Asianet Suvarna News Asianet Suvarna News

Tamil Nadu: ಸರ್ಕಾರಿ ಶಾಲೆ ಶೌಚಾಲಯದಲ್ಲಿ ಪತ್ತೆಯಾಯ್ತು ನವಜಾತ ಶಿಶು ಶವ..!

ತಿರುವೆರುಂಬೂರ್ ಬಳಿಯ ತಿರುಚ್ಚಿಯ ಕಟ್ಟೂರ್ ಪ್ರದೇಶದ ಶಾಲೆಯ ಶೌಚಾಲಯದಲ್ಲಿ ಮಗು ಶವವಾಗಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

newborn found dead inside toilet of govt school in tamilnadus trichy probe underway ash
Author
First Published Dec 8, 2022, 8:49 PM IST

ತಮಿಳುನಾಡಿನ (Tamil Nadu) ತಿರುಚ್ಚಿಯ (Trichy) ಸರ್ಕಾರಿ ಶಾಲೆಯ (Government School) ಆವರಣದಲ್ಲಿ ಡಿಸೆಂಬರ್ 7, ಬುಧವಾರದಂದು ನವಜಾತ ಶಿಶುವೊಂದು (New Born Baby) ಪತ್ತೆಯಾಗಿದೆ. ಈ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗು ಮೃತಪಟ್ಟಿದೆ (Death) ಎಂದು ವೈದ್ಯರು ಘೋಷಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸರ್ಕಾರಿ ಶಾಲೆಯೊಂದರಲ್ಲಿ ಪತ್ತೆಯಾದ ಈ ನವಜಾತ ಗಂಡು ಮಗು ಕೆಲವೇ ಗಂಟೆಗಳ ಮುನ್ನ ಜನನವಾಗಿತ್ತು ಎಂದು ಹೇಳಲಾಗಿದೆ. ತಿರುವೆರುಂಬೂರ್ (Thiruverumbur) ಬಳಿಯ ತಿರುಚ್ಚಿಯ ಕಟ್ಟೂರ್ ಪ್ರದೇಶದ ಶಾಲೆಯ ಶೌಚಾಲಯದಲ್ಲಿ (Toilet) ಮಗು ಶವವಾಗಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಶಾಲೆಯ ಟಾಯ್ಲೆಟ್‌ ಕ್ಲೀನ್‌ ಮಾಡಲು ಹೋದಾಗ ಅಲ್ಲಿ ರಕ್ತಸಿಕ್ತ ಗಾಯಗಳೊಂದಿಗೆ ಅಪರಿಚಿತ ನವಜಾತ ಗಂಡು ಮಗುವನ್ನು ಶಾಂತಾ ಎಂಬ ಮಹಿಳೆ ಕಂಡರು ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಇ. ಥೆನ್ಮೋಜಿ ತಿರುವೆಂಬೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ನಂತರ, ತಿರುಚ್ಚಿಯ ಮಹಾತ್ಮ ಗಾಂಧಿ ಮೆಮೋರಿಯಲ್‌ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಆ ಮಗು ಆಸ್ಪತ್ರೆಗೆ ಬರುವ ಮುನ್ನವೇ ಸತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಂತರ, ನವಜಾತ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಇದನ್ನು ಓದಿ: Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಆರ್‌ಪಿಸಿ 174 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆ ಆವರಣದ ಶೌಚಾಲಯದಲ್ಲಿ ಮಗು ಹುಟ್ಟಿದೆಯೇ ಅಥವಾ ಯಾರಾದರೂ ನವಜಾತ ಗಂಡು ಮಗುವನ್ನು ಆ ಶಾಲೆಯ ಶೌಚಾಲಯಕ್ಕೆ ಎಸೆದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇತರ ಆಯಾಮಗಳಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಈ ಮಧ್ಯೆ, ಸ್ಥಳದಲ್ಲಿ ಸುಳಿವುಗಳನ್ನು ಪತ್ತೆಹಚ್ಚಲು ತಮಿಳುನಾಡು ಪೊಲೀಸರು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಯಿತು. ಹಾಗೂ, ಈ ಘಟನೆ ಕುರಿತು ಮಾಹಿತಿ ತಿಳಿದುಕೊಂಡ ನಂತರ, ಆದಿ ದ್ರಾವಿಡರ ಕಲ್ಯಾಣ ಇಲಾಖೆ, ತಹಸೀಲ್ದಾರ್ ಚಂದ್ರ ದೇವನಾಥನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ. 
ಇದೀಗ ಶಾಲೆಯಲ್ಲಿ ಸೂಕ್ತ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಇಂತಹ ಅಹಿತಕರ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ:  ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ಶಾಲೆಯ ಟಾಯ್ಲೆಟ್‌ನಲ್ಲೇ ಹುಟ್ಟಿದ್ದ ಮಗು..!
ಇನ್ನು, ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲಲ್ಲ. ತಮಿಳುನಾಡಿನ ಕಡಲೂರು ಜಿಲ್ಲೆಯ ಭುವನಗಿರಿ ಎಂಬ ಗ್ರಾಮದಲ್ಲಿ 11ನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅಲ್ಲದೆ, ಆ ಮಗುವನ್ನು ಆ ಶಾಲೆಯ ಬಳಿಯ ಪೊದೆಯಲ್ಲಿ ಎಸೆದು ಹೋಗಿದ್ದಳು ಎಂದು ವರದಿಯಾಗಿತ್ತು. ಮತ್ತೊಂದೆಡೆ,  16 ವರ್ಷದ ಬಾಲಕಿಯನ್ನು ಗರ್ಭ ಧರಿಸುವಂತೆ ಮಾಡಿದ 10ನೇ ತರಗತಿ ಬಾಲಕನನ್ನು ಪೊಲೀಸರು ಬಂಧಿಸಿದ್ದರು. ಸರಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗುರುವಾರ ಪೊದೆಯಲ್ಲಿ ನವಜಾತ ಶಿಶುವಿನ ಶವವನ್ನು ಕಂಡು ಸಹಾಯಕ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ, ಪೊಲೀಸ್ ತಂಡವು ಶಾಲೆಗೆ ಧಾವಿಸಿ, ಮಗುವಿನ ಶವವನ್ನು ತೆಗೆದುಕೊಂಡು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಚಿದಂಬರಂನ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿತ್ತು.

ಈ ಹಿನ್ನೆಲೆ, ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ನಂತರ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಈ ಸಮಯದಲ್ಲಿ, ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.  

ಇದನ್ನೂ ಓದಿ: ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘ ಮುಖಂಡನ ಪತ್ನಿ

Follow Us:
Download App:
  • android
  • ios