Aishwarya Rai fan love story: ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿರುವ ನಟಿ ಐಶ್ವರ್ಯಾ ರೈ  ವೀಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಮೇಕಪ್ ಆರ್ಟಿಸ್ಟ್ ಆದಿತ್ಯ ಮದಿರಾಜು, ತಮ್ಮ ಹಾಗೂ ತಮ್ಮ ಪತಿಯ ಪ್ರೇಮಕಥೆಗೆ ಐಶ್ವರ್ಯಾ ರೈ ಹೇಗೆ ಕಾರಣರಾದರು ಎಂಬ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿದ್ದಾರೆ

ಬಾಲಿವುಡ್ ನಟಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಜೊತೆಗೆ ಡಿವೋರ್ಸ್ ಊಹಾಪೋಹಾದ ವರದಿಗಳ ನಡುವೆಯೂ ಎಲ್ಲಾ ಅಸಮಾಧಾನಗಳನ್ನು ಮೀರಿ ಜೊತೆಯಾಗಿ ಬದುಕುತ್ತಿದ್ದಾರೆ. ಪ್ರಸ್ತುತ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚ್ತಿರುವ ಐಶ್ವರ್ಯಾ ರೈ ಅವರ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಇವುಗಳ ನಡುವೆ ಅವರ ಸ್ಕ್ರೀನ್ ಹಿಂದಿನ ವೀಡಿಯೋವೊಂದು ಈಗ ಇನ್ನು ಹೆಚ್ಚು ವೈರಲ್ ಆಗಿದೆ.

ನಿಮ್ಮಿಂದಾಗಿ ನಾನು ನನ್ನ ಗಂಡ ಜೊತೆಗಿದ್ದೇವೆ..!

ಪ್ರಸಿದ್ಧ ಮೇಕಪ್ ಆರ್ಟಿಸ್ಟ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಆದಿತ್ಯ ಮದಿರಾಜು ಅವರು ಐಶ್ವರ್ಯಾ ಜೊತೆಗಿನ ತಮ್ಮ ಸಾಮಾನ್ಯವೆನಿಸುವ ಮಾತುಕತೆಯೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಆದಿತ್ಯ ಅವರು ತುಂಬಾ ವೈಯಕ್ತಿಕವೆನಿಸುವ ವಿಚಾರವನ್ನು ಐಶ್ವರ್ಯಾ ಜೊತೆ ಹಂಚಿಕೊಂಡಿದ್ದಾರೆ. ನಾನು ನಿಮಗೆ ಏನೋ ಹೇಳಬೇಕು ಎಂದ ಅವರು ನಾನು ಹಾಗೂ ನನ್ನ ಪತಿ ನಿಮ್ಮಿಂದಾಗಿ ಜೊತೆಯಾಗಿದ್ದೇವೆ ಎಂದು ಹೇಳುತ್ತಾರೆ. ಆದಿತ್ಯ ಮದಿರಾಜು ಅವರ ಮಾತು ಕೇಳಿ ಐಶ್ವರ್ಯಾ ರೈ ಅಚ್ಚರಿಯಿಂದ ಹೇಗೆ ಎಂದು ಕೇಳಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಆದಿತ್ಯ ಮುದಿರಾಜು, ನಾವು ನಮ್ಮ ಮೊದಲ ಡೇಟ್‌ನಲ್ಲೇ ನಿಮ್ಮ ಬಗ್ಗೆ 2 ಗಂಟೆಯವರೆಗೆ ಮಾತನಾಡಿದೆವು.

ಸಲಿಂಗಿ, ಫೇಮಸ್ ಮೇಕಪ್ ಆರ್ಟಿಸ್ಟ್ ಐಶ್ವರ್ಯಾಗೆ ಹೇಳಿದ್ದೇನು?

ಆತ ನೀನು ಐಶ್ವರ್ಯಾ ರೈ ರೀತಿ ಇದ್ದಿಯಾ ಅದ್ಕೆ ನಾನು ನಿನ್ನನ್ನು ಮದುವೆಯಾದೆ ಎಂದು ಹೇಳಿದ. ಆತನ ಹೆಸರು ಅಮಿತ್, ಇದು ನನ್ನ ಮಗಳು ಯಾನಾ ಎಂದು ಮೊಬೈಲ್‌ನಲ್ಲಿ ಮಗಳ ಫೋಟೋವನ್ನು ಆದಿತ್ಯ ಐಶ್ವರ್ಯಾ ರೈ ಅವರಿಗೆ ತೋರಿಸಿದ್ದಾರೆ. ಐಶ್ವರ್ಯಾ ಆತನ ಫೋನ್‌ನಲ್ಲಿ ಫೋಟೋ ನೋಡಿ, ಆಕೆಗೆಷ್ಟು ವಯಸ್ಸು ಎಂದು ಕೇಳಿದ್ದು, ಅದ್ಕೆ ಉತ್ತರಿಸಿದ ಆದಿತ್ಯ, ಆಕೆಗೆ ಎರಡೂವರೆ ವರ್ಷ, ಯಾನಾ ಎಂದರೆ ಹಿಬ್ರೂ ಭಾಷೆಯಲ್ಲಿ ಮೂಲತಃ ದೇವರು ದಯಾಳು ಎಂದರ್ಥ. ಒಬ್ಬ ವ್ಯಕ್ತಿಯಾಗಿ ನೇರವಾಗಿ ನೋಡಲು ಸಿಕ್ಕಿದ್ದು, ಒಂದು ಕನಸ್ಸಾಗಿತ್ತು. ನೀವು ಇನ್ನು ಸೊಗಸಾಗಿ ಇದ್ದೀರಿ, ನೀವೊಬ್ಬರು ನಟಿ, ನೀವೊಬ್ಬರು ಡಾನ್ಸರ್ ನೀವೊಬ್ಬರು ಮಹಿಳೆ ಎಂದು ಆದಿತ್ಯ ಮದುರಾಜು ಅವರು ಐಶ್ವರ್ಯಾ ರೈ ಅವರನ್ನು ಹಾಡಿ ಹೊಗಳಿದ್ದಾರೆ. ನಿಮ್ಮನ್ನು ಭೇಟಿಯಾಗುವುದು ಕನಸ್ಸಾಗಿತ್ತು ಐಶ್ವರ್ಯಾ ರೈ ಬಚ್ಚನ್ ಎಂದು ಬರೆದು ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಐಶ್ವರ್ಯಾ ರೈ ಅವರು ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಮನೀಷ್ ಮಲ್ಹೋತ್ರಾ ಅವರು ಡಿಸೈನ್ ಮಾಡಿದ ಧಿರಿಸು ಧರಿಸಿದ್ದು, ಶೆರ್ವಾನಿ ಲುಕ್ ಅನ್ನು ಅದ್ಭುತವಾಗಿಸಿದರು. ಆದಿತ್ಯ ಮದಿರಾಜು ಅವರು ಫ್ಯಾಷನ್ ಲೋಕದಲ್ಲಿ ಒಂದು ಅಚ್ಚಳಿಯದ ಹೆಸರಾಗಿದ್ದು, ಅವರು ಟ್ರಾನ್ಸ್‌ಜಂಡರ್ ಸಮುದಾಯದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. , LGBTQ+ ಸಮುದಾಯದ ದಕ್ಷಿಣ ಏಷ್ಯಾದ ಸದಸ್ಯರಾಗಿದ್ದು, ಜೀವನದಲ್ಲಿ ಎದುರಾದ ಹಲವು ನಿಯಮಗಳನ್ನು ಉಲ್ಲಂಘಿಸಿ ಮತ್ತು ಅಡೆತಡೆಗಳನ್ನು ಮುರಿದು ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು

ಇದನ್ನೂ ಓದಿ: 35 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ

ಇದನ್ನೂ ಓದಿ: ಪಾಕಿಸ್ತಾನದ ಪ್ಯಾರಾ ಮಿಲಿಟರಿ ಕಚೇರಿ ಮುಂದೆಯೇ ಪ್ರಬಲ ಕಾರ್ ಬಾಂಬ್ ಸ್ಪೋಟ: 10 ಸಾವು

ಇದನ್ನೂ ಓದಿ: ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ

ಇದನ್ನೂ ಓದಿ: ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ

ಇದನ್ನೂ ಓದಿ: ಗರ್ಭ ನಿರೋಧಕ ಕಾಪರ್‌ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!

View post on Instagram