ನೀರಿನ ಹೊಂಡಕ್ಕೆ ಬಿದ್ದ ಮರಿ: ಜೀವದ ಹಂಗು ತೊರೆದು ರಕ್ಷಿಸಿದ ತಾಯಾನೆ: ವಿಡಿಯೋ ವೈರಲ್
ಇಲ್ಲೊಂದು ಕಡೆ ತಾಯಾನೆಯೊಂದು ನೀರಿಗೆ ಬಿದ್ದ ತನ್ನ ಮರಿಯನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳು ಅದರಲ್ಲೂ ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು. ತಮ್ಮ ಗುಂಪಿನಲ್ಲಿರುವ ಮಕ್ಕಳ ರಕ್ಷಣೆ ಬಗ್ಗೆ ಆನೆಗಳು ತುಸು ಹೆಚ್ಚೇ ಕಾಳಜಿ ವಹಿಸುತ್ತವೆ. ಮರಿಗಳು ಗುಂಪಿನಲ್ಲಿ ಇವೆ ಎಂದಾದರೆ ಆನೆಗಳ ಕಾಳಜಿ ಎಂದಿಗಿಂತ ಹೆಚ್ಚಿರುತ್ತದೆ. ಆನೆಗಳು ಅಪಾಯಕ್ಕೊಳಗಾದ ತಮ್ಮ ಮರಿಗಳನ್ನು ರಕ್ಷಿಸಿದದಂತಹ ಹಲವು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರುತ್ತೀರಿ. ಅದೇ ರೀತಿ ಇಲ್ಲೊಂದು ಕಡೆ ತಾಯಾನೆಯೊಂದು ನೀರಿಗೆ ಬಿದ್ದ ತನ್ನ ಮರಿಯನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಗೇಬ್ರಿಯಲ್ ಕೊರ್ನೊ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿರುವ ಸಿಯೊಲ್‌ನ ಮೃಗಾಲಯದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮೃಗಾಲಯದ ಒಳಗೆ ನೀರಿನ ಕೊಳವೊಂದಿದ್ದು, ಅಲ್ಲಿಗೆ ಬಂದ ತಾಯಿ ಆನೆ ಹಾಗೂ ಮರಿ ನೀರು ಕುಡಿಯುತ್ತಿರುತ್ತವೆ. ಈ ವೇಳೆ ಆಕಸ್ಮಿಕವಾಗಿ ಆನೆ ಮರಿ ನೀರಿನ ಹೊಂಡಕ್ಕೆ ಬಿದ್ದು ನೀರಿನಿಂದ ಮೇಲೆ ಬರಲಾರದೇ ಮುಳುಗಿ ಏಳಲು ಶುರು ಮಾಡಿದೆ. ಕೂಡಲೇ ಓಡಿ ಹೋದ ತಾಯಿ ಆನೆ ಹಾಗೂ ಸಮೀಪದಲ್ಲೇ ಇದ್ದ ಮತ್ತೊಂದು ಆನೆ ನೀರಿನ ಹೊಂಡಕ್ಕೆ ಇಳಿದು ಮರಿಯಾನೆಯನ್ನು ಸೊಂಡಿಲಿನಲ್ಲಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಪೋಷಕರಿಗೆ ತಮ್ಮ ಮಕ್ಕಳೇ ಆಸ್ತಿ ಅದು ಪ್ರಾಣಿಗಳೇ ಇರಲಿ ಮನುಷ್ಯರೇ ಇರಲಿ. ಮಕ್ಕಳು ಸಂಕಷ್ಟದಲ್ಲಿದ್ದಾರೆ ಎಂದು ಗೊತ್ತಾದರೆ ತಮ್ಮ ಮಕ್ಕಳ ರಕ್ಷಣೆಗೆ ಪೋಷಕರು ಎಂತಹ ತೊಂದರೆಯನ್ನು ಎದುರಿಸಲು ಸಿದ್ಧರಿರುತ್ತಾರೆ ಅದೇ ರೀತಿ ಇಲ್ಲಿ ಈ ಆನೆಗಳು ತಮ್ಮ ಮಗುವಿನ ರಕ್ಷಣೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆಗೆ ಇಳಿದಿದ್ದು, ತಮ್ಮ ಮಗುವಿನ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಆನೆಗಳ ಈ ಕುಟುಂಬ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೋರಾಗಿ ಸುರಿಯೋ ಮಳೆಗೆ ಛತ್ರಿಯಂತೆ ನಿಂತ ಅಮ್ಮ
ಅಮ್ಮ ತನ್ನ ಮಕ್ಕಳ ಮೇಲೆ ತೋರುವ ಕರುಣೆ ಕಾಳಜಿ ಪದಗಳಲ್ಲಿ ವರ್ಣಿಸಲಾಗದು ಅಮ್ಮನ ಮಹತ್ವ ಸಹನೆ ಕಾಳಜಿಯನ್ನು ಅರಿತೇ ತಾಯಿಗಿಂತ ದೇವರಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಅಮ್ಮನ ಮಮತೆ ಪ್ರೇಮ ಸೆರೆಯಾದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅಮ್ಮ ಎಂಬ ಕಾಳಜಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪಶು ಪಕ್ಷಿಗಳು ಕೂಡ ತಮ್ಮ ತಮ್ಮ ಕರುಳ ಕುಡಿಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿವೆ. ಅದೇ ರೀತಿ ಕೆಲ ದಿನಗಳ ಹಿಂದೆ ಆನೆಯೊಂದು ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ತನ್ನ ಮರಿಯ ಮೇಲೆ ಮಳೆ ಹನಿ ಬೀಳದಂತೆ ಅಡ್ಡ ನಿಂತು ರಕ್ಷಣೆ ಮಾಡಿದಂತಹ ವಿಡಿಯೋ ವೈರಲ್ ಆಗಿತ್ತು.
ಆನೆ ಹಿಂಡಿನೊಂದಿಗೆ ಯುವಕರ ಹುಡುಗಾಟಕ್ಕೆ ಆಕ್ರೋಶ: ವಿಡಿಯೋ ವೈರಲ್
ಈ ಆನೆಗಳ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಅವರು ಪೋಸ್ಟ್ ಮಾಡಿದ್ದು, ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಇದಾಗಿದೆ. 28 ಸೆಕೆಂಡುಗಳ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಅಧಿಕಾರಿ ಸುಪ್ರಿಯಾ ಸಾಹು, ಇದೊಂದು ಅಪರೂಪದ ಕ್ಷಣ. ತಾಯಿ ಆನೆ ದೊಡ್ಡದಾದ ಛತ್ರಿಯಂತೆ ನಿಂತು ತನ್ನ ನವಜಾತ ಶಿಶುವನ್ನು ಮಳೆಯಿಂದ ರಕ್ಷಿಸುತ್ತಿದೆ. ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯ ಗುಡಲೂರಿನಲ್ಲಿ ಈ ಘಟನೆ ನಡೆದಿದೆ ಎಂದು ಸಾಹು ಬರೆದುಕೊಂಡಿದ್ದರು.
ದೇವರನಾಡಲ್ಲಿ ಗಜೇಂದ್ರನ ಸಾಹಸ: ಉಕ್ಕಿ ಹರಿಯುವ ನದಿ ದಾಟಿದ ಆನೆ, ವಿಡಿಯೋ
ಈ ವಿಡಿಯೋವನ್ನು 11,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕೆಲವೊಮ್ಮೆ ಪ್ರಾಣಿಗಳು ಕೂಡ ನಮಗೆ ಸಣ್ಣ ಮಕ್ಕಳನ್ನು ಪ್ರೀತಿ ಹಾಗೂ ಆತ್ಮೀಯತೆಯಿಂದ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ತೋರಿಸಿ ಕೊಡುತ್ತವೆ. ನಿಜವಾದ ಪ್ರೀತಿಯ ನೈಜ ಅಭಿವ್ಯಕ್ತಿ ಇದು. ಅಮ್ಮನ ಪ್ರೀತಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆನೆ ಮರಿಗಳು ಎರಡು ವರ್ಷ ಪೂರ್ಣವಾಗುವವರೆಗೂ ಆಹಾರಕ್ಕಾಗಿ ಸಂಪೂರ್ಣವಾಗಿ ತಮ್ಮ ತಾಯಿಗೆ ಅವಲಂಬಿತವಾಗಿರುತ್ತವೆ. ನಂತರ ಪ್ರಾಯ 16 ತುಂಬುತ್ತಿದ್ದಂತೆ ತನ್ನ ಹಿಂಡಿನಿಂದ ಹೊರ ಬಂದು ಸ್ವತಂತ್ರ ಜೀವನ ನಡೆಸುತ್ತವೆ.