Tiruvannamalai police rape case: ತಮಿಳುನಾಡಿನ ತಿರುವಣಮಲೈನಲ್ಲಿ ಹಣ್ಣು ಮಾರುತ್ತಿದ್ದ ಯುವತಿಯ ಮೇಲೆ ಇಬ್ಬರು ಪೊಲೀಸರು ಅತ್ಯಾ*ಚಾರ ಎಸಗಿದ ಆರೋಪ ಕೇಳಿ ಬಂದಿದೆ. ಆರೋಪಿ ಪೊಲೀಸರನ್ನು ಬಂಧಿಸಿ ಅಮಾನತುಗೊಳಿಸಲಾಗಿದ್ದು, ಈ ಘಟನೆಯು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದರು
ರಕ್ಷಣೆ ನೀಡಬೇಕಾದ ಪೊಲೀಸರೇ ಇಲ್ಲಿ ಭಕ್ಷಕರಾಗಿದ್ದಾರೆ. ಬೀದಿಯಲ್ಲಿ ಹಣ್ಣು ಮಾರುತ್ತಿದ್ದ ಯುವತಿಯೊಬ್ಬಳ ಮೇಲೆ ಇಬ್ಬರು ಪೊಲೀಸರು ಅತ್ಯಾ*ಚಾರವೆಸಗಿದ ಆರೋಪ ಕೇಳಿ ಬಂದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಪುಣ್ಯಕ್ಷೇತ್ರ ಎನಿಸಿರುವ ತಿರುವಣಮಲೈನಲ್ಲೇ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಮೂಲತಃ ಆಂಧ್ರಪ್ರದೇಶದವರಾದ ಸಂತ್ರಸ್ತ ಯುವತಿ ತನ್ನ ತಾಯಿಯ ಜೊತೆ ತಮಿಳುನಾಡಿನ ತಿರುವಣಮಲೈಗೆ ಹಣ್ಣಿನ ಮಾರಾಟಕ್ಕಾಗಿ ಬಂದಿದ್ದರು. ಈ ವೇಳೆ ತಿರುವಣಮಲೈನ ಈ ಇಬ್ಬರು ಕಾಮುಕ ಪೊಲೀಸರು ಹಣ್ಣು ಮಾರುವ ಯುವತಿ ಮೇಲೆ ಕಣ್ಣು ಹಾಕಿದ್ದು, ಆಕೆಯ ಮೇಲೆಯೇ ಅತ್ಯಾ*ಚಾರವೆಸಗಿದ್ದಾರೆ.
ಗಸ್ತು ತಿರುಗುತ್ತಿದ್ದ ಪೊಲೀಸರಿಂದಲೇ ಹಣ್ಣು ಮಾರುತ್ತಿದ್ದ ಯುವತಿ ಮೇಲೆ ಬಲತ್ಕಾರ
25 ವರ್ಷದ ಹಣ್ಣು ಮಾರುವ ಹುಡುಗಿ ತಡರಾತ್ರಿ ರಸ್ತೆಬದಿ ತಮ್ಮ ವಾಹನವನ್ನು ನಿಲ್ಲಿಸಿ ಕಾಯುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರಾದ ಡಿ ಸುರೇಶ್ ರಾಜ್, ಪಿ ಸುಂದರ್ ಎಂಬುವವರ ಕಣ್ಣಿಗೆ ಬಿದ್ದಿದ್ದಾಳೆ. ನಂತರ ಯುವತಿಯನ್ನು ಒತ್ತಾಯಪೂರ್ವಕವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಪೊಲೀಸರು ಅಲ್ಲಿ ಆಕೆಯ ಮೇಲೆ ಲೈಂ*ಗಿಕ ದೌರ್ಜನ್ಯವೆಸಗಿದ್ದಾರೆ.
ಘಟನೆಯ ಬಳಿಕ ಆರೋಪಿ ಪೊಲೀಸರನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪೊಲೀಸರಾಗಿ ಮಾಡಬಾರದ ಕೆಲಸ ಮಾಡಿದ ಈ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸುವ ಗರಿಷ್ಠ ಶಿಕ್ಷೆಯನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪೊಲೀಸರ ಕೃತ್ಯಕ್ಕೆ ಭಾರಿ ಆಕ್ರೋಶ
ಆದರೆ ಪೊಲೀಸರೇ ಈ ಕೃತ್ಯವೆಸಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡು ಎಐಎಡಿಎಂಕೆ ಮುಖ್ಯಸ್ಥ ಎಡಪಾಡಿ ಕೆ ಪಲನಿಸ್ವಾಮಿ ಅವರು ಘಟನೆಯನ್ನು ಬಲವಾಗಿ ಖಂಡಿಸಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಮೇಲಿನ ಕಪ್ಪು ಕಲೆ ಎಂದು ಬಣ್ಣಿಸಿದ್ದಾರೆ. ಡಿಎಂಕೆ ಸರ್ಕಾರ ನಾಚಿಕೆಯಿಂದ ತಲೆಬಾಗಬೇಕಾಗಿದೆ. ತಮ್ಮ ಭದ್ರಕೋಟೆಯಾಗಬೇಕಾದ ಪೊಲೀಸರಿಂದಲೇ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಬಂದಿದ್ದಕ್ಕೆ ಸ್ಟಾಲಿನ್ ಮಾದರಿ ಸರ್ಕಾರವನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 35ರ ಯುವತಿ ಮದ್ವೆಯಾಗಿ ಮರುದಿನವೇ 75ರ ವೃದ್ಧ ಸಾವು: ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ
ಇದನ್ನೂ ಓದಿ: ನಿಮ್ಮಿಂದಾಗಿ ನಾನು ನನ್ನ ಗಂಡ ಜೊತೆಗಿದ್ದೇವೆ: ಮೇಕಪ್ ಆರ್ಟಿಸ್ಟ್ ಮಾತಿಗೆ ಶಾಕ್ ಆದ ಐಶ್ ರೈ
ಇದನ್ನೂ ಓದಿ: ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು
ಇದನ್ನೂ ಓದಿ: 35 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ
ಇದನ್ನೂ ಓದಿ: ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ
ಇದನ್ನೂ ಓದಿ:ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ
ಇದನ್ನೂ ಓದಿ: ಗರ್ಭ ನಿರೋಧಕ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!
