ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದ ಕುರಿತಾದ ಊಹಾಪೋಹಗಳನ್ನು ಮಂಗಳವಾರ ಕ್ರೆಮ್ಲಿನ್ ತಿರಸ್ಕರಿಸಿದೆ, ಅವರು ಆರೋಗ್ಯವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ಹೇಳಿದೆ. ಪುಟಿನ್‌ ಬಾಡಿ ಡಬಲ್‌ ಗಾಸಿಪ್‌ಗಳು ಕೇಳೋದಕ್ಕೆ ಕೆಟ್ಟದಾಗಿದೆ ಎಂದು ತಿಳಿಸಿದೆ.

ನವದೆಹಲಿ (ಅ.24): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಗಕ್ಷೇಮದ ಬಗ್ಗೆ ವದಂತಿಗಳನ್ನು ಕ್ರೆಮ್ಲಿನ್‌ ತಳ್ಳಿಹಾಕಿದೆ. ಅವರು ಫಿಟ್‌ ಆಗಿದ್ದು, ಅವರ ಆರೋಗ್ಯ ಕೂಡ ಉತ್ತಮವಾಗಿದೆ ಎಂದು ತಿಳಿಸಿದೆ. ಪತ್ರಕರ್ತರೊಂದಿಗೆ ದಿನನಿತ್ಯದ ಬ್ರೀಫಿಂಗ್ ಸಮಯದಲ್ಲಿ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಪುಟಿನ್‌ ಬಾಡಿ ಡಬಲ್ಸ್ ಅನ್ನು ಬಳಸುತ್ತಾರೆ ಎಂಬ ಹೇಳಿಕೆಯನ್ನು ನಿರಾಕರಿಸಿದರು. ರಾಯಿಟರ್ಸ್‌ನ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕೇಳಲು ವಿಚಿತ್ರವಾಗಿದೆ ಎಂದಿದ್ದಾರೆ. ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಪ್ರಸಾರ ಮಾಡಿದ ರಷ್ಯಾದ ಟೆಲಿಗ್ರಾಮ್ ಚಾನೆಲ್‌ನಿಂದ ಪರಿಶೀಲಿಸದ ವರದಿಗಾಗಿ, ಪುಟಿನ್ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಲಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್‌ಗೆ ಭಾನುವಾರ ಸಂಜೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ ಆಗಿದೆ ಎನ್ನುವ ವರದಿಗಳು ಪ್ರಸಾರವಾಗಿದ್ದವು. 2022 ರಿಂದ 71 ವರ್ಷದ ಪುಟಿನ್ ಅವರ ಆರೋಗ್ಯದ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ. ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಗಂಭೀರ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ವಿವಿಧ ವರದಿಗಳು ಬಂದಿವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಮಯದಲ್ಲಿ ಪುಟಿನ್‌ ಅವರ ದೇಹದಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿ ಈ ರೀತಿಯ ಸುದ್ದಿಗಳನ್ನು ಮಾಡಲಾಗಿತ್ತು.

ರಷ್ಯಾದ ಟೆಲಿಗ್ರಾಮ್ ಚಾನೆಲ್‌ನಲ್ಲಿ 'Z- ಬ್ಲಾಗರ್' ಪೊಜ್ಡ್ನ್ಯಾಕೋವ್ ಪುಟಿನ್‌ ಅವರ ಆರೋಗ್ಯದ ಬಗ್ಗೆ ಮೊದಲು ಪೋಸ್ಟ್‌ ಮಾಡಿತ್ತು. ಅದರಲ್ಲಿ ಪುಟಿನ್‌ ಅವರ ಚಿತ್ರದೊಂದಿಗೆ ವರೇ, ನೀವು ನಮ್ಮನ್ನು ಬಿಟ್ಟು ಹೋಗಬೇಡಿ, ನೀವು ಜೀವಂತವಾಗಿ ಮತ್ತು ಆರೋಗ್ಯವಾಗಿರುವಿರಿ ಎಂದು ದೇವರಿಗೆ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಬರೆಯಲಾಗಿತ್ತು. 2020 ರ ಸಂದರ್ಶನದಲ್ಲಿ, ಪುಟಿನ್ ಬಾಡಿ ಡಬಲ್ಸ್ ಬಳಕೆಯ ಬಗ್ಗೆ ನಿರಂತರ ಊಹಾಪೋಹಗಳನ್ನು ಉದ್ದೇಶಿಸಿ, ಭದ್ರತಾ ಉದ್ದೇಶಗಳಿಗಾಗಿ ಈ ಹಿಂದೆ ಒಂದನ್ನು ಬಳಸುವ ಆಯ್ಕೆಯನ್ನು ಅವರಿಗೆ ನೀಡಲಾಗಿತ್ತು ಎಂದು ಒಪ್ಪಿಕೊಂಡಿದ್ದರು.

ಬೆಡ್‌ ಮೇಲೆ ಬಿದ್ದ ಬೋಲ್ಡ್‌ ಚಿತ್ರಗಳನ್ನು ಹಂಚಿಕೊಂಡ ಬಿಗ್‌ ಬಾಸ್‌ ನಟಿ!

ಈ ವರ್ಷದ ಏಪ್ರಿಲ್‌ನಲ್ಲಿ, ಪೆಸ್ಕೋವ್ ದೇಹ ಡಬಲ್ಸ್ ಕಲ್ಪನೆಯನ್ನು "ಇನ್ನೊಂದು ಸುಳ್ಳು" ಎಂದು ಬಲವಾಗಿ ತಳ್ಳಿಹಾಕಿದರು ಮತ್ತು ಪುಟಿನ್ ಅತ್ಯುತ್ತಮ ಆರೋಗ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದರು. ಕ್ರೆಮ್ಲಿನ್ ನಿರಂತರವಾಗಿ ಇಂತಹ ವದಂತಿಗಳನ್ನು ನಿರಾಕರಿಸಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಏಪ್ರಿಲ್‌ನಲ್ಲಿ ಕ್ಯಾನ್ಸರ್ ವದಂತಿಗಳನ್ನು "ಕಾಲ್ಪನಿಕ ಮತ್ತು ಸುಳ್ಳು" ಎಂದು ತಳ್ಳಿಹಾಕಿದರು. ಅದೇ ರೀತಿ, ಸಿಐಎ ನಿರ್ದೇಶಕ ವಿಲಿಯಂ ಜೆ ಬರ್ನ್ಸ್ ಜುಲೈನಲ್ಲಿ ಹೇಳಿಕೆ ನೀಡಿದ್ದು, ಏಜೆನ್ಸಿ ಹೇಳುವಂತೆ, ಪುಟಿನ್ "ಸಂಪೂರ್ಣವಾಗಿ ತುಂಬಾ ಆರೋಗ್ಯಕರ" ಎಂದು ಹೇಳಿತ್ತು.

ಬೀದಿ ನಾಯಿಗಳ ದಾಳಿ, ವಾಘ್‌ ಬಕ್ರಿ ಕಂಪನಿ ಮಾಲೀಕ ಪರಾಗ್‌ ದೇಸಾಯಿ ಸಾವು