ಛೇ... ಲ್ಯಾಂಡಿಂಗ್ ವೇಳೆ ಪ್ಲೆಮಿಂಗೊ ಹಕ್ಕಿಗಳ ಹಿಂಡಿಗೆ ಬಡಿದ ವಿಮಾನ: 40 ಪ್ಲೆಮಿಂಗೊಗಳ ದಾರುಣ ಸಾವು
ಮುಂಬೈ: ವಿಮಾನ ಡಿಕ್ಕಿಯಾಗಿ 40 ಪ್ಲೆಮಿಂಗೋ ಹಕ್ಕಿಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಸೋಮವಾರ ಸಂಜೆ ಇಲ್ಲಿನ ಘಾಸ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ಮುಂಬೈ: ವಿಮಾನ ಡಿಕ್ಕಿಯಾಗಿ 40 ಪ್ಲೆಮಿಂಗೋ ಹಕ್ಕಿಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಸೋಮವಾರ ಸಂಜೆ ಇಲ್ಲಿನ ಘಾಸ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ವಿಮಾನ ಡಿಕ್ಕಿ: ಮುಂಬೈನಿಂದ ಗುಜರಾತ್‌ನತ್ತ ತೆರಳುತ್ತಿದ್ದ ಪ್ಲೆಮಿಂಗೋಗಳ ಗುಂಪಿಗೆ ಸೋಮವಾರ ಸಂಜೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಎಮಿರೇಟ್ಸ್ ಸಂಸ್ಥೆಯ ವಿಮಾನ ಡಿಕ್ಕಿ ಹೊಡೆದಿದೆ. ವಿಮಾನ ಸುರಕ್ಷಿತವಾಗಿ ಇಳಿದರೂ ಕನಿಷ್ಠ 40 ಹಕ್ಕಿಗಳು ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿ ಕೆಳಗೆ ಉರುಳಿಬಿದ್ದಿವೆ.
ಮುಂಬೈ ನಗರಕ್ಕೆ ಪಿಂಕ್ ಬಣ್ಣ ಬಳಿದ ಸಾವಿರಾರು ಫ್ಲೆಮಿಂಗೊಗಳು
ಪ್ರತಿ ವರ್ಷ ಗುಜರಾತ್‌ನಿಂದ 1 ಲಕ್ಷದಷ್ಟು ಪ್ಲೆಮಿಂಗೋಗಳು ಮುಂಬೈನ ಥಾಣೆ ಸಮೀಪದ ಪ್ಲೆಮಿಂಗೋ ಪಕ್ಷಿ ತಾಣಕ್ಕೆ ಬಂದು ನೆಲೆಸುತ್ತವೆ. ಅಲ್ಲಿಂದ ಮರಳಿ ಗುಜರಾತ್‌ಗೆ ಸಂಚರಿಸುತ್ತವೆ. ಹಾಗೆಯೇ ನಿನ್ನೆ ಗುಜರಾತ್‌ಗೆ ಮರಳುವ ವೇಳೆ ಈ ದುರಂತ ನಡೆದಿದೆ. ಇದೇ ವೇಳೆ ಗೊತ್ತುಗುರಿಯಲ್ಲದ ನಗರೀಕರಣವು, ವಲಸೆ ಹಕ್ಕಿಗಳ ಆವಾಸ ಸ್ಥಾನವನ್ನೇ ಹಾಳು ಮಾಡುತ್ತಿರುವುದಲ್ಲದೇ ಅವುಗಳ ಪ್ರಾಣಕ್ಕೂ ಸಂಚಾರ ತರತೊಡಗಿದೆ ಎಂದು ಪರಿಸರ ತಜ್ಞರು ಮತ್ತು ಪ್ರಾಣಿ ಪ್ರೇಮಿಗಳು ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನವಿ ಮುಂಬೈನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡಾ ಮುಂದಿನ ದಿನಗಳಲ್ಲಿ ಇಂಥದ್ದೇ ಘಟನೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.