MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಮೃತಪಟ್ಟಿದ್ದಾರಾ? ಸಾವು ಘೋಷಿಸಿದ್ದ ವೈದ್ಯರಿಗೆ ಗೃಹ ಬಂಧನ?

ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಮೃತಪಟ್ಟಿದ್ದಾರಾ? ಸಾವು ಘೋಷಿಸಿದ್ದ ವೈದ್ಯರಿಗೆ ಗೃಹ ಬಂಧನ?

ಮಾಸ್ಕೋ:  ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಸುದ್ದಿಯನ್ನು ರಷ್ಯಾ ನಿರಾಕರಿಸಿದ್ದು, ಇದೊಂದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಹೇಳಿದೆ.   

3 Min read
Anusha Kb
Published : Oct 27 2023, 01:02 PM IST
Share this Photo Gallery
  • FB
  • TW
  • Linkdin
  • Whatsapp
117

ಜನರಲ್ ಎಸ್‌ವಿಆರ್‌ ಎಂಬ ಟೆಲಿಗ್ರಾಮ್‌ನ ಚಾನೆಲೊಂದು ರಷ್ಯಾ ಅಧ್ಯಕ್ಷ ಪುಟಿನ್ ಅವರು ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮಾಸ್ಕೋದಲ್ಲಿರುವ ತಮ್ಮ ವಲ್ಡೈ ನಿವಾಸದಲ್ಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ರಷ್ಯಾ ಸರ್ಕಾರದ ಅಧಿಕೃತ ಮಾಧ್ಯಮ ಈ ವಿಚಾರವನ್ನು ಖಡಾಖಂಡಿತವಾಗಿ ತಿರಸ್ಕರಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮಾಧ್ಯಮ ವಕ್ತಾರರು, ಜಾಗತಿಕ ನಾಯಕ ಪುಟಿನ್ ಸಾವು ಒಂದು ಸುಳ್ಳು ಸುದ್ದಿ ಎಂದಿದ್ದಾರೆ. 

217

ಪುಟಿನ್‌ ಸಾವಿನ ಸುದ್ದಿ ಪ್ರಕಟಿಸಿರುವ ಟೆಲಿಗ್ರಾಮ್ ಚಾನೆಲ್ 'ಜನರಲ್ ಎಸ್‌ವಿಆರ್‌', ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌  ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಬಹಳ ಸಮಯದಿಂದಲೂ ವರದಿ ಮಾಡುತ್ತಲೇ ಇತ್ತು.  71 ವರ್ಷದ ಪುಟಿನ್ ಅವರ ಪರಿವಾರವೂ ಅಧಿಕಾರಕ್ಕಾಗಿ ಅವರ ಪ್ರತಿರೂಪದಲ್ಲಿರುವ ವ್ಯಕ್ತಿಯನ್ನು ಪುಟಿನ್‌ರಂತೆ ಬಿಂಬಿಸಲು ಯತ್ನ ಮಾಡುತ್ತಿದೆ. ಇದರಿಂದ ರಷ್ಯಾದಲ್ಲಿ ದಂಗೆ ನಡೆಯುತ್ತಿದೆ ಎಂದೂ ಕೂಡ ಈ ಚಾನೆಲ್ ವರದಿ ಮಾಡಿತ್ತು.

317

ಆದರೆ ಪುಟಿನ್ ಮಾಧ್ಯಮ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತ್ರ, ಸರ್ಕಾರಿ ಮಾಧ್ಯಮ RIA Novostiಗೆ  ಈ ವಿಚಾರ ಅಸಂಬದ್ಧ ಗಾಳಿಸುದ್ದಿಯ ಗುಚ್ಚ ಎಂದು ಹೇಳಿದ್ದಾರೆ.

417

ಅಲ್ಲದೇ  ಕಳೆದ ವಾರ ಪುಟಿನ್ ಅವರು ಹೃದಯಾಘಾತಕ್ಕೊಳಗಾಗಿದ್ದಾರೆ ಎಂಬ ವರದಿಯನ್ನು ಕೂಡ ಅವರು ತೀವ್ರವಾಗಿ ನಿರಾಕರಿಸಿದ್ದಾರೆ. ಅಲ್ಲದೇ ಪುಟಿನ್ ಹೋಲುವ ವ್ಯಕ್ತಿಯನ್ನು ಪುಟಿನ್ ಅವರಂತೆ ಬಿಂಬಿಸಲಾಗುತ್ತಿದೆ ಎಂಬ ವಿಚಾರವನ್ನು ಅವರು ತಿರಸ್ಕರಿಸಿದ್ದಾರೆ. 

517

ಆದರೆ ಒಂದು ಮೂಲದ ಪ್ರಕಾರ ಹೀಗೆ ವರದಿ ಮಾಡಿರುವ ಟೆಲಿಗ್ರಾಮ್ ಚಾನೆಲ್‌ಗೆ ಒಂದು ಕಾಲದಲ್ಲಿ ಪುಟಿನ್‌ಗೆ ಆತ್ಮೀಯರಾಗಿದ್ದವರು ಆದರೆ ಈಗ ನೆಲೆ ಇಲ್ಲದಾಗಿರುವವರು ಹಣ ನೀಡುತ್ತಿದ್ದಾರೆ ಎನ್ನಲಾಗಿದೆ.

617

ಈ ಸುಳ್ಳು ವರದಿಗಳು ರಷ್ಯಾ ಉಕ್ರೇನ್‌ ಯುದ್ಧದ ನಂತರ ರಷ್ಯಾದಲ್ಲಿ ನಡೆಯುತ್ತಿರುವ  ತೀವ್ರವಾದ ಅಧಿಕಾರದ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ವರದಿಯಲ್ಲಿ ಜಿಆರ್‌ಯು ಮಿಲಿಟರಿ ಗುಪ್ತಚರ (GRU military intelligence) ಅಂಶಗಳು ಭಾಗಿಯಾಗಿರಬಹುದು ಎಂಬ ಅನುಮಾನವೂ ಇದೆ ಎಂದು ದಿ ಮಿರರ್ ವರದಿ ಮಾಡಿದೆ. 

717

ಜನರಲ್ ಎಸ್‌ವಿಆರ್ ಟೆಲಿಗ್ರಾಮ್ ಚಾನೆಲ್ ಮಾಡಿದ ವರದಿ ಹೀಗಿದೆ ನೋಡಿ, ' ಪ್ರಸ್ತುತ ರಷ್ಯಾದಲ್ಲಿ ದಂಗೆಯ ಪ್ರಯತ್ನ ನಡೆಯುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಸಂಜೆ 8.42ರ ಮಾಸ್ಕೋ ಕಾಲಮಾನದಲ್ಲಿ ಮಾಸ್ಕೋದಲ್ಲಿರುವ ವಲ್ಡೈ (Valdai) ನಿವಾಸದಲ್ಲಿ ಸಾವಿಗೀಡಾಗಿದ್ದಾರೆ. ವೈದ್ಯರು ಅವರಿಗೆ ಚಿಕಿತ್ಸೆ ನಿಲ್ಲಿಸಿದ್ದು, ಅವರ ಸಾವಿನ ಸುದ್ದಿಯ ಘೋಷಣೆ ಮಾಡಿದ್ದಾರೆ ಎಂದು ಎಸ್‌ವಿಆರ್‌ ವರದಿ ಮಾಡಿದೆ. 

817

ಅಲ್ಲದೇ ಪುಟಿನ್ ಸಾವನ್ನು ಘೋಷಿಸಿದ್ದ ವೈದ್ಯರನ್ನು ಪುಟಿನ್‌ ಶವದ ಜೊತೆಯೇ ಕೋಣೆಯೊಂದರಲ್ಲಿ ನಿರ್ಬಂಧಿಸಲಾಗಿದೆ ಎಂದು ಚಾನೆಲ್ ವರದಿ ಮಾಡಿದೆ.

917

ಫೆಡರಲ್ ಗಾರ್ಡ್ ಸೇವೆಯ ನಿರ್ದೇಶಕ ಡಿಮಿಟ್ರಿ ಕೊಚೆವ್‌ (Dmitry Kochnev) ಅವರ ವೈಯಕ್ತಿಕವಾದ ಆದೇಶದ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆಯ ಸದಸ್ಯರು ವೈದ್ಯರನ್ನು ನಿರ್ಬಂಧಿಸಿದ್ದಾರೆ. 

1017

ಡಿಮಿಟ್ರಿ ಕೊಚೆವ್ ಅವರು ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೆವ್ ಅವರ ಸಂಪರ್ಕದಲ್ಲಿದ್ದು, ಅವರಿಂದ ಸೂಚನೆಗಳನ್ನು ಸ್ವೀಕರಿಸುತ್ತಾರೆ.

1117

ಅಲ್ಲದೇ ಅಧ್ಯಕ್ಷ ಪುಟಿನ್‌ ತದ್ರೂಪಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಹಾಗೂ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಚಾನೆಲ್ ವರದಿ ಮಾಡಿದೆ. 
 

1217

72 ವರ್ಷದ ಪಟ್ರುಶೆವ್ ಅವರು ರಷ್ಯಾದ ಪ್ರಬಲ ಭದ್ರತಾ ಮಂಡಳಿಯ (Security Council)ಕಾರ್ಯದರ್ಶಿ ಮತ್ತು ಪುಟಿನ್ ಅವರ ಉನ್ನತ ಗುಪ್ತಚರ ಸಲಹೆಗಾರರಾಗಿದ್ದಾರೆ.

1317

ಪಟ್ರುಶೆವ್ ಅವರು ಅಧ್ಯಕ್ಷ ಪುಟಿನ್‌ ಉತ್ತರಾಧಿಕಾರಿಯಾಗಲು ಮುಂಚೂಣಿ ಸ್ಥಾನದಲ್ಲಿದ್ದಾರೆ. ಆದರೆ ಅವರು ತಮ್ಮ 46 ವರ್ಷದ ಪುತ್ರ ಡಿಮಿಟ್ರಿ  ಪಟ್ರುಶೆವ್‌ಗೆ (Dmitry Patrushev) ಅಧಿಕಾರ ಸಿಗಬೇಕೆಂದು ಬಯಸುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ. 

1417

ಪುಟಿನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಹಾಗೂ ಅವರ ಸ್ಥಾನದಲ್ಲಿ ಅವರಂತೆ ಪ್ಲಾಸ್ಟಿಕ್ ಸರ್ಜರಿ (plastic surgery) ಮಾಡಿಸಿಕೊಂಡಿರುವ ಭದ್ರತಾ ಸೇವೆಗಳಿಂದ ತರಬೇತಿ ಪಡೆದ ನಟರೊಬ್ಬರು ಪುಟಿನ್ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಈ ಚಾನೆಲ್ ಕಳೆದ ತಿಂಗಳೇ ವರದಿ ಮಾಡಿತ್ತು. 

1517
Vladimir Putin

Vladimir Putin

ಈ ವಿಚಾರವನ್ನು ಬೇಹುಗಾರಿಕೆ ಮತ್ತು ರಾಜತಾಂತ್ರಿಕರ ತರಬೇತಿ ಅಕಾಡೆಮಿಯಾಗಿರುವ ಮಾಸ್ಕೋದ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ರಿಲೇಶನ್ಸ್‌ನ (International Relations) ಮಾಜಿ ಪ್ರೊಫೆಸರ್ ವ್ಯಾಲೆರಿ ಸೊಲೊವೆ ಅವರು ಕೂಡ ನಿಜ ಎಂಬಂತೆ ಮಾತನಾಡಿದ್ದಾರೆ. 

1617

ಪ್ರಸ್ತುತ ರಷ್ಯಾ ಅಧ್ಯಕ್ಷ ಪುಟಿನ್ ಅವರು ಜೀವಂತ ದಿನಗಳು ಮುಗಿದಿವೆ ಎಂದೂ ಅವರು ಇತ್ತೀಚೆಗೆ ಹೇಳಿದ್ದರು. ಇದರ ಜೊತೆಗೆ ಉಕ್ರೇನ್‌ ಮಿಲಿಟರಿ ಗುಪ್ತಚರ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕಿರಿಲೋ ಬುಡಾನೋವ್ ಅವರು ಕೂಡ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಅವರು 2022ರ ಜೂನ್‌ನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. 

1717
ಚೀನಾ ಅಧ್ಯಕ್ಷರ ಜೊತೆ ಪುಟಿನ್

ಚೀನಾ ಅಧ್ಯಕ್ಷರ ಜೊತೆ ಪುಟಿನ್

ಎಲ್ಲರಿಗೂ ತಿಳಿದಿರುವ ವ್ಯಕ್ತಿಯನ್ನು ಕೊನೆಯ ಬಾರಿಗೆ 26 ಜೂನ್ 2022 ರಂದು ನೋಡಲಾಗಿತ್ತು ಎಂದು ಅವರು ಕಳೆದ ತಿಂಗಳು ಹೇಳಿಕೊಂಡಿದ್ದರು.  ಆದರೆ ಪುಟಿನ್ ವಕ್ತಾರರು ಮಾತ್ರ ಈ ಎಲ್ಲಾ ವಿಚಾರಗಳನ್ನು ತಿರಸ್ಕರಿಸಿದ್ದು, ಈ ಸುದ್ದಿಗಳೆಲ್ಲಾ ಸತ್ಯಕ್ಕೆ ದೂರವಾದುದ್ದು ಎಂದಿದ್ದಾರೆ. 

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ರಷ್ಯಾ
ರಷ್ಯಾದ ಅಧ್ಯಕ್ಷರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved