ಉಕ್ರೇನ್ ಜೊತೆ ಪ್ರಧಾನಿ ಮೋದಿ, ರಷ್ಯಾ ಜೊತೆ ಜೈಶಂಕರ್ ಮಾತುಕತೆ ನಡೆಸಿದ ಬೆನ್ನಲ್ಲೇ ಐತಿಹಾಸಿಕ ಕ್ಷಣಕ್ಕೆ ವಿಶ್ವ ಸಾಕ್ಷಿಯಾಗುವ ಸಾಧ್ಯತೆ ಇದೆ. ಉಕ್ರೇನ್ ಹಾಗೂ ರಷ್ಯಾ ಯುಎಇನಲ್ಲಿ ಶಾಂತಿ ಸಭೆ ಪುನರ್ ಆರಂಭಗೊಂಡಿದ.

ನವದೆಹಲಿ (ನ.10) ಬರೋಬ್ಬರಿ ನಾಲ್ಕು ವರ್ಷಗಳಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಹಲವು ದೇಶಗಳು ಯುದ್ಧ ನಿಲ್ಲಿಸುವ ಆರಂಭಿಕ ಪ್ರಯತ್ನ ಮಾಡಿ ವಿಫಲಗೊಂಡಿದೆ. ಭಾರತ ತಟಸ್ಥವಾಗಿ ನಿಂತು ಯುದ್ಧದ ಬದಲು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಲು ಸಲಹೆ ನೀಡುತ್ತಲೇ ಬಂದಿದೆ. ಇದೀಗ ಭಾರತದ ನಡೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಕಳೆದೆರಡು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಜೊತೆ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ರಷ್ಯಾ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಹಾಗೂ ಉಕ್ರೇನ್ ಯುಎಇನಲ್ಲಿ ಶಾಂತಿ ಮಾತುಕತೆ ಪುನರ್ ಆರಂಭಗೊಂಡಿದೆ.

ಯುದ್ಧ ನಿಲ್ಲುವ ಲಕ್ಷಣ ಗೋಚರ

ಕೊನೆಗೂ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿದೆ. ಶಾಂತಿಸ್ಥಾಪನಾಗಿ ಭಾರತ ವಹಿಸುತ್ತಿರುವ ರಾಜತಾಂತ್ರಿಕ ನಡೆ ಮಹತ್ವ ಪಡೆದುಕೊಂಡಿದೆ. ಉಭಯ ರಾಷ್ಟ್ರಗಳ ನಾಯಕರ ಜೊತೆ ಭಾರತ ನಿರಂತರ ಸಂಪರ್ಕದಲ್ಲಿದೆ. ಜೊತೆಗೆ ಶಾಂತಿ ಸ್ಥಾಪನೆಗೆ ಮೂರು ಹಂತದ ಯೋಜನೆಯನ್ನು ಭಾರತ ಪ್ರಸ್ತಾಪಿಸಿದೆ. ಈ ಕುರಿಕು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

ಉಭಯ ನಾಯಕರ ಜೊತೆ ಭಾರತ ಮಾತುಕತೆ

ಪ್ರಧಾನಿ ಮೋದಿ ಎರಡು ದಿನದ ಹಿಂದೆ ಉಕ್ರೇನ್ ಅಧ್ಯಶ್ರ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಯುದ್ಧದ ಪರಿಣಾಮ, ಶಾಂತಿ ಪ್ರಯತ್ನಗಳ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ಕಪ್ಪು ಸಮುದ್ರದಲ್ಲಿನ ಆಹಾರ ಧಾನ್ಯಗಳ ರಫ್ತು ಕಾರಿಡಾರ್ ಮುರಸ್ಥಾಪಿಸಲು ಭಾರತ ಪ್ರಮುಖ ಪಾತ್ರವಹಿಸಬೇಕು ಎಂದು ಮನವಿ ಮಾಡಿತ್ತು. ಜಾಗತಿಕ ನಾಯಕರ ಜೊತೆ ಮಾತುಕತೆ ನಡೆಸಿ ಆಹಾರ ಧಾನ್ಯಗಳ ಸರಬರಾಜು ಪುನರ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು.

ಮೋದಿ ಮಾತುಕತೆ ಬೆನ್ನಲ್ಲೇ ವಿದೇಶಾಂಗ ಸಚಿವ ಜೈಶಂಕರ್ ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ ಲಾವ್ರೋವ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಾಂತಿ ಮಾತುಕತೆ, ವ್ಯಾಪಾರ ವಹಿವಾಟು, ಸರಕು ಹಡಗುಗಳ ಮೇಲೆ ದಾಳಿ ತಡೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಮೂರು ಸೂತ್ರ ನೀಡಿದ ಭಾರತ

ಭಾರತ ನೀಡಿರುವ ಮೂರು ಸೂತ್ರವನ್ನು ರಷ್ಯಾ ಹಾಗೂ ಉಕ್ರೇನ್ ಒಲವು ತೋರಿದೆ. ಉಭಯ ದೇಶಗಳು ಪಡೆದುಕೊಡೆಿರುವ ಹಲವು ಪ್ರಸ್ತಾವನೆಗಳಲ್ಲಿ ಭಾರತ ನೀಡಿರುವ ಮೂರು ಹಂತದ ಸೂತ್ರ ಔಚಿತ್ಯಪೂರ್ಣ ಎಂದು ಉಭಯದೇಶಗಳು ಬಣ್ಣಿಸಿದೆ. ಪ್ರಮುಖವಾಗಿ ಇಂಧನ ಸ್ಥಾವರ, ಮೂಲಸೌಕರ್ಯಗಳ ಮೇಲಿನ ಕ್ಷಿಪಣಿ ದಾಳಿಗೆ ತಡೆ, ಕಪ್ಪು ಸುದ್ರದ ವ್ಯಾಪಾರ ವಹಿವಾಟಿಗೆ ಸುರಕ್ಷತೆ, ಆಹಾರ ಧಾನ್ಯ ಹಾಗೂ ಕಚ್ಚಾತೈಲ ರಫ್ತಿಗೆ ಸುರಕ್ಷತೆ ಮೂರು ಪ್ರಸ್ತಾವನೆ ಸೂತ್ರವನ್ನು ಭಾರತ ಮುಂದಿಟ್ಟಿದೆ.

ಈ ಮೂರು ಸೂತ್ರಗಳು ಭಾರತಕ್ಕೆ ಪ್ರಯೋಜನಕಾರಿಯಾಗಿದೆ. ಭಾರತದ ಸರಕು ಸಾಗಾಣೆ, ಆಮದುಗಳು ಯುದ್ಧದ ಕಾರಣದಿಂದ ಸಮಸ್ಯೆಗೆ ಸಿಲುಕಿದೆ. ಭಾರತದ ಸರಕು ಹಡುಗಗಳ ಮೇಲೆ ದಾಳಿಯಿಂದ ನಾವಿಕರು ಮೃತಪಟ್ಟಿದ್ದಾರೆ. ಸಮಸ್ಯೆಗಳು ತೀವ್ರಗೊಂಡಿದೆ. ಇವುಗಳಿಗೂ ಪರಿಹಾರ ಸಿಗಲಿದೆ.