: ಪಾಕಿಸ್ತಾನವೂ ಭಯೋತ್ಪಾದಕರ ತಾಯಿ, ಪಾಕಿಸ್ತಾನದ ಸೇನೆಯೇ ಇದರ ಹ್ಯಾಂಡಲರ್ ಎಂಬುದನ್ನು ಭಾರತ ಇಡೀ ಜಗತ್ತಿನ ಮುಂದೆ ಬಯಲು ಮಾಡಿದ್ದು, ಭಯೋತ್ಪಾದಕ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಪಾಕಿಸ್ತಾನದ ಸೇನೆಯ ಅಧಿಕಾರಿಗಳನ್ನು ಜಾಗತಿಕ ಭಯೋತ್ಪಾದಕರು ಎಂದು ಗುರುತಿಸಲು ಆಗ್ರಹಿಸಿದೆ
ನವದೆಹಲಿ: ಪಾಕಿಸ್ತಾನವೂ ಭಯೋತ್ಪಾದಕರ ತಾಯಿ, ಪಾಕಿಸ್ತಾನದ ಸೇನೆಯೇ ಇದರ ಹ್ಯಾಂಡಲರ್ ಎಂಬುದನ್ನು ಭಾರತ ಇಡೀ ಜಗತ್ತಿನ ಮುಂದೆ ಬಯಲು ಮಾಡಿದೆ. ಇದಕ್ಕೆ ಬೇಕಾದ ಎಲ್ಲಾ ಫೋಟೋ ವೀಡಿಯೋ ಸಹಿತ ಸಾಕ್ಷ್ಯಗಳನ್ನು ಭಾರತ ಜಗತ್ತಿನ ಮುಂದೆ ತೆರೆದಿಟ್ಟಿದೆ. ಇದೇ ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಆಗುವಂತೆ ಮಾಡಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಳಗೆ ಇರುವ ಭಯೋತ್ಪಾದಕ ನೆಲೆಗಳನ್ನು ನಿರ್ಮೂಲನೆ ಮಾಡಲು ಭಾರತ 'ಆಪರೇಷನ್ ಸಿಂಧೂರ್' ನಡೆಸಿದ್ದು, ಗೊತ್ತೆ ಇದೆ ಇದು ಪಾಕಿಸ್ತಾನದ ಹಲವು ಮುಖಗಳನ್ನು ಜಗತ್ತಿನ ಮುಂದೆ ಬಯಲು ಮಾಡಿದ. ಈ ಆಪರೇಷನ್ ಸಿಂಧೂರ್‌ನ ಮೊದಲ ದಿನವೇ ಭಾರತೀಯ ಸಶಸ್ತ್ರ ಪಡೆಗಳು ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನಿರ್ವಹಿಸುವ ಒಂಬತ್ತು ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ 100 ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಮಣ್ಣು ಮುಕ್ಕಿಸಿತು. ಈ ಎಲ್ಲಾ ಭಯೋತ್ಪಾದಕ ಸಂಘಟನೆಗಿಗೆ ವಿಶ್ವಸಂಸ್ಥೆಯಿಂದ ನಿಷೇಧವಿರುವುದು ಗೊತ್ತೆ ಇದೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ನಿವಾಸಿ ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ ಘಟನೆಯ ನಂತರ ರೊಚ್ಚಿಗೆದ್ದ ಭಾರತ ಈ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಈ ದಾಳಿಯಲ್ಲಿ ಪಾಕಿಸ್ತಾನ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂದು ಹೇಳಿದರು. ಇತ್ತೀಚೆಗೆ ಬೆಳಕಿಗೆ ಬಂದ ಫೋಟೋಗಳು ಪಾಕಿಸ್ತಾನ ಹೇಳುತ್ತಿರುವುದು ಶುದ್ಧ ಸುಳ್ಳು ಎಂಬುದನ್ನು ಸಾಬೀತು ಮಾಡಿದೆ.
ಮೇ 7 ರಂದು ಭಾರತೀಯ ಪಡೆಗಳು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರ ಅಂತ್ಯಕ್ರಿಯೆಯ ಸಮಯದಲ್ಲಿ ಪಾಕಿಸ್ತಾನ ಸೇನಾ ಅಧಿಕಾರಿಗಳು ಮತ್ತು ಜವಾನರ ಪಕ್ಕದಲ್ಲಿ ಭಯೋತ್ಪಾದಕರು ನಿಂತಿರುವುದನ್ನು ವೀಡಿಯೋಗಳು ತೋರಿಸಿವೆ. ಇದು ಪಾಕಿಸ್ತಾನದ ಮೇಲೆ ಜಾಗತಿಕ ಮಟ್ಟದ ಆಕ್ರೋಶವನ್ನು ಹುಟ್ಟುಹಾಕಿವೆ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಕಳ್ಳಾಟವನ್ನು ಬಹಿರಂಗಪಡಿಸಲು ಭಾರತಕ್ಕೆ ಪ್ರೇರಣೆ ನೀಡಿದೆ.
ಎಲ್ಲವನ್ನು ಮಾಡಿ ಮೇಲ್ನೋಟಕ್ಕೆ ಮುಗ್ಧನಂತೆ ತೋರಿ ಭಯೋತ್ಪಾದನೆ ವಿಚಾರದಲ್ಲಿ ಕೈ ತೊಳೆದುಕೊಳ್ಳುವ ಪಾಕಿಸ್ತಾನದ ಈ ದ್ವಿಬಗೆ ನೀತಿಯನ್ನು ಇಡೀ ಜಗತ್ತಿಗೆ ತೋರಿಸುವುದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ವಿಶ್ವಾದ್ಯಂತ ಬೀಡುಬಿಟ್ಟಿರುವ ಭಾರತೀಯ ರಾಜತಾಂತ್ರಿಕರೊಂದಿಗೆ ಈ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮೇ 11 ರಂದು ಅಂದರೆ ನಿನ್ನೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ ಮುಖ್ಯಸ್ಥರು, ಅಮೆರಿಕದಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್-ಎ-ತೈಬಾ ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್‌ನ ಪಾಕಿಸ್ತಾನದ ಮುರಿಡ್ಕೆಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನಿ ಅಧಿಕಾರಿಗಳ ಹೆಸರುಗಳನ್ನು ಬಿಡುಗಡೆ ಮಾಡಿದ್ದರು. ಈ ಅಧಿಕಾರಿಗಳನ್ನು ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಫಯಾಜ್ ಹುಸೇನ್ ಶಾ, ಮೇಜರ್ ಜನರಲ್ ರಾವ್ ಇಮ್ರಾನ್ ಸರ್ತಾಜ್, ಬ್ರಿಗೇಡಿಯರ್ ಮೊಹಮ್ಮದ್ ಫರ್ಕ್ವಾನ್ ಶಬ್ಬೀರ್, ಡಾ. ಉಸ್ಮಾನ್ ಅನ್ವರ್ ಮತ್ತು ಮಲಿಕ್ ಸೊಹೈಬ್ ಅಹ್ಮದ್ ಭೆರ್ತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಏಷ್ಯಾನೆಟ್ ನ್ಯೂಸೇಬಲ್‌ನ ಸೇನೆಯ ಇಬ್ಬರು ರು ರಕ್ಷಣಾ ಮತ್ತು ಕಾರ್ಯತಂತ್ರದ ವ್ಯವಹಾರಗಳ ತಜ್ಞರೊಂದಿಗೆ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ನೋಡಿ.
ಜಂಟಿ ಯುದ್ಧ ಅಧ್ಯಯನ ಕೇಂದ್ರದ (CENJOWS) ಮಹಾನಿರ್ದೇಶಕ ಮೇಜರ್ ಜನರಲ್ ಅಶೋಕ್ ಕುಮಾರ್ (ನಿವೃತ್ತ) ಮಾತನಾಡಿ ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದು ಹೊಸದಲ್ಲ ಅಥವಾ ಆಶ್ಚರ್ಯಕರವೂ ಅಲ್ಲ, ಏಕೆಂದರೆ ಅದರ ಮಿಲಿಟರಿ ಸ್ಥಾಪನೆಯೂ ಭಯೋತ್ಪಾದನೆಯನ್ನೂ ಒಳಗೊಂಡಿದೆ. ಮತ್ತು ಇದು ಎಲ್ಲರಿಗೂ ತಿಳಿದಿರುವ ದಾಖಲಿತ ಸತ್ಯ. ಭಾರತವು ಈಗಾಗಲೇ ಭಯೋತ್ಪಾದಕರ ದಾಖಲೆಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಆದರೆ ಇಲ್ಲಿಯವರೆಗೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಕೆಲವು ಪ್ರಮುಖ ಭಯೋತ್ಪಾದಕರು ಸೇರಿದಂತೆ ಹಲವಾರು ಭಯೋತ್ಪಾದಕರನ್ನು ಭಾರತ ತಟಸ್ಥಗೊಳಿಸಿದಾಗ ಈ ಭಯೋತ್ಪಾದಕರಿಗೆ ತಾನು ನೀಡ್ತಿದ್ದ ಬೆಂಬಲವನ್ನು ಪಾಕಿಸ್ತಾನಕ್ಕೆ ಮರೆ ಮಾಡಲು ಸಾಧ್ಯವಾಗಲಿಲ್ಲ. ಅವರ ಅಂತ್ಯಸಂಸ್ಕಾರದಲ್ಲಿ ಹಿರಿಯ ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು. ಇದು ನಿಸ್ಸಂದೇಹವಾಗಿ ಪಾಕಿಸ್ತಾನದ ಮಿಲಿಟರಿ ಸ್ಥಾಪನೆ ಮತ್ತು ಭಯೋತ್ಪಾದಕರು ಎರಡೂ ಪರಸ್ಪರ ಸಮಾನಾರ್ಥಕ ಪದಗಳು ಎಂಬುದನ್ನು ಸಾಬೀತುಪಡಿಸುತ್ತದೆ.
ಪಾಕಿಸ್ತಾನ ಸೇನೆಯು ಯಾವಾಗಲೂ ಭಯೋತ್ಪಾದಕರಿಗೆ ಒಳನುಸುಳುವಿಕೆಗೆ ಅನುಕೂಲವಾಗುವಂತೆ ಎಲ್‌ಒಸಿಯನ್ನು ಸಕ್ರಿಯಗೊಳಿಸುತ್ತಿದೆ, ಸುರಕ್ಷಿತ ಆಶ್ರಯಗಳನ್ನು ಒದಗಿಸುವ ಮೂಲಕ ಅವರನ್ನು ಪೋಷಿಸುತ್ತದೆ. ಅದೇ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಿದೆ, ಸಂವಹನ ಸಾಧನಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅವರಿಗೆ ಬೆಂಬಲ ನೀಡಲು ಲಾಜಿಸ್ಟಿಕ್ಸ್ ಅನ್ನು ಕೂಡ ನೀಡುತ್ತಿದೆ ಎಂದು ಮೇಜರ್ ಜನರಲ್ ಅಶೋಕ್ ಕುಮಾರ್ ಹೇಳಿದರು.
ಜಾಗತಿಕ ಭಯೋತ್ಪಾದನೆಯ ತಾಯಿ ಪಾಕಿಸ್ತಾನ
ಆಪರೇಷನ್ ಸಿಂಧೂರ್‌ನಲ್ಲಿ ಹತರಾದ ಜೆಇಎಂ ಮತ್ತು ಎಲ್‌ಇಟಿ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾ ಅಧಿಕಾರಿಗಳ ಉಪಸ್ಥಿತಿಯು ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯ ತಾಯಿ ಮತ್ತು ಪಾಕಿಸ್ತಾನ ಸೇನೆ ಅದರ ಸೃಷ್ಟಿಕರ್ತ ಮತ್ತು ಪೋಷಕ ಎಂಬ ಭಾರತದ ನಿಲುವನ್ನು ಸ್ಪಷ್ಟವಾಗಿ ದೃಢೀಕರಿಸುತ್ತದೆ ಎಂದು ರಾಜಸ್ಥಾನದಲ್ಲಿ ರಕ್ಷಣಾ ಸಚಿವಾಲಯದ ಮಾಧ್ಯಮ ವ್ಯವಹಾರಗಳನ್ನು ನಿರ್ವಹಿಸಿದ್ದ ಮಾಜಿ ಭಾರತೀಯ ಸೇನಾ ಅಧಿಕಾರಿ ಕರ್ನಲ್ ಮನೀಶ್ ಓಜಾ ಏಷ್ಯಾನೆಟ್ ನ್ಯೂಸಬಲ್‌ಗೆ ತಿಳಿಸಿದ್ದಾರೆ.
ಭಯೋತ್ಪಾದಕರ ಸಾರ್ವಜನಿಕ ಅಂತ್ಯಕ್ರಿಯೆ ಮತ್ತು ಅವರ ಮೃತದೇಹವನ್ನು ಅಲ್ಲಿನ ಸೈನಿಕರು ಹೆಗಲ ಮೇಲೆ ಹೊತ್ತುಕೊಂಡ ಪಾಕಿಸ್ತಾನದ ರಾಷ್ಟ್ರೀಯ ಧ್ವಜದಲ್ಲಿ ಅವರ ದೇಹವನ್ನು ಸುತ್ತುವುದು ಇವೆಲ್ಲವೂ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಎಷ್ಟು ಮುಖ್ಯವಾಹಿನಿಗೆ ಬಂದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಜಗತ್ತು ಇದನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತವು ಈ ವಿವರಗಳನ್ನು ಸಾಕ್ಷ್ಯಚಿತ್ರ ಸಾಕ್ಷ್ಯಗಳೊಂದಿಗೆ ಪ್ರಸ್ತುತಪಡಿಸಬೇಕು ಮತ್ತು ಮುಂದಿನ ವಾರ ಭಯೋತ್ಪಾದಕರನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸುವ ವಿಶ್ವಸಂಸ್ಥೆಯ ಭಯೋತ್ಪಾದಕರ ನಿರ್ಬಂಧ ಸಮಿತಿ ಸಭೆಯಲ್ಲಿ ಪಾಕ್‌ನ ಈ ಅಧಿಕಾರಿಗಳನ್ನು ಜಾಗತಿಕ ಭಯೋತ್ಪಾದಕರು ಎಂದು ಶಿಕ್ಷಿಸಬೇಕು ಎಂದು ಕರ್ನಲ್ ಮನೀಶ್ ಓಜಾ ಹೇಳಿದ್ದಾರೆ.


