ನಾಗಾಲ್ಯಾಂಡ್ ನಲ್ಲಿದೆ ಅಧ್ಬುತ ಸೌಂದರ್ಯ ಅಡಗಿರೋ ಮಿನಿ ಸ್ವಿಟ್ಜರ್ಲ್ಯಾಂಡ್…
ನಾಗಾಲ್ಯಾಂಡ್ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಮಂತ್ರಮುಗ್ಧಗೊಳಿಸುವ ಕಣಿವೆಗಳೇ ತುಂಬಿರುವ ಈ ಪ್ರದೇಶವು ಅದ್ಭುತ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಹೊಸ ಅನುಭವವನ್ನು ಪಡೆಯಲು ಬಯಸುವ ಪ್ರವಾಸಿಗರು ಈ ಸುಂದರತಾಣಕ್ಕೆ ಯಾವಾಗ ಬೇಕಾದರೂ ಭೇಟಿ ನೀಡಬಹುದು.

ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ ನಾಗಲ್ಯಾಂಡ್ (Nagaland), ಇಲ್ಲೊಂದು ಪುಟ್ಟ ಸ್ವಿಟ್ಜರ್ ಲ್ಯಾಂಡ್ (Mini Switzerland) ಇದೆ ಅನ್ನೋದು ನಿಮಗೆ ಗೊತ್ತಾ? ನಾಗಾಲ್ಯಾಂಡ್‌ನ ಅನೇಕ ಅಸಂಘಟಿತ ಪಟ್ಟಣ ಮತ್ತು ಹಳ್ಳಿಗಳು ಟ್ರಾವೆಲ್ ಮಾಡೋರಿಗೆ ಹೇಳಿ ಮಾಡಿಸಿದ ತಾಣ. ಈ ರಾಜ್ಯದ ಸ್ಥಳೀಯ ನಿವಾಸಿಗಳಾದ ಸಾಂಪ್ರದಾಯಿಕ ನಾಗಾ ಜನರು ವಿಶ್ವದ ಅಪರೂಪದ ಸ್ಥಳೀಯ ಬುಡಕಟ್ಟು-ಜನರಲ್ಲಿ ಒಬ್ಬರು. ಇವರ ಜೀವನದ ಬಗ್ಗೆಯೂ ನಿಮಗೆ ಸಾಕಷ್ಟು ಮಾಹಿತಿ ಸಿಗುತ್ತೆ.
ನಾಗಲ್ಯಾಂಡ್ ನಲ್ಲಿ ನೀವು ನೋಡಬೇಕಾದ್ದು ಬಹಳಷ್ಟಿದೆ. ಅದರಲ್ಲೂ ನಾಗಾಲ್ಯಾಂಡ್‌ನ ಪುಟ್ಟ ಸ್ವಿಟ್ಜರ್ಲ್ಯಾಂಡ್ ಎಂದು ಸ್ಥಳೀಯರಲ್ಲಿ ಜನಪ್ರಿಯವಾದ ಪ್ಲುಟ್ಸೆರೊ ರಾಜ್ಯದ ಅತಿ ಹೆಚ್ಚು ಜನವಸತಿ ಹೊಂದಿರುವ ಪಟ್ಟಣವಾಗಿ ಮಾರ್ಪಟ್ಟಿದೆ. ಈ ಸುಂದರ ತಾಣದ ಬಗ್ಗೆ ನೀವು ತಿಳಿದುಕೊಳ್ಳೋದು ಬಹಳಷ್ಟಿದೆ.
ಪ್ಲುಟ್ಸೆರೊ (Pfutsero)
ನಾಗಾಲ್ಯಾಂಡ್‌ನ ಪ್ಲುಟ್ಸೆರೊ ಪಟ್ಟಣವು ಸಮುದ್ರ ಮಟ್ಟದಿಂದ ಸುಮಾರು 7000 ಅಡಿ ಎತ್ತರದಲ್ಲಿದೆ, ಇಲ್ಲಿ ಚಳಿಗಾಲದಲ್ಲಿ ತಾಪಮಾನ ಶೂನ್ಯವಾಗಿರುತ್ತದೆ. ಆದರೆ ಇದರರ್ಥ ವರ್ಷದ ಉಳಿದ ಅವಧಿಯಲ್ಲಿ, ರಾಜ್ಯದ ಇತರ ಸ್ಥಳಗಳಿಗೆ ಹೋಲಿಸಿದರೆ, ಫುಟ್ಸೆರೊದಲ್ಲಿನ ಹವಾಮಾನ ಪ್ರಯಾಣಿಸಲು ಅತ್ಯಂತ ಆಹ್ಲಾದಕರವಾಗಿರುತ್ತದೆ.
ಗ್ಲೋರಿ ಪೀಕ್ (Glory Peak)
ಇದಲ್ಲದೆ ಈ ಪಟ್ಟಣವು ಕೆಲವು ಚಾರಣಕ್ಕೆ ಹೇಳಿ ಮಾಡಿಸಿದ ಸುಂದರ ತಾಣಗಳನ್ನು ಹೊಂದಿದೆ, ಗ್ಲೋರಿ ಪೀಕ್ ಎಂದು ಕರೆಯಲ್ಪಡುವ ಫುಟ್ಸೆರೊದ ಅತ್ಯುನ್ನತ ಸ್ಥಳಕ್ಕೆ ಚಾರಣ ಮಾಡಿದ್ರೆ, ನೀವು ನಿಮ್ಮನ್ನೆ ಮರೆತು ಬಿಡುವಿರಿ. ಕಣಿವೆಯ ವಿಹಂಗಮ ನೋಟಗಳನ್ನು ನೀಡುವ ಗ್ಲೋರಿ ಶಿಖರವು ನಾಗಾ ಪರ್ವತಗಳ ಸುಂದರವಾದ ದೃಶ್ಯಗಳನ್ನು ನೀಡುತ್ತೆ. ಈ ತಾಣಕ್ಕೆ ನೀವು ಟೆಂಟ್ ಒಯ್ಯುತ್ತಿದ್ದರೆ, ಕ್ಯಾಂಪ್ ಕೂಡ ಮಾಡಬಹುದು ಮತ್ತು ವ್ಯೂಪಾಯಿಂಟಿನಲ್ಲಿ ಉಚಿತವಾಗಿ ಫೈರ್ ಕ್ಯಾಂಪ್ ಕೂಡ ಮಾಡಬಹುದು.
ಫುಟ್ಸೆರೊದ ಹೊರಭಾಗದಲ್ಲಿ ಕೆಲವು ಗುಹೆಗಳಿವೆ, ಅವುಗಳಲ್ಲಿ ಎರಡು ಜನಪ್ರಿಯವಾದವುಗಳೆಂದರೆ ಜಪಾನೀಸ್ ಗುಹೆ ಮತ್ತು ಮಿರಾಕಲ್ ಗುಹೆ ಕ್ರಮವಾಗಿ ಸುಮಾರು 3 ಕಿ.ಮೀ ಮತ್ತು 8 ಕಿ.ಮೀ ದೂರದಲ್ಲಿದೆ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಆಶ್ರಯ ಪಡೆದ ಜಪಾನಿನ ಗುಹೆಯಾಗಿದೆ.
ಅಲ್ಲಿಗೆ ಹೋಗುವುದು ಹೇಗೆ?
ಕೊಹಿಮಾದಿಂದ ಕಿಫೈರ್ ಗೆ ನಿಯಮಿತ ಬೆಳಗ್ಗೆ ಬಸ್ ಇದೆ, ಪ್ಲುಟ್ಸೆರೊ ದಾರಿಯಲ್ಲಿ ಬರುತ್ತೆ. ಆದರೆ ಅಲ್ಲಿಗೆ ಹೋಗಲು ಉತ್ತಮ, ತ್ವರಿತ ಮತ್ತು ಅತ್ಯಂತ ಸುಲಭ ಮಾರ್ಗವೆಂದರೆ ಶೇರ್ ಟ್ಯಾಕ್ಸಿ (share taxi). ಕೊಹಿಮಾದಿಂದ, ಶೇರ್ಡ್ ಟ್ಯಾಕ್ಸಿ ಪ್ರತಿ ಟ್ರಿಪ್‌ಗೆ ಒಬ್ಬ ವ್ಯಕ್ತಿಗೆ ಸುಮಾರು 200 ರೂಪಾಯಿಗಳನ್ನು ತೆಗೆದುಕೊಳ್ಳುತ್ತದೆ. ನಾಗಾಲ್ಯಾಂಡ್‌ನ ರಸ್ತೆ ಯಾವಾಗಲೂ ಭಯಾನಕ ಸ್ಥಿತಿಯಲ್ಲಿರುವುದರಿಂದ ಕೊಹಿಮಾ ಮತ್ತು ಫುಟ್ಸೆರೊ ನಡುವೆ ಪ್ರಯಾಣಿಸಲು ಸುಮಾರು 3 ಗಂಟೆ ಸಮಯ ತೆಗೆದುಕೊಳ್ಳಬಹುದು. ಮಾನ್ಸೂನ್ ಸಮಯದಲ್ಲಿ, ಇದು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಯಾಕಂದ್ರೆ ಈ ಸಮಯದಲ್ಲಿ ಭೂಕಂಪ ಕೂಡ ಉಂಟಾಗಬಹುದು.
ಎಲ್ಲಿ ಉಳಿಯಬೇಕು? (where to stay)
ಫುಟ್ಸೆರೊದಲ್ಲಿ ರಾತ್ರಿ ಕಳೆಯಲು ಸಾಕಷ್ಟು ಸ್ಥಳಗಳಿವೆ, ಮುಖ್ಯ ಕೇಂದ್ರದ ಸುತ್ತಲೂ ನಡೆದರೆ ಸಾಕಷ್ಟು ಟೂರಿಸ್ಟ್ ಲಾಡ್ಜ್ ಸಿಗುತ್ತೆ. ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಭಾಗಶಃ ಕಾರ್ಯನಿರ್ವಹಿಸುತ್ತಿರುವ ಮಿನಿ ಟೂರಿಸ್ಟ್ ಲಾಡ್ಜ್ ಕೂಡ ಇದೆ. ಇಲ್ಲಿಂದ ಸುತ್ತಲಿನ ಪ್ರದೇಶಗಳ ಸೌಂದರ್ಯ ಕೂಡ ಕಾಣಬಹುದು. ಡಬಲ್ ಬೆಡ್ ರೂಮ್ ಗೆ 800 ರೂ., ಉಪಾಹಾರ ಮತ್ತು ಮಧ್ಯಾಹ್ನ/ರಾತ್ರಿಯ ಊಟಕ್ಕೆ 120 ಮತ್ತು 150 ರೂ. ಪಾವತಿಸಿದ್ರೆ ಸಾಕು.
ಎಲ್ಲಿ ತಿನ್ನಬೇಕು, ಮತ್ತು ಏನು ತಿನ್ನಬೇಕು? (what to eat)
ನೀವು ಹೊರಗೆ ತಿನ್ನಲು ಯೋಜಿಸುತ್ತಿದ್ದರೆ, ಫುಟ್ಸೆರೊದಲ್ಲಿ ತಿನ್ನುವ ಆಯ್ಕೆಗಳು ಎಂದರೆ ಹಂದಿಮಾಂಸ, ಮೀನು ಅಥವಾ ಚಿಕನ್ ಮಾತ್ರ ಯಥೇಚ್ಚವಾಗಿ ದೊರೆಯುತ್ತೆ. ಆದಾಗ್ಯೂ, ಸಸ್ಯಾಹಾರಿಗಳಿಗೆ, ದಾಲ್ ಮತ್ತು ಅನ್ನ ಮತ್ತು ಸ್ವಲ್ಪ ಲೆಟ್ಯೂಸ್ ಮಾತ್ರ ತಿನ್ನಲು ಸಾಧ್ಯವಾಗುತ್ತೆ.
ಸುತ್ತಲೂ ಏನು ನೋಡಬೇಕು?
ಗ್ರಾಮೀಣ ನಾಗಾಲ್ಯಾಂಡ್ ನ (rural Nagaland) ಸೌಂದರ್ಯ ಅನುಭವಿಸಲು, ಅದರ ಸಂಪ್ರದಾಯಗಳನ್ನು ಅನ್ವೇಷಿಸಲು ಮತ್ತು ಸಣ್ಣ ಪಟ್ಟಣಗಳಲ್ಲಿ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿನ ಜನರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ಕಂಡುಹಿಡಿಯಲು ಬಯಸುವವರಿಗೆ ಪ್ಲುಟ್ಸೆರೊ ಖಂಡಿತವಾಗಿಯೂ ಬೆಸ್ಟ್ ತಾಣವಾಗಿದೆ.
ಸ್ಥಳೀಯ ಡ್ರಿಂಕ್ಸ್ ಆನಂದಿಸುವಲ್ಲಿ ಆಸಕ್ತಿ ಹೊಂದಿರುವವರಿಗೆ, ಒಂದು ಲೋಟ ಅಕ್ಕಿ ಬಿಯರ್ (rice beer), ಅಥವಾ ORS (ಅಚ್ಚುಕಟ್ಟಾದ ಸ್ಥಳೀಯ ವಿಸ್ಕಿ)ಟ್ರೈ ಮಾಡಬಹುದು. ದೈತ್ಯ 1.1 ಲೀಟರ್ ಅಕ್ಕಿ ಬಿಯರ್ ಬೆಲೆ ಫುಟ್ಸೆರೊದಲ್ಲಿ (ಮತ್ತು ಹೆಚ್ಚಿನ ಸಣ್ಣ ಪಟ್ಟಣಗಳಲ್ಲಿ) ಕೇವಲ 30 ರೂಪಾಯಿ ಮಾತ್ರ, ಆದರೆ ಹಾರ್ನ್ಬಿಲ್ ಉತ್ಸವದಲ್ಲಿ ಕೇವಲ 200 ಎಂಎಲ್‌ನ ಇದೇ ರೀತಿಯ ಡ್ರಿಂಕ್ಸ್ ಬೆಲೆ 50 ರೂಪಾಯಿ.
ಜೂನ್ ಮತ್ತು ಆಗಸ್ಟ್ ನ ಮಾನ್ಸೂನ್ ತಿಂಗಳುಗಳ ನಡುವೆ ಫುಟ್ಸೆರೊಗೆ ಭೇಟಿ ನೀಡುವುದನ್ನು ತಪ್ಪಿಸಿ, ಏಕೆಂದರೆ ರಸ್ತೆ ಸಂಪರ್ಕಗಳು ನಿಯಮಿತ ಭೂಕುಸಿತಕ್ಕೆ (landslide) ಹೆಚ್ಚು ಒಳಗಾಗುತ್ತವೆ, ಇದು ಪ್ರಯಾಣವನ್ನು ಅಪಾಯಕಾರಿ ಮತ್ತು ಅಹಿತಕರ ಅನುಭವ ನೀಡುತ್ತೆ. ನೀವು ಚಳಿಗಾಲದಲ್ಲಿ ಪ್ರಯಾಣಿಸುತ್ತಿದ್ದರೆ ಸಾಕಷ್ಟು ಉಣ್ಣೆ ಬಟ್ಟೆಗಳನ್ನು ಒಯ್ಯಿರಿ, ಏಕೆಂದರೆ ನಾಗಾಲ್ಯಾಂಡ್ ಅತ್ಯಂತ ತಂಪಾದ ಸ್ಥಳವಾಗಿರುವುದರಿಂದ, ಇಲ್ಲಿನ ತಾಪಮಾನವು ಹೆಚ್ಚಾಗಿ ಶೂನ್ಯಕ್ಕಿಂತ ಕಡಿಮೆಯಾಗುತ್ತದೆ, ರಾತ್ರಿಯ ಸಮಯದಲ್ಲಿ ಆಗಾಗ್ಗೆ ಹಿಮಪಾತವಾಗುತ್ತದೆ. ಇನ್ನು ನಾಗಾಲ್ಯಾಂಡ್ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ಮತ್ತು ಮೇ ನಡುವಿನ ಅವಧಿ.