ಯುವ ಸಮೂಹವನ್ನು ಆಕರ್ಷಿಸಬೇಕು ದೇವಸ್ಥಾನ, ಇಸ್ರೋ ಮುಖ್ಯಸ್ಥರು ನೀಡಿದ್ರು ಐಡಿಯಾ!

ದೇವಸ್ಥಾನಗಳಿಗೆ ಯುವ ಸಮೂಹ ತೆರಳಬೇಕು, ಪೂಜೆ, ಸಂಪ್ರದಾಯದಲ್ಲಿ ಪಾಲ್ಗೊಳ್ಳಬೇಕು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಯುವಕರನ್ನು ದೇವಸ್ಥಾನಕ್ಕೆ ಬರುವಂತೆ ಮಾಡಲು  ಇದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ಮಹತ್ವದ ಸಲಹೆ ನೀಡಿದ್ದಾರೆ.
 

Temple Should attract Youth ISRO Chief S Somanath Advice committee to set up Library ckm

ತಿರುವನಂತಪುರಂ(ಮೇ.18) ದೇವಸ್ಥಾನ ಭಕ್ತಿಯ ಕೇಂದ್ರ ಮಾತ್ರವಲ್ಲ, ಸಮಾಜದ ಪರಿವರ್ತನಾ ಕೇಂದ್ರ. ಕೇವಲ ಹಿರಿಯರು ದೇವಸ್ಥಾನಕ್ಕೆ ತೆರಳಿ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದರೆ ಸಾಲದು, ಯುವ ಸಮೂಹ ದೇವಸ್ಥಾನಕ್ಕೆ ಬರಬೇಕು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ದೇವಸ್ಥಾನಗಳು ಯುುವ ಸಮೂಹ ಆಕರ್ಷಿಸಲು ಹೊಸ ಸಲಹೆ ನೀಡಿದ್ದಾರೆ. 

ದೇವಸ್ಥಾನಗಳಿಂದ ಯುವ ಸಮೂಹ ದೂರ ಉಳಿಯಬಾರದು. ನನ್ಮ ಪೂಜಾ ಪದ್ಧತಿ, ದೇವರಿಗೆ ಭಕ್ತಿಯಿಂದ ಅರ್ಪಿಸುವ ಪೂಜೆ,ಸಂಪ್ರದಾಯಗಳಲ್ಲಿ ಪಾಲ್ಗೊಳ್ಳಬೇಕು. ಪ್ರಮುಖವಾಗಿ ದೇವಸ್ಥಾನಗಳು ಯುವ ಸಮೂಹವನ್ನು ಆಕರ್ಷಿಸಬೇಕು. ಇದಕ್ಕಾಗಿ ದೇವಸ್ಥಾನದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವುದು ಉತ್ತಮ ಎಂದು ಎಸ್ ಸೋಮನಾಥ್ ಸಲಹೆ ನೀಡಿದ್ದಾರೆ.

ಕ್ರೇನ್‌, ಹೆಲಿಕಾಪ್ಟರ್, ಕಮ್ಯುನಿಕೇಷನ್‌ ಸ್ಯಾಟಲೈಟ್‌: ಮಂಗಳ ಗ್ರಹಕ್ಕೆ ಇವುಗಳನ್ನು ಕಳಿಸಲಿದೆ ಇಸ್ರೋ!

ಶ್ರೀ ಉದಯನ್ನೂರು ದೇವಿ ದೇವಸ್ಥಾನದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್ ಸೋಮನಾಥ್, ದೇವಸ್ಥಾನದಿಂದ ಯುವ ಸಮೂಹ ದೂರ ಉಳಿಯುತ್ತಿದೆ. ಇದು ಅಪಾಯ. ದೇವಸ್ಥಾನ ನಮ್ಮ ಪರಂಪರೆ, ನಮ್ಮ ಪದ್ಧತಿ, ಭಕ್ತಿ, ಪೂಜೆಯ ಕೇಂದ್ರ ಮಾತ್ರವಲ್ಲ, ಇದು ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆ ತರಬಲ್ಲ ಕೇಂದ್ರಗಳು, ಯುವ ಸಮೂಹ, ಸಂಸ್ಕಾರ, ವಿನಯ, ಹೊಸತನಕ ಆವಿಷ್ಕಾರ, ಕುತೂಹಲಗಳನ್ನು ಈ ದೇವಸ್ಥಾಗಳಿಂದ ಮೈಗೂಡಿಸಿಕೊಳ್ಳಬಹುದು ಎಂದು ಸೋಮನಾಥ್ ಹೇಳಿದ್ದಾರೆ.

ದೇವಸ್ಥಾನದಲ್ಲಿ ಗ್ರಂಥಾಲಯ ಸ್ಥಾಪಿಸದರೆ ಓದುಗ ಯುವ ಸಮೂಹ ಆಗಮಿಸಲಿದೆ. ಇದರ ಜೊತೆಗೆ ದೇವಸ್ಥಾನದ ಆಡಳಿತ ಮಂಡಳಿಗಳು ಯುವಕರನ್ನು ಆಕರ್ಷಿಸಲು ಹೊಸ ಯೋಜನೆ ರೂಪಿಸಬೇಕು. ಈ ಕುರಿತು ಪೋಷಕರು ಮಕ್ಕಳಿಗೆ ಮಾಹಿತಿ ನೀಡಬೇಕು. ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು ಎಂದು ಸೋಮನಾಥ್ ಹೇಳಿದ್ದಾರೆ.

ಶ್ರೀ ಉದಯನ್ನೂರು ದೇವಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಯುವ ಸಮೂಹ ನಿರೀಕ್ಷಿತ ಸಂಖ್ಯೆಯಲ್ಲಿ ಹಾಜರಾಗಿಲ್ಲ ಅನ್ನೋ ಬೇಸವನ್ನು ಸೋಮನಾಥ್ ವ್ಯಕ್ತಪಡಿಸಿದರು. ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದೇವಸ್ಥಾನಗಳ ಪೂಜೆಯಲ್ಲಿ ಪಾಲ್ಗೊಳ್ಳಿ. ಗ್ರಂಥಾಲಯಗಳು ಸ್ಥಾಪನೆಗೊಂಡರೆ ಯುವ ಸಮೂಹದ ಓದು, ಚರ್ಚೆಗಳು ನಡೆಯಲಿದೆ. ಇಲ್ಲಿಂದಲೇ ಅವರ ಭವಿಷ್ಯ ರೂಪಿತಗೊಳ್ಳಲಿದೆ ಎಂದು ಸೋಮನಾಥ್ ಹೇಳಿದ್ದಾರೆ.

ಎಲ್‌ಎಮ್‌ವಿ3 ಸಾಮರ್ಥ್ಯ ವರ್ಧಿಸುವ ಇಗ್ನಿಷನ್‌ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ!

ಇತ್ತೀಚೆಗೆ ಇಸ್ರೋ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ ) ಎರಡು ರಾಕೆಟ್‌ಗಳನ್ನು ಬಳಸಲಿದೆ. ಒಂದೇ ಯೋಜನೆಗೆ ಎರಡು ರಾಕೆಟ್‌ ಬಳಕೆ ಇಸ್ರೋ ಇತಿಹಾಸದಲ್ಲೇ ಮೊದಲು.

Latest Videos
Follow Us:
Download App:
  • android
  • ios