಸೀಳ್ದುಟಿಯ ಮಗುವಿನಲ್ಲೂ ನಾನು ನನ್ನನ್ನೆ ಕಾಣುವೆ(13ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಚಿಕ್ಕ ವಯಸ್ಸಿನ ಸುಭೋದ್). ನನ್ನ ತಂದೆ ಗ್ಯಾನ್‌ ಸಿಂಗ್‌ ಹಾಗೂ ತಾಯಿ ಗಿರಿರಾಜ್‌ ಕುಮಾರಿ(Girirajkumari) ನನಗೆ  ಬಡವರಿಗೆ ಸೇವೆ ಸಲ್ಲಿಸುವ ಜೊತೆ ನೈತಿಕವಾಗಿ ಜೀವನ ಮಾಡುವುದಕ್ಕೆ ಹೇಳಿ ಕೊಟ್ಟಿದ್ದಾರೆ. ಒಂದು ಒಳ್ಳೆಯ ಕಾರ್ಯಕ್ಕಾಗಿ ದೇವರು ನನ್ನನ್ನು ಬ್ಯುಸಿನೆಸ್‌ ಮ್ಯಾನ್‌ ಬದಲಾಗಿ ಪ್ಲಾಸ್ಟಿಕ್‌ ಸರ್ಜನ್(plastic surgeon) ಆಗಿ ಮಾಡಿದ್ದಾರೆ ಎಂದು ಸುಭೋದ್ ಹೇಳಿದರು.

ನಗುವಿನ ಪ್ರಯಾಣ

ಸೀಳ್ದುಟಿ(cleft lip)ಯ ಸಮಸ್ಯೆಯೂ ಹುಟ್ಟಿನಿಂದಲೇ ಬರುವ ಸಮಸ್ಯೆಯಾಗಿದೆ. ಬಾಯಿಯನ್ನು ಆಗಾಗ ತೆರೆಯುವುದರಿಂದ ಇದು ಹೆಚ್ಚಾಗಬಹುದು. ಈ ಸಮಸ್ಯೆಯಿಂದ ತಿನ್ನಲು ಹಾಗೂ ಮಾತನಾಡಲು ಕಷ್ಟವಾಗುತ್ತದೆ. 2002ರಿಂದ ಡಾ. ಸುಭೋದ್ ಸಿಂಗ್‌ ತಮ್ಮ ತಂದೆಯ ಮರಣದ ಸ್ಮರಣೆಯ ಸಲುವಾಗಿ ಉಚಿತ ಚಿಕಿತ್ಸಾ ವಾರವನ್ನು ಆರಂಭಿಸಿದರು. ಸ್ಮೈಲ್‌ ಟ್ರೈನ್‌ ಪ್ರಾಜೆಕ್ಟ್‌ನ (The Smile Train project) ಭಾಗವಾಗಿ 2003-04ರಿಂದ ಸೀಳ್ದುಟಿಯ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದರು. (ಸ್ಮೈಲ್‌ ಟ್ರೈನ್‌ ಪ್ರಾಜೆಕ್ಟ್‌ ಜಾಗತಿಕವಾಗಿ ಅತೀ ಹೆಚ್ಚುಸೀಳ್ದುಟಿಯ ಶಸ್ತ್ರಚಿಕಿತ್ಸೆ ಮಾಡುವ ಸಂಸ್ಥೆಯಾಗಿದೆ).  ಪ್ರಾರಂಭದಲ್ಲಿ ಡಿಸೆಂಬರ್‌ 2005ರ ಒಳಗಾಗಿ 2500 ಉಚಿತ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಇಟ್ಟುಕೊಂಡಿದ್ದೆವು. ಸ್ಟೈಲ್‌ ಟ್ರೈನ್‌ ಇಂಡಿಯಾ ತಂಡವೂ ನಮ್ಮ ಗುರಿಯನ್ನು ಮಹತ್ವಾಕಾಂಕ್ಷಿಯಾಗಿಸಿ 2005ರ ಅಂತ್ಯಕ್ಕೆ 500 ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡುವಂತೆ ಕೇಳಿ ಕೊಂಡಿತು. ಆದರೆ ನಾವು 2004 ಅಂತ್ಯಕ್ಕೆ ಈ ಗುರಿಯನ್ನು ತಲುಪಿದೆವು. ಹಾಗೂ  ಮುಂದಿನ ವರ್ಷದ ಅಂತ್ಯದ ವೇಳೆ 2500  ಉಚಿತ  ಶಸ್ತ್ರಚಿಕಿತ್ಸೆಯ ಗುರಿಯನ್ನು ಪೂರ್ಣಗೊಳಿಸಿದ್ದೆವು. 2008-09ರಿಂದ ವಾರ್ಷಿಕವಾಗಿ ನಾವು 4 ಸಾವಿರಕ್ಕೂ ಅಧಿಕ ಉಚಿತ ಸೀಳ್ದುಟಿಯ ಚಿಕಿತ್ಸೆಯನ್ನು ಈ ಸಂಸ್ಥೆಯಡಿ ನಡೆಸುತ್ತಿದ್ದೇವೆ ಎಂದರು.

ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

ಪ್ಲಾಸ್ಟಿಕ್‌ ಸರ್ಜನ್‌ಗಳು, ಸಾಮಾಜಿಕ ಕಾರ್ಯಕರ್ತರು, ಪೌಷ್ಟಿಕಾಂಶ ತಜ್ಞರು ಇವರ ತಂಡದಲ್ಲಿದ್ದಾರೆ. ನಾವು ಕೇವಲ ಜನ್ಮತ ಬಂದಂತಹ ವಿರೂಪವನ್ನು ಬದಲಾಯಿಸಿದ್ದೇವೆ. ಜೊತೆಗೆ ಸೀಳ್ದುಟಿಯ ಮಗುವನ್ನು ಹೆತ್ತ ಕಾರಣಕ್ಕೆ ಹೆಂಡತಿಯರನ್ನು ಬಿಟ್ಟು ಹೋದ  ಗಂಡ ಹಾಗೂ ಕುಟುಂಬವನ್ನು ಒಂದು ಮಾಡಿದ್ದೇವೆ ಎಂದು ಹೇಳಿದರು. ಕೇಂದ್ರಿಕೃತವಾದ ಪೌಷ್ಟಿಕ ಆರೈಕೆಯಿಂದ ಅಪೌಷ್ಠಿಕತೆಗೆ ಒಳಗಾಗಿದ್ದ ಹಲವು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಸುಭೋದ್‌ ಸಿಂಗ್‌ ತಮ್ಮ ಸಾಧನೆಯ ಮೆಲುಕು ಹಾಕಿದರು.

Follow Us:
Download App:
  • android
  • ios