Asianet Suvarna News Asianet Suvarna News

ಗ್ಯಾಂಗ್‌ಸ್ಟಾರ್ ಅತೀಕ್, ಅಶ್ರಫ್‌ ಹತ್ಯೆ: ಕರ್ತವ್ಯಲೋಪದ ಕಾರಣಕ್ಕೆ 5 ಪೊಲೀಸರ ಅಮಾನತು

ಮಾಫಿಯಾ ಡಾನ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಹತ್ಯೆ ಸಮಯದಲ್ಲಿದ್ದ 5 ಪೊಲೀಸ್‌ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರ ಅಶ್ರಫ್‌ ತನಿಖೆಗೆಂದು ರಚಿಸಿರುವ ಎಸ್‌ಐಟಿ, ಈ ಅಧಿಕಾರಿಗಳು ತಮ್ಮ ಕೆಲಸದ ವೇಳೆಯಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ವರದಿ ನೀಡಿದೆ.

Murder of gangster Atiq, Ashraf 5 Uttar Pradesh  policemen suspended for dereliction of duty akb
Author
First Published Apr 20, 2023, 11:00 AM IST

ಪ್ರಯಾಗ್‌ರಾಜ್‌: ಮಾಫಿಯಾ ಡಾನ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಹತ್ಯೆ ಸಮಯದಲ್ಲಿದ್ದ 5 ಪೊಲೀಸ್‌ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರ ಅಶ್ರಫ್‌ ತನಿಖೆಗೆಂದು ರಚಿಸಿರುವ ಎಸ್‌ಐಟಿ, ಈ ಅಧಿಕಾರಿಗಳು ತಮ್ಮ ಕೆಲಸದ ವೇಳೆಯಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ವರದಿ ನೀಡಿದೆ. ಈ ಕಾರಣವಾಗಿ ಅಲ್ಲಿದ್ದ ಐವರು ಶಾಹಗಂಜ್‌ ಪೊಲೀಸ್‌ ಠಾಣೆಯ ಅಶ್ವನಿ ಕುಮಾರ್‌ ಸಿಂಗ್‌ ಸೇರಿ ಐವರು ಪೊಲೀಸರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಕಾಂಗ್ರೆಸ್‌ ನಾಯಕನಿಂದ ಅತೀಕ್‌ ಸಮಾಧಿಗೆ ರಾಷ್ಟ್ರಧ್ವಜ

ಈ ಮಧ್ಯೆ ಹತ್ಯೆಗೀಡಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ (Athiq ahmed) ಮತ್ತು ಆತನ ಸೋದರ ಅಶ್ರಫ್‌ನ ಸಮಾಧಿಯ ಮೇಲೆ ರಾಷ್ಟ್ರಧ್ವಜ ಹೊದಿಸಿ, ಅಮರರಾಗಿ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (video viral) ಆಗಿದೆ. ಅತೀಕ್‌ ಹಾಗೂ ಅಶ್ರಫ್‌ ಸಮಾಧಿಗೆ ಬುಧವಾರ ಭೇಟಿ ನೀಡಿದ ರಾಜ್‌ಕುಮಾರ್‌ ರಾಜು ಸಮಾಧಿಯ ಮೇಲೆ ರಾಷ್ಟ್ರಧ್ವಜ ಇರಿಸಿ, ‘ಅತೀಕ್‌ ಭಾಯ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಅತೀಕ್‌ ಮತ್ತು ಅಶ್ರಫ್‌ಗೆ ಗೌರವ ಕೊಡಿಸುವುದಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ರಾಜು, ಅತೀಕ್‌ನನ್ನು ಹುತಾತ್ಮ ಎಂದು ಕರೆದಿದ್ದರು.

ಏಕತೆಯ ಅಗತ್ಯವನ್ನು ಎತ್ತಿ ಹಿಡಿದ ಅತೀಖ್‌ ಅಹ್ಮದ್‌ ಹತ್ಯೆ: ಇದೇ ನಾವು ಕಲಿಯಬೇಕಿರೋ ಪಾಠ!

ಮಾನವ ಹಕ್ಕು ಆಯೋಗ ನೋಟಿಸ್‌

ಪೊಲೀಸರ ಬೆಂಗಾವಲಿದ್ದಾಗಲೇ ಗ್ಯಾಂಗ್‌ಸ್ಟರ್‌, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಸಹೋದರ ಅಶ್ರಫ್‌ರ ಕೊಲೆ ಹೇಗಾಯಿತು. ಈ ಕುರಿತು ನಾಲ್ಕು ವಾರಗಳೊಳಗಾಗಿ ವರದಿ ನೀಡಿ ಎಂದು  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಪೊಲೀಸರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಿನಗಳ ಹಿಂದೆ ನೋಟಿಸ್‌ ನೀಡಿತ್ತು. ಅಲ್ಲದೇ ಕೊಲೆಯ ಕುರಿತ ಎಲ್ಲಾ ಆಯಾಮಗಳು, ಮೃತರ ವೈದ್ಯಕೀಯ ವರದಿ, ವಿಚಾರಣಾ ವರದಿ, ಮರಣೋತ್ತರ ಪರೀಕ್ಷಾ (PostMortem report) ವರದಿ ಹಾಗೂ ಅದರ ವೀಡಿಯೋಗಳನ್ನು ಒದಗಿಸಬೇಕೆಂದು ಸೂಚಿಸಿದೆ.

ಅತೀಕ್ ಅಹಮ್ಮದ್ ವಕೀಲನ ಮನೆ ಮೇಲೆ ಬಾಂಬ್ ಎಸೆತ, ಯುಪಿಯಲ್ಲಿ ಮತ್ತೆ ಸೇಡಿನ ಸಮರ!

Follow Us:
Download App:
  • android
  • ios