ಈ ಮನೆ ಅರ್ಧ ಭಾರತ, ಇನ್ನರ್ಧ ಮ್ಯಾನ್ಮಾರ್‌ನಲ್ಲಿ: ಮ್ಯಾನ್ಮಾರ್‌ನಲ್ಲಿ ಊಟ, ಭಾರತದಲ್ಲಿ ನಿದ್ದೆ..!
ಈ ಮನೆ ಅರ್ಧ ಭಾರತ, ಇನ್ನರ್ಧ ಮ್ಯಾನ್ಮಾರ್‌ನಲ್ಲಿದೆ. ಹಾಗೂ, ಈ ಊರಿನ ಗ್ರಾಮಸ್ಥರಿಗೆ ದ್ವಿಪೌರತ್ವವಿದೆ. ಭಾರತ ಸಂವಿಧಾನದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿದ್ದರೂ, ಇದೊಂದು ಅಪವಾದ.
ಕೊಹಿಮಾ: ಭಾರತದ ಸಂವಿಧಾನ ತನ್ನ ಯಾವುದೇ ಪ್ರಜೆಗಳಿಗೆ ದ್ವಿಪೌರತ್ವ ನೀಡಲ್ಲ. ಆದರೆ ಈ ನಿಯಮಕ್ಕೂ ಒಂದು ಅಪವಾದ ಇದೆ. ಈ ಗ್ರಾಮದ ಜನರಿಗೆ ವಿನಾಯಿತಿ ಇದೆ. ಭಾರತ ಮತ್ತು ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಲಾಂಗ್ವಾ ಗ್ರಾಮದ ಜನರಿಗೆ ಭಾರತ ಮತ್ತು ಮ್ಯಾನ್ಮಾರ್ ಎರಡೂ ದೇಶಗಳ ಪೌರತ್ವ ಇದೆ. ಹೌದು, ಈ ಹಳ್ಳಿಯ ನಡುವೆಯೇ ಉಭಯ ದೇಶಗಳ ಗಡಿ ರೇಖೆ ಹಾದು ಹೋಗಿದೆ. ಹೀಗಾಗಿ ಗ್ರಾಮದ ನೂರಾರು ಜನರಿಗೆ ದ್ವಿಪೌರತ್ವ ನೀಡಲಾಗಿದೆ. ಇದಕ್ಕಿಂತ ಅಚ್ಚರಿ ಎಂದರೆ ಅಂಗ್ ಎಂದು ಕರೆಯಲ್ಪಡುವ ಗ್ರಾಮದ ಮುಖ್ಯಸ್ಥನ ಮನೆ ನಡುವೆಯೇ ಗಡಿ ರೇಖೆ ಹಾದು ಹೋಗುತ್ತದೆ. ಪರಿಣಾಮ ಈತನ ಮನೆಯ ಒಂದು ಭಾಗ ಭಾರತದ ಗಡಿಯೊಳಗೆ ಬಂದರೆ, ಮತ್ತೊಂದು ಭಾಗ ಮ್ಯಾನ್ಮಾರ್‌ಗೆ ಸೇರುತ್ತದೆ. ಹೀಗಾಗಿ ಮ್ಯಾನ್ಮಾರ್ ಭಾಗದಲ್ಲಿ ಬರುವ ಅಡುಗೆ ಮನೆಯಲ್ಲಿ ಊಟ ಸಿದ್ಧಪಡಿಸಿ, ಅದನ್ನು ಅಲ್ಲೇ ಮಾಡಿ, ಭಾರತದ ಭಾಗದಲ್ಲಿ ಬರುವ ಕೋಣೆಯಲ್ಲಿ ಮಲಗುತ್ತಾರೆ.
ಲಾಂಗ್ವಾ ಗ್ರಾಮವು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ದೊಡ್ಡ ಹಳ್ಳಿಗಳಲ್ಲಿ ಒಂದಾಗಿದೆ ಮತ್ತು ಭಾರತ ಹಾಗೂ ಮ್ಯಾನ್ಮಾರ್‌ನ ಗಡಿಗೆ ಹತ್ತಿರದಲ್ಲಿದೆ. ವಾಸ್ತವವಾಗಿ, ಅಂತಾರಾಷ್ಟ್ರೀಯ ಗಡಿಯು ನೇರವಾಗಿ ಆಂಗ್ ಎಂದು ಕರೆಯಲ್ಪಡುವ ಗ್ರಾಮದ ಮುಖ್ಯಸ್ಥನ ಮನೆಯ ಮೂಲಕ ಹಾದುಹೋಗುತ್ತದೆ. ಅಂಗ್ ಅವರ ಮನೆಯಲ್ಲಿ, ಮಲಗುವ ಕೋಣೆಗಳು ಭಾರತಕ್ಕೆ ಸೇರುತ್ತದೆ. ಆದರೆ ಅಡುಗೆ ಮನೆಯಂತಹ ಇತರ ಕೊಠಡಿಗಳು ಮ್ಯಾನ್ಮಾರ್‌ಗೆ ಸೇರುತ್ತವೆ. ಹಾಗಾಗಿ ಈ ಮನೆಗೆ ಸೇರಿದವರು ಮ್ಯಾನ್ಮಾರ್‌ನಲ್ಲಿ ಊಟ ಮುಗಿಸಿ ಭಾರತದಲ್ಲಿ ಮಲಗುತ್ತಾರೆ ಎಂಬುದು ವಿಶೇಷ.
ಇದನ್ನು ಓದಿ: ಇವಳೇನು ಅರ್ಜುನನ ತಂಗಿಯೇ... ಬಿಲ್ಲಿನಂತೆ ಬಾಗಿ ಕಾಲಿನಲ್ಲೇ ಯುವತಿಯ ಬಿಲ್ಗಾರಿಕೆ
ಈ ಗ್ರಾಮದಲ್ಲಿ ಕೊನ್ಯಾಕ್ ನಾಗಾ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, ಇದು ಒಂದು ಕಾಲದಲ್ಲಿ ತಲೆಯನ್ನು ಕಡಿಯುವ ಸಂಪ್ರದಾಯವನ್ನು ಅನುಸರಿಸುತ್ತಿತ್ತು. ಕೊನ್ಯಾಕ್ ನಾಗಾಗಳು ಮತ್ತು ಬರ್ಮಾದ ಭಾಗದ ನಡುವಿನ ಬಲವಾದ ಸಾಂಸ್ಕೃತಿಕ ಮತ್ತು ಕೌಟುಂಬಿಕ ಸಂಬಂಧಗಳು ಲಾಂಗ್ವಾ ಗ್ರಾಮದ ನಿವಾಸಿಗಳಿಗೆ ಉಭಯ ಪೌರತ್ವವನ್ನು ನೀಡಲು ಸರ್ಕಾರಗಳಿಗೆ ಅವಕಾಶ ಮಾಡಿಕೊಟ್ಟಿವೆ.
ಜನವರಿ 11, 2023 ರಂದು ಅಂದರೆ ಬುಧವಾರ, ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಈ ವಿಶೇಷ ಗ್ರಾಮದ ಬಗ್ಗೆ ಆಸಕ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್ನು, ಈ ಟ್ವಿಟ್ಟರ್ ಪೋಸ್ಟ್ ಹೆಚ್ಚು ವೈರಲ್ ಆಗಿದ್ದು, ಈ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್, ಕಮೆಂಟ್‌ಗಳು ಬಂದಿವೆ. ಈ ಪೋಸ್ಟ್‌ಗೆ ಟ್ವಿಟ್ಟರ್ ಬಳಕೆದಾರರೊಬ್ಬರು, “ಮ್ಯಾನ್ಮಾರ್ ಒಂದು ಕಾಲದಲ್ಲಿ 7 ಸಹೋದರಿಯರ ಸಹೋದರ” ಎಂದು ಪೋಸ್ಟ್ ಮಾಡಿದ್ದಾರೆ. ಹಾಗೆ, ಇನ್ನೊಬ್ಬ ವ್ಯಕ್ತಿ ‘’ಅನನ್ಯ. ಆದರೆ ಈ ಬುಡಕಟ್ಟು ಅಥವಾ ಈ ಸಮುದಾಯವನ್ನು ಮೇಲೆತ್ತಬೇಕಾಗಿದೆ. ಈಶಾನ್ಯ ಭಾಗದ ಜನರಲ್ಲಿ ಅಡಗಿರುವ ಪ್ರತಿಭೆಯನ್ನು ಜಗತ್ತಿಗೆ ತಿಳಿಸೋಣ. ಅವರಿಗೆ ಉತ್ತಮ ರಸ್ತೆಗಳು ಮತ್ತು ಮೂಲಸೌಕರ್ಯಗಳ ಅಗತ್ಯವಿದೆ. ಜಾಗತಿಕ ಭೂಪಟದಲ್ಲಿ ಸಂಪೂರ್ಣ ಈಶಾನ್ಯವನ್ನು ನೋಡಲು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೂತ್ರ ವಿಸರ್ಜನೆ ಬಳಿಕ ಲವ್ ಪ್ರಪೋಸಲ್‌ನಿಂದ ಸುದ್ದಿಯಾದ ಏರ್ ಇಂಡಿಯಾ