ನನ್ ಹೆಂಡ್ತಿನೂ ಹೀಗೆ ಕೈ ಹಿಡಿದಿಲ್ಲ ಎಂದ ಗಾಯಕ: ಬನ್ನಿ ಕೈ ಹಿಡಿದು ಕಮಲ ಮುಡಿಸುವೆ ಎಂದ ಸಚಿವ
ಭಾರತೀಯ ಜನತಾ ಪಕ್ಷದ (BJP) ನಾಯಕರಾಗಿರುವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರು, ಇತ್ತೀಚೆಗೆ ಈಶಾನ್ಯ ರಾಜ್ಯದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಸ್ಸಾಂ ಸಿಎಂ ಆಗಿರುವ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಕೈಯನ್ನು ಹಿಡಿದುಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗಾಲ್ಯಾಂಡ್: ಇಲ್ಲಿನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದಿರುತ್ತಾರೆ. ಸದಾ ಒಂದಿಲ್ಲೊಂದು ತಮಾಷೆಯ ಹಾಸ್ಯಕ್ಕೆ ಎಡೆಮಾಡುವ ಪೋಸ್ಟ್‌ಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ. ಇದರ ಜೊತೆ ಈಶಾನ್ಯ ರಾಜ್ಯ ನಾಗಲ್ಯಾಂಡ್‌ನ ಕಲೆ ಸಂಸ್ಕೃತಿ ಪರಂಪರೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಮಾಡುವ ಮೂಲಕ ದೇಶದ ಇತರೆಡೆಗೆ ನಾಗಲ್ಯಾಂಡ್ ಸಂಸ್ಕೃತಿಯ ಅರಿವು ಮೂಡಿಸುತ್ತಿರುತ್ತಾರೆ. ಮೂಲತಃ ಹಾಸ್ಯ ಪ್ರವೃತಿಯವರಾದ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರ ಪೋಸ್ಟ್‌ನಲ್ಲಿ ಸದಾ ಏನಾದರೂ ಮೊಗದಲ್ಲಿ ನಗು ಮೂಡಿಸುವ ಅಂಶ ಇರುತ್ತದೆ. ಇದೇ ಕಾರಣಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಇವರ ಫೋಟೋವನ್ನು ಗಾಯಕ ಅಲೋಬೋ ನಾಗಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಕಾಮೆಂಟ್ ಮಾಡಿದ್ದು, ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.
ಅಂದಹಾಗೆ ಭಾರತೀಯ ಜನತಾ ಪಕ್ಷದ (BJP) ನಾಯಕರಾಗಿರುವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರು, ಇತ್ತೀಚೆಗೆ ಈಶಾನ್ಯ ರಾಜ್ಯದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಸ್ಸಾಂ ಸಿಎಂ ಆಗಿರುವ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಕೈಯನ್ನು ಹಿಡಿದುಕೊಂಡಿರುವ ಫೋಟೋವೊಂದನ್ನು ಗಾಯಕ ಅಲೋಬೋ ನಾಗಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನನ್ನ ಹೆಂಡ್ತಿ ಕೂಡ ಇಷ್ಟೊಂದು ಗಟ್ಟಿಯಾಗಿ ಕೈ ಹಿಡಿದಿಲ್ಲ, ನನಗೆ ಈ ಫೋಟೋ ನೋಡಿ ಅಸೂಯೆಯಾಗುತ್ತಿದೆ ಎಂದು ಬರೆದುಕೊಂಡು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹಾಗೂ ನಾಗಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ನಿಜವಾದ ಮದುವೆಯ ಪ್ರಭಾವಕ್ಕಿಂತಲೂ ಪಕ್ಷದ ಅಲೆ ಜೋರಾಗಿದೆ, ಅಲೋಬೋ ನಾಗ (Alobo Naga) ಅವರೇ ನೀವು ಬಿಜೆಪಿಗೆ ಬನ್ನಿ ನಿಮ್ಮ ಕೈಯನ್ನು ಹೀಗೆ ಗಟ್ಟಿಯಾಗಿ ಹಿಡಿದುಕೊಳ್ಳುವೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ನಾಗಾಲ್ಯಾಂಡ್ ನಲ್ಲಿದೆ ಅಧ್ಬುತ ಸೌಂದರ್ಯ ಅಡಗಿರೋ ಮಿನಿ ಸ್ವಿಟ್ಜರ್ಲ್ಯಾಂಡ್…
ಸಚಿವರ ಪ್ರತಿಕ್ರಿಯಿಸಿದ ಬಳಿಕ ಈ ಪೋಸ್ಟ್‌ನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 7,300 ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಅನೇಕರು ಪಕ್ಷದ ಪರವಾಗಿ ವಿವಿಧ ರಾಜ್ಯಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳುವಂತೆ ಅವರಿಗೆ ಮನವಿ ಮಾಡಿದ್ದಾರೆ. ಒಬ್ಬ ಬಳಕೆದಾರನಂತೂ ದಯವಿಟ್ಟು ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದು, ಸಾಧ್ಯವಾದರೆ ನಿಮ್ಮ ಜೊತೆಗೊಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವೆ ಎಂದು ಮನವಿ ಮಾಡಿದ್ದಾನೆ. ಮತ್ತೊಬ್ಬರು ನಿಮಗೆ ನಿಜವಾಗಿಯೂ ಹಾಸ್ಯದ ಗುಣವಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ತ್ರಿಪುರಾದಲ್ಲಿ ಈಗಾಗಲೇ ಮತದಾನ ನಡೆದಿದೆ. ಇತರ ಎರಡು ರಾಜ್ಯಗಳಲ್ಲಿ ಫೆಬ್ರವರಿ 27 ರಂದು ಮತದಾನ ನಡೆಯಲಿದೆ. ಮಾರ್ಚ್ 2 ರಂದು ಮೂರು ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಿಲಿದೆ.
ಈ ಮನೆ ಅರ್ಧ ಭಾರತ, ಇನ್ನರ್ಧ ಮ್ಯಾನ್ಮಾರ್‌ನಲ್ಲಿ: ಮ್ಯಾನ್ಮಾರ್‌ನಲ್ಲಿ ಊಟ, ಭಾರತದಲ್ಲಿ ನಿದ್ದೆ..!
ಎಂಟು ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ಅರುಣಾಚಲ ಪ್ರದೇಶ(Arunachal Pradesh), ಮಣಿಪುರ (Manipur) ಮತ್ತು ತ್ರಿಪುರಾದಲ್ಲಿ (Tripura) ಪ್ರಸ್ತುತ ಬಿಜೆಪಿ ಸರ್ಕಾರವಿದೆ. ಮಿಜೋರಾಂ ಮತ್ತು ಸಿಕ್ಕಿಂ ಅನ್ನು ಎನ್‌ಡಿಎ ಮಿತ್ರಪಕ್ಷಗಳು ಆಳುತ್ತಿವೆ. ಮೇಘಾಲಯ (Meghalaya) ಮತ್ತು ನಾಗಾಲ್ಯಾಂಡ್‌ನಲ್ಲಿ(Nagaland), ಬಿಜೆಪಿ ಸರ್ಕಾರದ ಭಾಗವಾಗಿತ್ತು ಆದರೆ ಪ್ರಾದೇಶಿಕ ಆಟಗಾರರು ಅಲ್ಲಿ ಭಾರಿ ಪ್ರಾಬಲ್ಯ ಹೊಂದಿದ್ದಾರೆ.