Asianet Suvarna News Asianet Suvarna News

ದೇಶದ ಜನರ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಮೋದಿ ಏನು ಮಾಡಲೂ ಸಿದ್ಧರಿದ್ದಾರೆ: ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿಯವರು ದೇಶಭಕ್ತಿ ಹಾಗೂ ದೇಶದ ಜನರ ಬಗ್ಗೆ ಅವರು ವಹಿಸಿರುವ ಕಾಳಜಿ ಬಗ್ಗೆ ಕೊಂಡಾಡಿದ್ದಾರೆ.  ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಹಾಗೂ ದೇಶದ ಹಿತಾಸಕ್ತಿ, ದೇಶದ ಸುರಕ್ಷತೆಯ ವಿಚಾರ ಬಂದಾಗ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿರುತ್ತಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. 

Modi ready to do anything for country's people and national interest Russian President Vladimir Putin akb
Author
First Published Dec 8, 2023, 11:21 AM IST

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿಯವರು ದೇಶಭಕ್ತಿ ಹಾಗೂ ದೇಶದ ಜನರ ಬಗ್ಗೆ ಅವರು ವಹಿಸಿರುವ ಕಾಳಜಿ ಬಗ್ಗೆ ಕೊಂಡಾಡಿದ್ದಾರೆ.  ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಹಾಗೂ ದೇಶದ ಹಿತಾಸಕ್ತಿ, ದೇಶದ ಸುರಕ್ಷತೆಯ ವಿಚಾರ ಬಂದಾಗ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿರುತ್ತಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. 

ರಷ್ಯಾದ (Russia)ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಶ್ಲಾಘಿಸಿದ್ದಾರೆ, ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತದ ಪ್ರಧಾನಿ 'ಕಠಿಣ ನಿಲುವು' ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ನೀತಿಯು ನವದೆಹಲಿ ಮತ್ತು ಮಾಸ್ಕೋ ನಡುವಿನ ಆಳವಾದ ಸಂಬಂಧಗಳಿಗೆ ಭರವಸೆಯಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. 

ಕನಿಷ್ಠ 8 ಮಕ್ಕಳ ಹೆರುವಂತೆ ರಷ್ಯಾ ಅಧ್ಯಕ್ಷ ಕರೆ: ಜನಸಂಖ್ಯೆ ಹೆಚ್ಚಿಸಲು ವ್ಲಾಡಿಮಿರ್‌ ಪುಟಿನ್‌ ಸಲಹೆ

ಮಾಧ್ಯಮ ಸಂದರ್ಶನವೊಂದರಲ್ಲಿ, ಮಾತನಾಡಿದ ರಷ್ಯಾ ಅಧ್ಯಕ್ಷ (Russian President), ಮೋದಿಯವರನ್ನು ಹೆದರಿಸಿ ಬೆದರಿಸಿ ಭಾರತ ಮತ್ತು ಭಾರತೀಯ ಜನರ ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಯಾವುದೇ ಕ್ರಮ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಅವರ ಮೇಲೆ ಅಂತಹ ಒತ್ತಡವಿದೆ ಎಂದು ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದ್ದಾರೆ.  ಮೋದಿಯವರು ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಪ್ರಮಾಣಿಕವಾಗಿ ಹೇಳಬೇಕಾದರೆ, ಕೆಲವೊಮ್ಮೆ ನನಗೆ ದೇಶದ ಹಿತಾಸಕ್ತಿ ಬಗ್ಗೆ ಅವರು ತೆಗೆದುಕೊಳ್ಳುವ ಈ ಕಠಿಣ ನಿರ್ಧಾರದ ಬಗ್ಗೆ ಅಚ್ಚರಿ ಎನಿಸುತ್ತದೆ ಎಂದರು.

ಇದೇ ವೇಳೆ ರಷ್ಯಾ ಹಾಗೂ ಚೀನಾ ನಡುವಿನ ಸಂಬಂಧಗಳ ಬಗ್ಗೆ ಮಾತನಾಡಿದ ಪುಟಿನ್ (Vladimir Putin), ರಷ್ಯಾ ಹಾಗೂ ಚೀನಾ ನಡುವಿನ ಸಂಬಂಧವೂ ಎಲ್ಲಾ ದಿಕ್ಕುಗಳಿಂದಲೂ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿವೆ  ಮತ್ತು ಇದರ ಮುಖ್ಯ ಭರವಸೆ ಪ್ರಧಾನಿ ಮೋದಿಯವರ ನೀತಿಯಾಗಿದೆ ಎಂದು ರಷ್ಯಾದ ಅಧ್ಯಕ್ಷರು ಹೇಳಿದ್ದಾರೆ. 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕ್ಷೇಮ, ಕ್ರೆಮ್ಲಿನ್‌ ವಕ್ತಾರರ ಮಾಹಿತಿ!

ಭಾರತವು ಆಯೋಜಿಸಿದ್ದ ಕಳೆದ ತಿಂಗಳ ವಿಶೇಷ ವರ್ಚುವಲ್ G20 ಸಮ್ಮೇಳನದಲ್ಲಿ ( G20 conference), ರಷ್ಯಾವು ಭಾರತದ G20 ಅಧ್ಯಕ್ಷ ಸ್ಥಾನದ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿತ್ತು.  ಸೆಪ್ಟೆಂಬರ್‌ನಲ್ಲಿ ನವದೆಹಲಿ ಶೃಂಗಸಭೆಯಲ್ಲಿ ಸಾಧಿಸಿದ ಉತ್ತಮ ಫಲಿತಾಂಶಗಳೊಂದಿಗೆ ಅದರ  ಅತ್ಯಂತ ಉತ್ಪಾದಕ ಕೆಲಸಕ್ಕೂ ಕೂಡ ರಷ್ಯಾ ಶ್ಲಾಘನೆ ವ್ಯಕ್ತಪಡಿಸಿತ್ತು.

ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ (Dmitry Peskov), ಭಾರತವು  ಅಧ್ಯಕ್ಷರ ಅತ್ಯಂತ ಉತ್ಪಾದಕ ಕೆಲಸ ಮತ್ತು ಉತ್ತಮ ಫಲಿತಾಂಶಗಳನ್ನು ಮತ್ತೊಮ್ಮೆ ಪ್ರದರ್ಶಿಸಿದೆ, ಈ ರೀತಿಯ ಕಾರ್ಯಕ್ರಮಗಳನ್ನು ಅತ್ಯಂತ ಸಮಯೋಚಿತ ಶೈಲಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಪುಟಿನ್ ಮತ್ತು ಪಿಎಂ ಮೋದಿ ನಡುವಿನ ಶೃಂಗಸಭೆಯ ಬಗ್ಗೆ ಮಾಸ್ಕೋ (Mascow) ಮತ್ತು ನವದೆಹಲಿ ಮಾತುಕತೆ ನಡೆಸುತ್ತಿವೆ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು.

ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಮೃತಪಟ್ಟಿದ್ದಾರಾ? ಸಾವು ಘೋಷಿಸಿದ್ದ ವೈದ್ಯರಿಗೆ ಗೃಹ ಬಂಧನ?

Follow Us:
Download App:
  • android
  • ios