Delhi Lok Sabha Constituency: ಹೇಗಿದೆ ಚಾಂದಿನಿ ಚೌಕ್, ನವದೆಹಲಿ ಲೋಕಸಭಾ ಕ್ಷೇತ್ರದ ಲೆಕ್ಕಾಚಾರ?

ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಚಾಂದಿನಿ ಚೌಕ್.  ಇದು ತುಂಬ ಹಳೇ ಕ್ಷೇತ್ರ. ಹಾಗೂ ಅಮ್ಮನ ವರ್ಚಸ್ಸು, ಐದು ವರ್ಷಗಳ ಶ್ರಮ, ಮೋದಿಯವರ ಬ್ರಾಂಡ್ ಇವೆಲ್ಲಾವುಗಳ ಸಂಗಮವೇ ಕಮಲದ ಗೆಲುವಿನ ಗುಟ್ಟು ಹೀಗೆನ್ನುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಬಾನ್ಸೂರಿ ಸ್ವರಾಜ್.

Lokasabha Election 2024 How is the calculation of Chandni Chowk And New Delhi Lok Sabha constituency gvd

ಚಾಂದಿನಿ ಚೌಕ್ ಕ್ಷೇತ್ರ: ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಚಾಂದಿನಿ ಚೌಕ್.  ಇದು ತುಂಬ ಹಳೇ ಕ್ಷೇತ್ರ. ದಟ್ಟ ಜನಸಾಂದ್ರತೆ ಇರುವ ಪಾರಂಪರಿಕ ಕಟ್ಟಡಗಳಿಂದ ಸುತ್ತುವರದಿರುವ ಕ್ಷೇತ್ರ. ಪ್ರಸಿದ್ದ ಚಾಂದಿನಿ ಚೌಕ್ ಮಾರುಕಟ್ಟೆ, ಕೆಂಪುಕೋಟೆ ಸೇರಿದಂತೆ ಹಲವು ಸ್ಮಾರಕಗಳು ಈ ಕ್ಷೇತ್ರದಲ್ಲಿ ಬರಲಿವೆ. ಹೆಚ್ಚು ಜನದಟ್ಟಣೆಯಂತೆ ವಾಹನಗಳ ಸಂಚಾರ ದಟ್ಟಣೆಯೂ ಇದೆ. ಹಳೇ ದೆಹಲಿಯ ಭಾಗದ ಕ್ಷೇತ್ರಗಳಲ್ಲಿ ಇದು ಕೂಡ ಒಂದು. ಕಳಪೆ ಮೂಲಸೌಕರ್ಯಗಳು, ನೀರಿನ ಸಮಸ್ಯೆ, ಅನಧಿಕೃತ ಕಟ್ಟಡಗಳು ಇಲ್ಲಿನ ಸಮಸ್ಯೆಗಳ ಚಿತ್ರಣ. ದೇಶದ ಮೊದಲ ಚುನಾವಣೆಯಿಂದ 2024 ರ ಚುನಾವಣೆಯ ತನಕ ಚಾಂದಿನಿ ಚೌಕ್ ಕ್ಷೇತ್ರ, ಸಂಸತ್ ಕ್ಷೇತ್ರವಾಗಿದೆ. 15 ಲೋಕಸಭಾ ಚುನಾವಣೆಗಳಿಗೆ ಇದು ಸಾಕ್ಷಿಯಾಗಿದೆ. 

ಚಾಂದಿನಿ ಚೌಕ್ ಎಂದ್ರೆ ಮಾರುಕಟ್ಟೆಗಳಿಂದ ಸುತ್ತುವರೆದಿರುವ ಪ್ರದೇಶ. ಈ ಮಾರುಕಟ್ಟೆಯಲ್ಲಿ ಮೂರು, ನಾಲ್ಕು ತಲೆಮಾರುಗಳ ಅಂಗಡಿಗಳು ಇಲ್ಲಿ ಇವೆ. ಹೆಚ್ಚು ವ್ಯಾಪಾರ ನಡೆಯುವ ಸ್ಥಳವೂ ಕೂಡ. ದೆಹಲಿಯ ಹಳೇ ಕ್ಷೇತ್ರಕ್ಕೆ ನಾಲ್ಕು ದಶಕಗಳ ಇತಿಹಾಸ ಇರುವ 79 ವರ್ಷದ ಜೈ ಪ್ರಕಾಶ್ ಅಗರವಾಲ್ ಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದೆ. ದೆಹಲಿ ಪಾಲಿಕೆಯ ಸದಸ್ಯರಾಗಿ ಉಪ ಮೇಯರ್ ತನಕ ಹುದ್ದೆಗೇರಿದ್ದ ಅಗರವಾಲ್ ಅವರಿಗೆ ಕಾಂಗ್ರೆಸ್ ಎಂ ಪಿ ಟಿಕೆಟ್ ನೀಡಿ ಲೋಸಭೆಗೆ ತಂದು ಕೂರಿಸಿತು. ಬಳಿಕ ರಾಜ್ಯಸಭಾ ಸದಸ್ಯರು ಕೂಡ ಆಗಿದ್ರು. ಕಪಿಲ್ ಸಿಬಲ್ ಕೂಡ ಒಮ್ಮೆ ಕ್ಷೇತ್ರದ ಸಂಸದರಾಗಿದ್ರು. 

ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ ಪ್ರಧಾನಿ ಮೋದಿ: ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯಿಂದ  ಸಂಸದ ಡಾ.ಹರ್ಷ ವರ್ಧನ್ ಅವರಿಗೆ ಬಿಜೆಪಿ ಎರಡು ಬಾರಿ ಟಿಕೆಟ್ ನೀಡಿತ್ತು. ಡಾಕ್ಟರ್ ಇಲ್ಲಿಂದ ಎರಡು ಬಾರಿ ಗೆದ್ದಿದ್ರು. ಕೇಂದ್ರದಲ್ಲಿ ಮಂತ್ರಿಯಾಗಿದ್ರು. ಈ ಬಾರಿ ಬಿಜೆಪಿ ಹರ್ಷ ವರ್ಧನ್ ಅವರಿಗೂ ಟಿಕೆಟ್ ನಿರಾಕರಿಸಿದೆ.  ಇತ್ತ ಬಿಜೆಪಿ ಬಿಜಿನೆಸ್ ಮ್ಯಾನ್ ಕಂ ಕಾನೂನು ಪದವೀಧರ ಪ್ರವೀಣ್ ಖಂಡೇವಾಲ ಅವರಿಗೆ ಟಿಕೆಟ್ ನೀಡಿದೆ. CAIT ಸೆಕ್ರೆಟರಿ ಜನರಲ್ ಆಗಿದ್ದ ಖಂಡೇವಾಲ, ಜಿಎಸ್ ಟಿ ಪ್ಯಾನಲ್ ಕೂಡ ಕೆಲಸ ಮಾಡಿದ್ದಾರೆ. ಜಿಎಸ್ ಟಿ ಯಿಂದ ಆಗುವ ತೊಂದರೆಗಳ ನಿವಾರಣೆಗೆ ಕೆಲಸ ಮಾಡಿದ್ದಾರೆ. ಆಪ್ 'ಕೈ' ಜೊತೆ ಈಗ ಕೈ ಜೋಡಿಸಿದೆ. ಹಳೇ ವರ್ಚಸ್ಸಿನ ಅಸ್ತ್ರ ಝಳಪಿಸಲು ಇಬ್ಬರು ಕೂಡ ಮುಂದಾಗಿದ್ದಾರೆ. ಇತ್ತ ಮೋದಿ, ಸಿಎಎ ನಂಬಿಕೊಂಡು ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದಾರೆ. ಹರ್ಷ ವರ್ಧನ್ ಅವರಿಗೆ ಎರಡು ಬಾರಿ ಸಿಕ್ಕಿದ್ದ ಗೆಲುವು ಮರಳಿ ಪಡೆಯಲು ಕಮಲ ಪಕ್ಷದ ಅಭ್ಯರ್ಥಿ ಯತ್ನ ಮುಂದುವರೆಸಿದ್ದಾರೆ. ಹೊಸ ಆಲೋಚನೆಯಲ್ಲಿರುವ ದೆಹಲಿ ಮತದಾತ ಯಾರ ಕೈ ಹಿಡಿಯುತ್ತಾನೆ ಅನ್ನೋದು ನೋಡಬೇಕು.

ನವದೆಹಲಿ ಕ್ಷೇತ್ರ: ಅಮ್ಮನ ವರ್ಚಸ್ಸು, ಐದು ವರ್ಷಗಳ ಶ್ರಮ, ಮೋದಿಯವರ ಬ್ರಾಂಡ್ ಇವೆಲ್ಲಾವುಗಳ ಸಂಗಮವೇ ಕಮಲದ ಗೆಲುವಿನ ಗುಟ್ಟು ಹೀಗೆನ್ನುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಬಾನ್ಸೂರಿ ಸ್ವರಾಜ್. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹಾಲಿ ಸಂಸದೆಗೆ ಟಿಕೆಟ್ ತಪ್ಪಿಸಿ ನವದೆಹಲಿ ಕ್ಷೇತ್ರದಲ್ಲಿ ಬಾನ್ಸೂರಿ ಸ್ವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಸ್ವಲ್ಪ ಅಸಮಧಾನ, ದುಗುಡ ಇದೆ. ಬಾನ್ಸೂರಿ ಅವರ ತಾಯಿ ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ಬಳ್ಳಾರಿ ಸೇರಿ ಭಾರತದಾದ್ಯಂತ ಚಿರಪರಿಚಿತ ರಾಜಕಾರಣಿ. ದೆಹಲಿಯ ಸಿಎಂ ಕೂಡ ಆಗಿದ್ರು. 

ಮೋದಿ 3ನೇ ಸಲ ಪ್ರಧಾನಿ ಆಗೋದು ಕಷ್ಟ: ಮಲ್ಲಿಕಾರ್ಜುನ ಖರ್ಗೆ ಭವಿಷ್ಯ

ಇವರ ವರ್ಚಸ್ ಬಳಸಿಕೊಂಡು ಐದು ವರ್ಷಗಳ ಬಳಿಕ ಬಿಜೆಪಿ ಬಾನ್ಸೂರಿ ಅವರಿಗೆ ಟಿಕೆಟ್ ನೀಡಿದೆ. ಇನ್ನು ಪೊರಕೆ ಪಕ್ಷದಿಂದ ಇಂಡಿಯಾ ಘಟಬಂಧನ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಸೋಮನಾಥ ಭಾರ್ತಿ ಅಖಾಡದಲ್ಲಿದ್ದಾರೆ.  ನವದೆಹಲಿ ಲೋಕಸಭಾ ಕ್ಷೇತ್ರವು ಸಂಸತ್ ಭವನ, ರಾಷ್ಟ್ರಪತಿ ಭವನ, ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿಗಳ ನಿವಾಸ, ಇಂಡಿಯಾ ಗೇಟ್ , ಹಲವು ಮಹತ್ವದ ಸರ್ಕಾರಿ ಸಂಸ್ಥೆಗಳು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿವೆ. ಈ ಕ್ಷೇತ್ರ ಕೂಡ 1952 ರಿಂದಲೂ ಚುನಾವಣೆಗಳನ್ನು ನೋಡುತ್ತಾ ಬಂದಿದೆ. ಆರನೇ ಹಂತದಲ್ಲಿ ಮೇ 25  ರಂದು ದೆಹಲಿಯಲ್ಲಿ ಮತದಾನ ನಡೆಯಲಿದೆ.

Latest Videos
Follow Us:
Download App:
  • android
  • ios