ರಸ್ತೆ ದಾಟುತ್ತಿದ್ದ ಹುಲಿಗೆ ಹುಂಡೈ ಕ್ರೇಟಾ ಡಿಕ್ಕಿ: ನೋವಿನಿಂದ ನರಳಾಡಿ ಪ್ರಾಣ ಬಿಟ್ಟ ರಾಷ್ಟ್ರೀಯ ಪ್ರಾಣಿ
ವೇಗವಾಗಿ ಬಂದ ಹುಂಡೈ ಕ್ರೇಟಾ ಕಾರು ರಸ್ತೆ ದಾಟುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಹುಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದು ಸ್ವಲ್ಪ ಹೊತ್ತಿನ ನಂತರ ಪ್ರಾಣ ಬಿಟ್ಟಿದೆ.
ಮಹಾರಾಷ್ಟ್ರ: ರಕ್ಷಿತಾರಣ್ಯದ ನಡುವೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಿದ್ದರೆ ಅಲ್ಲಿ ಯಾವುದೇ ವಾಹನಗಳಲ್ಲಿ ಅತೀ ವೇಗದಿಂದ ಹೋಗುವಂತಿಲ್ಲ, ಅರಣ್ಯದೊಳಗೆ ವಾಹನ ಚಾಲನೆಯ ಗರಿಷ್ಠ ವೇಗ ಗಂಟೆಗೆ 40 ಗಂಟೆ ಮಾತ್ರ. ಇಷ್ಟೆಲ್ಲಾ ನಿಯಮಗಳಿದ್ದರೂ ವಾಹನ ಚಾಲಕನೋರ್ವನ ಅಜಾಗರೂಕತೆಯಿಂದಾಗಿ ವನ್ಯಜೀವಿ, ರಾಷ್ಟ್ರೀಯ ಪ್ರಾಣಿ ಹುಲಿಯೊಂದು ಜೀವ ಕಳೆದುಕೊಳ್ಳುವಂತಾಗಿದೆ. ವೇಗವಾಗಿ ಬಂದ ಹುಂಡೈ ಕ್ರೇಟಾ ಕಾರು ರಸ್ತೆ ದಾಟುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಹುಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದು ಸ್ವಲ್ಪ ಹೊತ್ತಿನ ನಂತರ ಪ್ರಾಣ ಬಿಟ್ಟಿದೆ. ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2023ರಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಈಗ ವೈರಲ್ ಆಗಿದ್ದು, ಪ್ರಾಣಿ ಹಾಗೂ ಪರಿಸರ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತದ ನಂತರದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಆಕ್ಸಿಡೆಂಡ್ ಬಳಿಕ ಕಾರು ಮುಂದೆ ಹೋಗಿ ನಿಂತಿದ್ದರೆ, ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಹುಲಿ ಕುಸಿದು ಬಿದ್ದಿದ್ದು, ನಂತರ ನಡೆಯಲಾಗದಿದ್ದರೂ ಹೊರಳುತ್ತಾ ಕುಂಟುತ್ತಾ ರಸ್ತೆಯ ಮತ್ತೊಂದು ಪಕ್ಕಕ್ಕೆ ಹೋಗಿ ಕಾಡಿನೊಳಗೆ ಸೇರಿದೆ.
ಛೇ... ಲ್ಯಾಂಡಿಂಗ್ ವೇಳೆ ಪ್ಲೆಮಿಂಗೊ ಹಕ್ಕಿಗಳ ಹಿಂಡಿಗೆ ಬಡಿದ ವಿಮಾನ: 40 ಪ್ಲೆಮಿಂಗೊಗಳ ದಾರುಣ ಸಾವು
ಈ ಹೃದಯ ಹಿಂಡುವ ಘಟನೆ ಸುಂದರವಾದ ನವೆಗಾಂವ್ ನಾಗ್ಜಿರಾ ಅಭಯಾರಣ್ಯದ ಮಧ್ಯೆ ಹಾದುಹೋಗುವ ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದ ನಂತರ ಹುಲಿಯನ್ನು ಉಳಿಸುವ ಪ್ರಯತ್ನ ಮಾಡಲಾಯ್ತದರೂ ಅದಿ ಪ್ರಾಣ ಕಳೆದುಕೊಂಡಿದೆ ಎಂದು ವರದಿ ಆಗಿದೆ. ಹುಲಿ ಅಪಘಾತದಲ್ಲಿ ಗಾಯಗೊಂಡ ವಿಚಾರ ತಿಳಿದ ರಕ್ಷಣಾ ತಂಡ ಹುಲಿಯನ್ನು ಹಿಡಿದು ನಾಗಪುರಕ್ಕೆ ಚಿಕಿತ್ಸೆ ನೀಡುವುದಕ್ಕಾಗಿ ಸಾಗಿಸಿದೆ. ಆದರೆ ಅದು ಮಾರ್ಗಮಧ್ಯೆಯೇ ಪ್ರಾಣ ಬಿಟ್ಟಿದೆ ಎಂದು ವರದಿ ಆಗಿದೆ.
ರಾಷ್ಟ್ರೀಯ ಹೆದ್ದಾರಿಯ ಎನ್‌ಹೆಚ್ 753ರಲ್ಲಿ ಈ ಘಟನೆ ನಡೆದಿದ್ದು, ಇದು ದಟ್ಟ ಕಾಡಿರುವ ಪ್ರದೇಶವಾಗಿದೆ. ಇಲ್ಲಿ ಹೆಚ್ಚೆಂದರೆ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಮಾತ್ರ ವಾಹನ ಚಲಾಯಿಸಬೇಕು ಎಂಬ ನಿಯಮವಿದೆ. ಆದರೂ ಕಾರು ಚಾಲಕನ ಅಜಾಗರೂಕ ಚಾಲನೆಯಿಂದಾಗಿ ಮಾತು ಬಾರದ ಮೂಕ ಪ್ರಾಣಿಯೊಂದು ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿದೆ.
ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹೆದ್ದಾರಿ, ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ಫೋಟೋ ವೈರಲ್
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನ ಕಾರು ಚಾಲಕನ ಅಜಾಗರೂಕತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಂಥಹಾ ಬೇಸರದ ವಿಚಾರವಿದು, ಏಕೆ ಜನ ಕಾಡಿನ ಮಧ್ಯೆ ವೇಗವಾಗಿ ಗಾಡಿ ಓಡಿಸುತ್ತಾರೆ. ನೀವು ಚಾಣಾಕ್ಷ ಚಾಳಕ ಅಲ್ಲದಿದ್ದರೆ ಗಾಡಿ ಓಡಿಸುವ ಸಾಹಸ ಮಾಡಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರಾತ್ರಿ ವೇಳೆ ರಕ್ಷಿತಾರಣ್ಯದ ಒಳಗೆ ಸಾಗುವ ರಸ್ತೆಗಳನ್ನು ಮುಚ್ಚಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಗರೀಕರಣದ ಪರಿಣಾಮ ಕಾಡು ಪ್ರಾಣಿಗಳು ವನ್ಯಜೀವಿಗಳು ತಮ್ಮ ಆವಾಸ ಸ್ಥಾನಗಳನ್ನು ಕಳೆದುಕೊಂಡು ನೆಲೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಜೊತೆಗೆ ಕಾಡಿನ ನಡುವೆ ನಿರ್ಮಾಣವಾದ ರಸ್ತೆಗಳು ಪ್ರಾಣಿಗಳ ಜೀವಕ್ಕೆ ಸಂಚಾಕಾರ ತರುತ್ತಿವೆ. ಜೊತೆಗೆ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿವೆ.
ವಿಮಾನ ಡಿಕ್ಕಿಯಾಗಿ 40ಕ್ಕೂ ಹೆಚ್ಚು ಪ್ಲೇಮಿಂಗೋ ಹಕ್ಕಿಗಳ ಸಾವು
ಎರಡು ದಿನದ ಹಿಂದಷ್ಟೇ ಮುಂಬೈನಲ್ಲಿ ಲ್ಯಾಂಡಿಂಗ್ ವೇಳೆ ಪ್ಲೆಮಿಂಗೋ ಹಕ್ಕಿಗಳ ಹಿಂಡಿಗೆ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ 40ಕ್ಕೂ ಹೆಚ್ಚು ಪ್ಲೆಮಿಂಗೋಗಳು ಪ್ರಾಣ ಕಳೆದುಕೊಂಡ ಘಟನೆ ನಡೆದಿತ್ತು. ಈ ಘಟನೆಗೂ ಪರಿಸರ ಪ್ರಿಯರು ಭಾರಿ ಬೇಸರ ವ್ಯಕ್ತಪಡಿಸಿದ್ದರು. ಬೇಜಾವಾಬ್ದಾರಿಯುತ ನಗರೀಕರಣದ ಪರಿಣಾಮ ವನ್ಯಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.