ನೌಕಾ ಪಡೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಹೆಮ್ಮೆಯ ಯೋಧನಿಗೆ ಪತ್ನಿ ವೆಲ್ಕಮ್ ಮೈ ಹೀರೋ ಎಂದು ಸ್ವಾಗತ ಕೋರಿದ್ದಾರೆ. ಪತ್ನಿಯ ಭಾವುಕ ಸ್ವಾಗತಕ್ಕೆ ಯೋಧನ ಕಣ್ಣಾಲಿ ತೇವಗೊಂಡಿತ್ತು. ಭಾವುಕ ಕ್ಷಣ ಇಲ್ಲಿದೆ.
ನೌಕಾ ಪಡೆಯಲ್ಲಿ ಕಳೆದ 15 ವರ್ಷ ಶಿಸ್ತು, ತ್ಯಾಗ, ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ ಯೋಧ ನಿವತ್ತಿಯಾಗಿದ್ದಾರೆ. ನೌಕಾ ಪಡೆಯಲ್ಲಿ ನಿವೃತ್ತಿಯಾಗಿ ಮನೆಗೆ ಮರಳಿದ ಯೋಧನಿಗೆ ಪತ್ನಿ ಭಾವುಕ ಸ್ವಾಗತ ಕೋರಿದ್ದಾರೆ. ವೆಲ್ಕಮ್ ಮೈ ಹೀರೋ ಎಂದು ಪತ್ನಿಯನ್ನು ಸ್ವಾಗತಿಸಿದ್ದಾರೆ. ಪತ್ನಿಯ ಭಾವುಕ ಹಾಗೂ ಸರ್ಪ್ರೈಸ್ ಸ್ವಾಗತಕ್ಕೆ ಯೋಧನ ಕಣ್ಣಾಲಿ ತೇವಗೊಂಡ ಘಟನೆ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಯೋಧನ ಸೇವೆಗೆ ದೇಶವೆ ಸಲ್ಯೂಟ್ ನೀಡಿದೆ.
ರಾಹುಲ್ ಮಧ್ವಾಲ್ ಕಳೆದ 15 ವರ್ಷಗಳಿಂದ ನೌಕಾಪಡೆಯಲ್ಲಿ ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಕಾರ್ಯಾಚರಣೆಯಲ್ಲಿ ಭಾಗವಾಗಿದ್ದರು. ಲಾಜಿಸ್ಟಿಕ್ ಆಫೀಸರ್ ಆಗಿ ಸೇವೆ ಸಲ್ಲಿಸಿದ ರಾಹುಲ್, ನೌಕಾ ಪಡೆಯ ಲಾಜಿಸ್ಟಿಕ್ ಸೇವೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 15 ವರ್ಷಗಳ ಸೇವೆ ಬಳಿಕ ರಾಹುಲ್ ಮಧ್ವಾಲ್ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ನಿವೃತ್ತಿಯಾಗಿ ಮನೆಗೆ ಮರಳಿದ ಯೋಧನಿಗೆ ಪತ್ನಿ ಶಿವಾನಿ ಬುಧಕೋಟಿ ಅದ್ಧೂರಿ ಹಾಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ತಿಲಕವಿಟ್ಟು ಗಂಡನಿಗೆ ಸ್ವಾಗತ
ಲಗೇಜ್ ಜೊತೆ ಮನೆಗೆ ಮರಳಿದ ಯೋಧನಿಗೆ ವೆಲ್ಕಮ್ ಮೈ ಹೀರೋ ಎಂದು ಪತ್ನಿ ಸ್ವಾಗತಿಸಿದ್ದಾರೆ. ಮನೆಯ ಬಾಗಿಲ ಬಳಿ ರಿಬ್ಬನ್ ಕಟ್ಟಿದ್ದಾರೆ. ಇನ್ನು ಮನೆಗೆ ಆಗಮಿಸಿದ ಯೋಧನ ಲಗೇಜ್ ಪಡೆದಿದ್ದಾಳೆ. ಬಳಿಕ ಗಂಡನ ಹಣೆಗೆ ತಿಲಕವಿಟ್ಟು, ಆರತಿ ಮೂಲಕ ಸ್ವಾಗತಿಸಿದ್ದಾರೆ. ಮನೆಯ ಬಾಗಿಲ ಬಳಿ ಕಟ್ಟಿದ್ದ ರಿಬ್ಬನ್ ಕತ್ತರಿಸಿ ಮನೆ ಪ್ರವೇಶಿಸಿದ ಗಂಡನ ಪ್ರೀತಿಯಿಂದ ಅಪ್ಪಿಕೊಂಡ ಪತ್ನಿ ಶಿವಾನಿ ಅತ್ಮೀಯ ಸ್ವಾಗತ ನೀಡಿದ್ದಾರೆ. ಈ ವೇಳೆ ಪತ್ನಿಯ ಸ್ವಾಗತ ಪುಟ್ಟ ಮಗನ ಅಪ್ಪುಗೆಯಲ್ಲಿ ಯೋಧನ ಕಣ್ಣಾಲಿ ತೇವಗೊಂಡಿದೆ.
ಪತ್ನಿ ಹಾಗೂ ಮಗುವಿನ ಜೊತೆ ಕೇಕ್ ಕಟ್ಟಿಂಗ್
ಪತ್ನಿ ಹಾಗೂ ಮಗುವಿನ ಜೊತೆ ಕೇಕ್ ಕತ್ತರಿಸಿದ ರಾಹುಲ್ ಮಧ್ವಾಲ್ ಮನೆಯಲ್ಲಿ ನೆರೆದಿದ್ದ ಆಪ್ತರು, ಕುಟಂಬಸ್ಥರಿಗೆ ಸಿಹಿ ಹಂಚಿದ್ದಾರೆ. ಪತ್ನಿಯ ಭಾವುಕ ಸ್ವಾಗತ, ಕುಟುಂಬಸ್ಥರ ಪ್ರೀತಿಗೆ ರಾಹುಲ್ ಮಧ್ವಾಲ್ ಬದುಕಿನ ಸುಂದರ ಕ್ಷಣಗಳಾಗಿತ್ತು. ಈ ಕುರಿತು ಭಾವುಕರಾಗಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. 2011ರಲ್ಲಿ ನೌಕಾ ಪಡೆ ಸೇರಿಕೊಂಡ ರಾಹುಲ್, ಲಾಜಿಸ್ಚಿಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

