ರೈಲಿನಲ್ಲಿ ಹಲವರು ಸ್ಟಂಟ್ ಮಾಡಿ ಜೀವ ಕಳೆದುಕೊಂಡಿದ್ದಾರೆ. ಆದರೂ ಬೆಚ್ಚಿ ಬೀಳಿಸುವ ಸ್ಟಂಟ್ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಸ್ಟಂಟ್ ವಿಡಿಯೋ ಮೂಲಕ ಭಾರಿ ಜನಪ್ರಿಯವಾಗಿರುವ ಹದಿ ಹರೆಯದ ಯುವಕ ಈಗ ಹೇಗಿದ್ದಾನೆ. ಈತನ ವಿಡಿಯೋವನ್ನು ಪೊಲೀಸರು ಹಂಚಿಕೊಂಡಿದ್ದಾರೆ.
ಮುಂಬೈ(ಜು.27) ಮುಂಬೈ ಲೋಕಲ್ ಟ್ರೈನ್‌ನಲ್ಲಿ ಜನ ಕಕ್ಕಿರಿದು ತುಂಬಿರುತ್ತಾರೆ. ಇಲ್ಲಿ ರೈಲು ಹತ್ತುವುದು ಹಾಗೂ ಇಳಿಯುವುದು ಸಾಹಸ. ಇದರ ನಡುವೆ ಹಲವರು ಸ್ಟಂಟ್ ಮಾಡುತ್ತಾ ಸಾಗುತ್ತಾರೆ. ಈ ರೀತಿಯ ಹಲವು ವಿಡಿಯೋಗಳು ವೈರಲ್ ಆಗಿದೆ. ಇಷ್ಟೇ ಅಲ್ಲ ಸ್ಟಂಟ್ ಮಾಡುತ್ತಲೇ ದುರಂತ ಅಂತ್ಯ ಕಂಡ ಎಚ್ಟರಿಕೆ ವಿಡಿಯೋಗಳು ಹರಿದಾಡಿದೆ. ಆದರೂ ಭಯಾನಕ, ಬೆಚ್ಚಿ ಬೀಳಿಸುವ ಸ್ಟಂಟ್ ಮಾಸ್ಟರ್‌ಗಳಿೆ ಕೊರತೆ ಇಲ್ಲ. ಈ ಪೈಕಿ ಓಡಿ ಬಂದು ರೈಲು ಹತ್ತಿ ಸ್ಟಂಟ್ ಮಾಡುವ ಹದಿ ಹರೆಯದ ಯುವಕನ ವಿಡಿಯೋಗಳು ಭಾರಿ ವೈರಲ್ ಆಗಿದೆ. ಈ ರೀತಿ ಸ್ಟಂಟ್‌ಗಳಿಂದ ಈತ ಜನಪ್ರಿಯನಾಗಿದ್ದಾನೆ. ಈತನ ಹಳೇ ವಿಡಿಯೋಗಳು ಈಗಲೂ ಹರಿದಾಡುತ್ತಿದೆ. ಆದರೆ ಸದ್ಯ ಈತನ ಪರಿಸ್ಥಿತಿ ಯಾರಿಗೂ ಬೇಡ. ರೈಲಿನಲ್ಲಿ ಸ್ಟಂಟ್ ಮಾಡುವಾಗ ಈತ ಗಂಭೀರವಾಗಿ ಗಾಯಗೊಂಡು ಎಡಗೈ ಹಾಗೂ ಎಡಗಾಲು ಕಳೆದುಕೊಂಡಿದ್ದಾನೆ. ಈತನ ಕುರಿತು ಅಪ್‌ಡೇಟನ್ನು ಮುಂಬೈ ಪೊಲೀಸರು ನೀಡಿದ್ದಾರೆ.
ಚಲಿಸುತ್ತಿದ್ದ ರೈಲನ್ನು ಓಡಿ ಬಂದು ಹತ್ತಿ ಬಳಿಕ ಸ್ಟಂಟ್ ಮಾಡುತ್ತಾನೆ. ಜಾರಿಕೊಂಡು ಹೋಗುವ, ರೈಲಿನ ಬಾಗಿಲ ಬಳಿ ನಿಂತು ಹೊರಗಡೆ ಚಾಚಿ ನಿಲ್ಲುವ ವಿಡಿಯೋ ಸೇರಿದಂತೆ ಈತನ ಹಲವು ವಿಡಿಯೋಗಳು ವೈರಲ್ ಆಗಿದೆ. ಮುಂಬೈ ಸ್ಟಂಟ್ ಕುರಿತು ಎಚ್ಚರಿಕಿಗೆ ಪೊಲೀಸರು ಇದೇ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದರು. ಬಹುತೇಕರು ಈತನಿಗೆ ಉಗಿದು ಉಪ್ಪಿನಕಾಯಿ ಹಾಕಿದರು ಈತ ಮಾತ್ರ ಬದಲಾಗಲಿಲ್ಲ. ಪ್ರತಿ ದಿನ ಈತನದ್ದೂ ಇದೇ ಭಯಾನಕ ವಿಡಿಯೋ ಸ್ಟಂಟ್.
ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!
ವೈರಲ್ ವಿಡಿಯೋ ಬೆನ್ನತ್ತಿದ ಮುಂಬೈ ಪೊಲೀಸರು ಈತನ ಅರೆಸ್ಟ್ ಮಾಡಲು ಬಾರಿ ಪ್ರಯತ್ನ ನಡೆಸಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ಈತ ಸ್ಟಂಟ್ ಮಾಡುತ್ತಲೇ ಬಂದಿದ್ದಾನೆ. ಈತನ ವಿಡಿಯೋ ಹಂಚಿಕೊಂಡು ಎಚ್ಚರಿಕೆ ಕೂಡ ನೀಡಲಾಗಿತ್ತು. ಆದರೂ ಈತ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ. ಇನ್ನು ರೈಲು ಪ್ರಯಾಣದ ವೇಳೆ ಹಿರಿಯ ನಾಗರಿಕರು ಈತನಿಗೆ ಬುದ್ದಿವಾದ ಮಾತನ್ನು ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮಾತಿಗೆ ಕಿವಿಕೊಟ್ಟಿಲ್ಲ.
ರೈಲಿನ ಬಾಗಿಲ ಬಳಿ ನಿಂತು ಹೊರಭಾಗಗಕ್ಕೆ ಚಾಚಿ ಸ್ಟಂಟ್ ಮಾಡುವ ವೇಳೆ ಹೊರಭಾಗದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಈತ ಗಂಭೀರವಾಗಿ ಗಾಯಗೊಂಡಿದ್ದಾನೆ. ರೈಲಿನ ಪ್ರಯಾಣಿಕರಿಂದ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಸಿ ಗಂಬೀರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಸದ್ಯ ಈತ ಚೇತರಿಸಿಕೊಂಡಿದ್ದಾನೆ. ಆದರೆ ಎಡಗೈ ಹಾಗೂ ಎಡ ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ಇದೀಗ ಎದ್ದು ನಡೆಯಲು ಕುಳಿತು ಕೊಳ್ಳಳು ಆಗದೆ ಪೋಷಕರ ಕಣ್ಣೀರಿಗೆ ಕಾರಣವಾಗಿದ್ದಾನೆ. ಈತನ ಎರಡೂ ಘಟನೆಯನ್ನು ಪೋಸ್ಟ್ ಮಾಡಿರುವ ಪೊಲೀಸರು ಸುರಕ್ಷತೆ ಕಡೆ ಗಮನ ಇರಲಿ, ಈ ರೀತಿ ಸ್ಟಂಟ್ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಮುಂಬೈ ಪೊಲೀಸರು ಎಚ್ತರಿಸಿದ್ದಾರೆ.
ಯುವಕರ ರೀಲ್ಸ್ ಹುಚ್ಚಿಗೆ ಎರಡು ಮಹೀಂದ್ರ ಥಾರ್ ಸಮುದ್ರ ಪಾಲು, ಭಯಾನಕ ವಿಡಿಯೋ!
