ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!
ಶಾಲಾ ಬಾಲಕಿಯರು ರೀಲ್ಸ್‌ಗಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದಾರೆ. ಸಾಹಸದ ಮೂಲಕ ವೈರಲ್ ಆಗಲು ಮುಂದಾಗಿದ್ದಾರೆ. ಬಾಲಕಿಯರ ಆತ್ಮವಿಶ್ವಾಸಕ್ಕೇನು ಕೊರತೆ ಇರಲಿಲ್ಲ. ಎಲ್ಲವೂ ಒಕೆಯಾಗಿತ್ತು, ಆದರೆ ಮುಂದೇನಾಯ್ತು?
ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.
ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.
ಯುವಕರ ರೀಲ್ಸ್ ಹುಚ್ಚಿಗೆ ಎರಡು ಮಹೀಂದ್ರ ಥಾರ್ ಸಮುದ್ರ ಪಾಲು, ಭಯಾನಕ ವಿಡಿಯೋ!
ಬಿದ್ದ ರಭಸಕ್ಕೆ ಡಿಸ್ಕ್ ಮುರಿತಕ್ಕೊಳಗಾಗಿದೆ. ವಿದ್ಯಾರ್ಥಿ ಆಕೆಯನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಮಾಡಿದರೂ ಆಕೆಗೆ ನಿಲ್ಲಲು ಸಾಧ್ಯವಾಗಿಲ್ಲ. ಇಲ್ಲಿಗೆ ಈ ರೀಲ್ಸ್ ಅಂತ್ಯಗೊಂಡಿದೆ. ಆದರೆ ಬಾಲಕಿ ನಡೆಯಲು ಹಾಗೂ ನಿಲ್ಲಲು ಸಾಧ್ಯವಾಗದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುದೀರ್ಘ ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಫೆಬ್ರವರಿಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 17 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.
ಈ ರೀತಿ ಸ್ಟಂಟ್ ಮಾಡಿ ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ, ಇದು ಸೊಂಟ ಮುರಿದ ಸ್ಟಂಟ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಬಾಲಕಿ ರಸ್ತೆ ಬಿದ್ದ ಕಾರಣ ಸೊಂಟ ಮುರಿದಿರುವ ಸಾಧ್ಯತೆ ಇದೆ, ಪಕ್ಕದಲ್ಲಿ ಡಿವೈಡರ್‌ಗೆ ಬಿದ್ದಿದ್ದರೆ, ತೊಲೆ ಒಡೆಯುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಸ್ಟಂಟ್ ಮಾಡಿ ಯಾರನ್ನು ಮೆಚ್ಚಿಸಬೇಡಿ. ರೀಲ್ಸ್ ಹುಚ್ಚಿಗೆ ಜೀವನ ಕತ್ತಲಲ್ಲಿ ಕಳೆಯಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಯುವತಿಯರು, ಬಾಲಕಿಯರು ಸ್ಟಂಟ್ ಮೂಲಕ ಗಮನಸಳೆಯಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಎತ್ತರದ ಕಟ್ಟಡ ಮೇಲೆ ನೇತಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಳು. ಈ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಯಾಕೋ ನೀ ಮಾಡಿದ್ದು ಸರಿಯಿಲ್ಲ ಕಣಮ್ಮಿ.... ಒಳ್ಳೇ ಹುಡುಗನಿಗೆ ಕೈಕೊಟ್ಟೆ ಅಂತಿದ್ದಾರೆ ನೆಟ್ಟಿಗರು