Asianet Suvarna News Asianet Suvarna News

ಕನಿಷ್ಠ 8 ಮಕ್ಕಳ ಹೆರುವಂತೆ ರಷ್ಯಾ ಅಧ್ಯಕ್ಷ ಕರೆ: ಜನಸಂಖ್ಯೆ ಹೆಚ್ಚಿಸಲು ವ್ಲಾಡಿಮಿರ್‌ ಪುಟಿನ್‌ ಸಲಹೆ

ನಾವು ಈ ಸಂಪ್ರದಾಯ ರಕ್ಷಿಸೋಣ. ಪ್ರತಿಯೊಬ್ಬ ಮಹಿಳೆಯೂ ಕನಿಷ್ಠ 8 ಮಕ್ಕಳಿಗೆ ಜನ್ಮ ನೀಡಿ. ದೊಡ್ಡ ಕುಟುಂಬಗಳು ಉದಯಿಸಲಿ. ಕುಟುಂಬವು ಕೇವಲ ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ. ಇದು ಆಧ್ಯಾತ್ಮಿಕ ವಿದ್ಯಮಾನ ಮತ್ತು ನೈತಿಕತೆಯ ಮೂಲವಾಗಿದೆ ಎಂದೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರೇರೇಪಿಸಿದ್ದಾರೆ.

vladimir putin urges russian women to have 8 or more children ash
Author
First Published Dec 2, 2023, 11:34 AM IST

ಮಾಸ್ಕೋ (ಡಿಸೆಂಬರ್ 2, 2023): ದೇಶದ ಜನಸಂಖ್ಯೆ ಹೆಚ್ಚಿಸಲು ರಷ್ಯಾದ ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ಕನಿಷ್ಠ 8 ಮಕ್ಕಳನ್ನು ಹೆರಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕರೆ ನೀಡಿದ್ದಾರೆ. ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದಲೂ ಕುಸಿಯುತ್ತಿದೆ ಮತ್ತು ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಜತೆ ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ 8 ರಿಂದ 9 ಲಕ್ಷ ಜನರು ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಸ್ಕೋದಲ್ಲಿ ವರ್ಲ್ಡ್‌ ರಷ್ಯನ್ ಪೀಪಲ್ಸ್ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದ ವ್ಲಾಡಿಮಿರ್‌ ಪುಟಿನ್ ‘ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ರಷ್ಯಾದ ಜನಸಂಖ್ಯೆಯನ್ನು ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ನಮ್ಮ ಗುರಿಯಾಗಿದೆ.’ ಎಂದಿದ್ದಾರೆ.

ಇದನ್ನು ಓದಿ: Breaking: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ!

ಅಲ್ಲದೇ ನಮ್ಮ ಅನೇಕ ಜನಾಂಗೀಯ ಗುಂಪುಗಳು ನಾಲ್ಕು, ಐದು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯುವ ಮೂಲಕ ದೊಡ್ಡ ಕುಟುಂಬವನ್ನು ಹೊಂದುವ ಸಂಪ್ರದಾಯವನ್ನು ರಕ್ಷಿಸಿವೆ. ನಮ್ಮ ಅಜ್ಜಿ, ಮುತ್ತಜ್ಜಿಯರು ಏಳು, ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು. 

ನಾವು ಈ ಸಂಪ್ರದಾಯ ರಕ್ಷಿಸೋಣ. ಪ್ರತಿಯೊಬ್ಬ ಮಹಿಳೆಯೂ ಕನಿಷ್ಠ 8 ಮಕ್ಕಳಿಗೆ ಜನ್ಮ ನೀಡಿ. ದೊಡ್ಡ ಕುಟುಂಬಗಳು ಉದಯಿಸಲಿ. ಕುಟುಂಬವು ಕೇವಲ ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ. ಇದು ಆಧ್ಯಾತ್ಮಿಕ ವಿದ್ಯಮಾನ ಮತ್ತು ನೈತಿಕತೆಯ ಮೂಲವಾಗಿದೆ ಎಂದೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರೇರೇಪಿಸಿದ್ದಾರೆ.

ಭಾರತ ಶಕ್ತಿಶಾಲಿ ದೇಶವಾಗಿದೆ; ಮೋದಿ ನಾಯಕತ್ವದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ: ನಮೋ ಹಾಡಿ ಹೊಗಳಿದ ಪುಟಿನ್

ಸಮ್ಮೇಳನವನ್ನು ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಪೇಟ್ರಿಯಾರ್ಕ್‌ ಕಿರಿಲ್ ಆಯೋಜಿಸಿದ್ದರು ಮತ್ತು ರಷ್ಯಾದ ಹಲವಾರು ಸಾಂಪ್ರದಾಯಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ದಿ ಇಂಡಿಪೆಂಡೆಂಟ್ ಹೇಳಿದೆ. ರಷ್ಯಾದ ಅಧ್ಯಕ್ಷರ ಕಾಮೆಂಟ್‌ಗಳು ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸೈನಿಕರು ಅನುಭವಿಸಿದ ಸಾವುನೋವುಗಳ ಪ್ರಮಾಣವನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅನೇಕ ಮಧ್ಯಮಗಳು ಅದನ್ನು ಸಂಘರ್ಷಕ್ಕೆ ಸಂಬಂಧಿಸಿವೆ.

ಉಕ್ರೇನ್‌ನಲ್ಲಿ ಸತ್ತವರ ಸಂಖ್ಯೆ 3 ಲಕ್ಷ ದಾಟಿರಬಹುದು ಎಂದು ಯುಕೆ ರಕ್ಷಣಾ ಸಚಿವಾಲಯ ಹೇಳಿದೆ. ಇನ್ನು, ಸ್ವತಂತ್ರ ರಷ್ಯಾದ ನೀತಿ ಗುಂಪು Re:Russia ಅಂದಾಜು 8,20,000 ರಿಂದ 9,20,000 ಜನರು ದೇಶವನ್ನು ತೊರೆದಿದ್ದಾರೆ ಎಂದು ವರದಿ ಮಾಡಿದೆ. 

ದಂಗೆ ಹತ್ತಿಕ್ಕಿದ ಕ್ರಮಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ

Follow Us:
Download App:
  • android
  • ios