ಟೇಬಲ್‌ ಇಲ್ಲದಿದ್ದರೇನಂತೆ... ಇಟ್ಟಿಗೆ ಜೋಡಿಸಿ ಸ್ನೂಕರ್‌ ಆಡುವ ಪುಟ್ಟ ಬಾಲಕ.... ವಿಡಿಯೋ ವೈರಲ್‌

 

  • ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುವ ಮಗು ಮನಸ್ಸು
  • ಇಟ್ಟಿಗೆ ಜೋಡಿಸಿ ಸ್ನೂಕರ್‌ ಟೇಬಲ್‌ ಮಾಡಿಕೊಂಡ ಬಾಲಕ
  • ಬಾಲಕನ ಪಾಸಿಟಿವ್‌ ಮೈಂಡ್‌ಗೆ ನೆಟ್ಟಿಗರು ಫಿದಾ
Make the best of everything Kid makeshift brick into table for snooker play akb

ಕೆಲವರು ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದರೆ ಮತ್ತೆ ಕೆಲವರು ಹಾಸಿ ಹೊದ್ದು ಮಲಗುವಷ್ಟು ಬಡತನದೊಂದಿಗೆ ಹುಟ್ಟುತ್ತಾರೆ. ಹುಟ್ಟು ಯಾರ ಆಯ್ಕೆಯೂ ಅಲ್ಲ, ಆದರೆ ಜೀವನ ನಮ್ಮ ಆಯ್ಕೆಯಾಗಿರುತ್ತದೆ. ಬಡತನದಲ್ಲೇ ಹುಟ್ಟಿದರು ಬದುಕನ್ನು  ಸುಂದರವಾಗಿಸುವ ಕಲೆ ನಮ್ಮ ಕೈಯಲ್ಲೇ ಇದೆ. ಇದುದರಲ್ಲೇ ಸಂತಸ ಪಡುವ ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುವ ಮನಸ್ಸು ನಮಗಿರಬೇಕು ಅಷ್ಟೇ. ಅಂತಹ ಸಕರಾತ್ಮಕತೆಯನ್ನೇ ತುಂಬಿದ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಳೆಯ ವಿಡಿಯೋ ಇದಾಗಿದ್ದು, ಈ ವಿಡಿಯೋವನ್ನು ಇತ್ತಿಚೇಗೆ ಭಾರತೀಯ ಮಾಹಿತಿ ಸೇವೆಯ (IIS officer) ಅಧಿಕಾರಿಯಾದ ಅಂಕುರ್ ಲಹೋಟಿ (Ankur Lahoty) ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. 2018ರ ವಿಡಿಯೋ ಇದಾಗಿದ್ದು, ಪುಟ್ಟ ಬಾಲಕನೋರ್ವ ಇಟ್ಟಿಗೆಗಳನ್ನೇ ಜೋಡಿಸಿ ಟೇಬಲ್‌ನಂತೆ ಮಾಡಿ ಅದರಲ್ಲಿ ಸ್ನೂಕರ್‌ ಆಟವನ್ನು ಆಡುತ್ತಿರುತ್ತಾನೆ. ಸ್ನೂಕರ್ ಆಟದ ಬಗ್ಗೆ ಅತೀವ ಆಸಕ್ತಿ ಇರುವ ಈ ಪುಟ್ಟ ಬಾಲಕ ತನಗೆ ಸ್ನೂಕರ್ ಆಡಲು ಟೇಬಲ್‌ ಇಲ್ಲ ಎಂದು ಅಳುತ್ತಾ ಕೂರುವುದಿಲ್ಲ. ಬದಲಾಗಿ ಇದುದರಲ್ಲೇ ಸಂತೋಷ ಹುಡುಕುವ ಆತ ಇರುವ ಇಟ್ಟಿಗೆಗಳನ್ನೇ ಜೋಡಿಸಿ ಸ್ನೂಕರ್‌ ಟೇಬಲ್‌ನಂತೆ ಮಾಡುತ್ತಾನೆ. 

ನೀವು ಸಂತೋಷವನ್ನು ಗುರುತಿಸಲು ನಿಮ್ಮ ಬಳಿ ಇರುವ ಎಲ್ಲವೂ ಉತ್ತಮವಾದುದೇ ಆಗಿರಬೇಕು ಎಂದೇನು ಇಲ್ಲ. ಕೆಲವೊಮ್ಮೆ ನಿಮ್ಮಲಿರುವುದನ್ನೇ ಉತ್ತಮಗೊಳಿಸುವುದು ನಿಮಗೆ ಅತೀವವಾದ ಸಂತೋಷವನ್ನು ನೀಡುತ್ತದೆ. ಸಂತೋಷವಾಗಿರುವ ವ್ಯಕ್ತಿಗಳು ಎಲ್ಲ ಉತ್ತಮವಾದುದನ್ನೇ ಹೊಂದಿರುವುದಿಲ್ಲ. ಅದರ ಬದಲಾಗಿ ಅವರು ಇರುವುದನ್ನೇ ಉತ್ತಮವಾಗಿ ಮಾಡುತ್ತಾರೆ ಎಂದು ಈ ವಿಡಿಯೋಗೆ ಐಐಎಸ್ ಅಧಿಕಾರಿ ಅಂಕುರ್ ಲಹೋಟಿ ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಬಾಲಕ ಇಟ್ಟಿಗೆಗಳನ್ನು ಜೋಡಿಸಿ ಸ್ನೂಕರ್ ಟೇಬಲ್ ಮಾಡುತ್ತಾನೆ. ನಂತರ ಮರದ ದೊಣ್ಣೆಗಳನ್ನು ಬಳಸಿ ಚೆಂಡುಗಳನ್ನು ಅತ್ತಿಂದಿತ್ತ ಕುಟ್ಟುತ್ತ ಸ್ನೂಕರ್ ಆಡುತ್ತಾನೆ. 2018ರ ವಿಡಿಯೋ ಇದಾಗಿದ್ದು, 1,400ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ

ಆಟವಾಡುತ್ತಿರುವ ಮಕ್ಕಳು ಯಾರು ಮತ್ತು ವಿಡಿಯೋ ಚಿತ್ರೀಕರಿಸಿದ ಸ್ಥಳ ಯಾವುದು ಎಂಬ ವಿವರಣೆ ಇಲ್ಲದಿದದ್ದರೂ ಈ ವಿಡಿಯೋ ಆನ್‌ಲೈನ್‌ನಲ್ಲಿ ಖುಷಿ ಹಂಚುವಲ್ಲಿ ಯಶಸ್ವಿಯಾಗಿದೆ. ಇದೇ ವಿಡಿಯೋವನ್ನು ಈ ಹಿಂದೆ ಸೇನಾ ಸಿಬ್ಬಂದಿಯಾದ ಲೆಫ್ಟಿನೆಂಟ್ ಜನರಲ್‌ ಗ್ಯಾನ್‌ ಭೂಷಣ್‌ (Gyan Bhushan) ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಅವರು ಇದು ನಿಜವಾದ ಆವಿಷ್ಕಾರ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದರು.

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

ಮಧ್ಯಪ್ರದೇಶದ (Madhya Pradesh) ಪನ್ನಾ ಜಿಲ್ಲೆಯ ( Panna district) ಇಂತಹದ್ದೇ ಇನ್ನೊಂದು ವಿಡಿಯೋ ಈ ಹಿಂದೆ ವೈರಲ್‌ ಆಗಿತ್ತು, ಐಎಎಸ್ ಅಧಿಕಾರಿಯಾದ ಶೇರ್ ಸಿಂಗ್ ಮೀನಾ (Sher Singh Meena) ಈ ವಿಡಿಯೋವನ್ನು 2020ರಲ್ಲಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ಮಕ್ಕಳಿಬ್ಬರು ತಿರುಗುವ ತೊಟ್ಟಿಲಿನಂತೆ ಇರುವ ಮರದ ತುಂಡಿನಲ್ಲಿ ಕುಳಿತು ಸುತ್ತ ತಿರುಗುವ ವಿಡಿಯೋ ಇದಾಗಿತ್ತು.  ಮಕ್ಕಳ ಸೃಜನಾತ್ಮಕತೆ ಬಿಂಬಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು. 

 

Latest Videos
Follow Us:
Download App:
  • android
  • ios