Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ
ಉದ್ದ (Height)ವಾಗಿರಬೇಕು ಅನ್ನೋದು ಹೆಚ್ಚಿನ ಮಕ್ಕಳ ಆಸೆ. ಪೋಷಕರು ಸಹ ತಮ್ಮ ಮಕ್ಕಳು (Children) ಉತ್ತಮ ಹೈಟ್ ಪಡೆಯಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಸೈಕ್ಲಿಂಗ್ ಮಾಡಿಸುವುದು ಇನ್ನಿತರ ಕಸರತ್ತುಗಳನ್ನು ಮಾಡಿಸುತ್ತಾರೆ. ಇದಲ್ಲದೆಯೂ ಮಕ್ಕಳಿಗೆ ಕೆಲವೊಂದು ಆಹಾರ (Food) ನೀಡುವುದರಿಂದ ಹೈಟ್ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವ ಸೂಪರ್ ಆಹಾರಗಳಿವು
ವ್ಯಕ್ತಿತ್ವವೆಂಬುದು ಜ್ಞಾನ, ಮಾತು, ಉತ್ತಮ ನಡವಳಿಕೆ, ಮನಸ್ಸು ಎಂಬುದರಿಂದ ರೂಪುಗೊಳ್ಳುತ್ತದೆ. ಬದಲಾಗಿ ಉದ್ದ, ಕುಳ್ಳ, ಬಿಳಿ, ಕಪ್ಪು ಎಂಬುದರಿಂದ ಅಲ್ಲ. ಇದ್ಯಾವುದನ್ನೂ ಮನುಷ್ಯ ತಾನಾಗಿಯೇ ನಿರ್ಣಯಿಸುವ ವಿಷಯಗಳಲ್ಲ. ಹೀಗಾಗಿ ಯಾರು ಕೂಡಾ ಪರ್ಫೆಕ್ಟ್ (Perfect) ಅಥವಾ ಅನ್ ಪರ್ಫೆಕ್ಟ್ ಅಲ್ಲ. ಹೀಗಿದ್ದೂ ಮನುಷ್ಯ ಸಹಜ ಗುಣ, ಮನುಷ್ಯ ತಾನು ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಾನೆ. ಕಪ್ಪಿದ್ದವರು ಬಿಳಿಯಾಗಲು, ಕುಳ್ಳಗಿದ್ದವರು ಉದ್ದವಾಗಲು ಯತ್ನಿಸುತ್ತಾರೆ. ಪುಟ್ಟ ಮಕ್ಕಳಿಗೆ ಚಿಕ್ಕಂದಿನಲ್ಲೇ ಇದಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಎತ್ತರವನ್ನು ಹೆಚ್ಚಾಗಿ ಜೆನೆಟಿಕ್ಸ್ ನಿರ್ಧರಿಸುತ್ತದೆ. ಇದಲ್ಲದೆ ಜೀವನಶೈಲಿ (Lifestyle), ಆಹಾರ ಮತ್ತು ದೈಹಿಕ ಚಟುವಟಿಕೆಯಂತಹ ಅಂಶಗಳು ವ್ಯಕ್ತಿಯ ಎತ್ತರದ ಮೇಲೆ ಪ್ರಭಾವ ಬೀರುತ್ತವೆ.
ವ್ಯಕ್ತಿಯ ಎತ್ತರವನ್ನು ನಿರ್ಧರಿಸುವಲ್ಲಿ ಉತ್ತಮ ಆಹಾರ (Food) ಸೇವನೆಯು ಪಾತ್ರವನ್ನು ವಹಿಸುತ್ತದೆ. ಪೌಷ್ಟಿಕ ಆಹಾರವು ಮಕ್ಕಳು ಸರಿಯಾದ ಬೆಳವಣಿಗೆ ಮತ್ತು ಉತ್ತಮ ಎತ್ತರವನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಬೆಳವಣಿಗೆಯ ವರ್ಷಗಳಲ್ಲಿ ಪ್ರತಿ ಮಗುವಿಗೆ ಅತ್ಯುತ್ತಮ ಪೋಷಣೆ ದೊರೆಯಲು ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಅದರ ಆಹಾರದಲ್ಲಿ ಸೇರಿಸಬೇಕಾದ ಐದು ಸೂಪರ್ ಆಹಾರಗಳು ಇಲ್ಲಿವೆ.
Healthy Food For Children: ದೊಡ್ಡವರು ತಿನ್ನುವ ಆಹಾರವನ್ನೆಲ್ಲಾ ಮಕ್ಕಳಿಗೂ ಕೊಡಬಹುದಾ ?
ಸಾಲ್ಮನ್
ಮಾಂಸಾಹಾರಿಯಾಗಿದ್ದರೆ, ನೀವು ಖಂಡಿತವಾಗಿಯೂ ಸಾಲ್ಮನ್‌ನಂತಹ ಮೀನುಗಳನ್ನು ಮಕ್ಕಳಿಗೆ ನೀಡಬೇಕು. ಇದು ಒಮೆಗಾ-3 ಕೊಬ್ಬಿನಾಮ್ಲವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇದು ಬೆಳೆಯುತ್ತಿರುವ ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸಾಲ್ಮನ್, ಖನಿಜಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಮಕ್ಕಳ ಬೆಳವಣಿಗೆ ಮತ್ತು ಸ್ನಾಯುಗಳನ್ನು ಬಲಪಡಿಸಲು ಉತ್ತೇಜಿಸುತ್ತದೆ. ಹೀಗಾಗಿ ಮಗುವಿನ ಆಹಾರದಲ್ಲಿ ಸಾಲ್ಮನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲದಲ್ಲಿ ಸಮೃದ್ಧವಾಗಿರುವ ಇತರ ಮೀನುಗಳನ್ನು ಸೇರಿಸಲು ಪ್ರಯತ್ನಿಸಿ.
ಮೊಟ್ಟೆಗಳು
ಹಾಲಿನಂತೆ, ಮೊಟ್ಟೆಗಳನ್ನು ಸಹ ಸಂಪೂರ್ಣ ಭೋಜನವೆಂದು ಪರಿಗಣಿಸಲಾಗುತ್ತದೆ. ಪ್ರೋಟೀನ್‌ಗಳ ಜೊತೆಗೆ, ಅವು ಮಕ್ಕಳ ಬೆಳವಣಿಗೆಗೆ ಪ್ರಮುಖವಾದ ಖನಿಜಗಳು ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತವೆ. ಮೊಟ್ಟೆ (Egg)ಯನ್ನು ಪ್ರತಿದಿನ ಸೇವಿಸುವುದು ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಿಹಿ ಗೆಣಸು
ಸಿಹಿ ಗೆಣಸುಗಳು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಸಿಹಿ ಗೆಣಸಿನಲ್ಲಿರುವ ವಿಟಮಿನ್ ಎ ಮೂಳೆಗಳನ್ನು ರಕ್ಷಿಸಲು ನೆರವಾಗುತ್ತದೆ. ವಯಸ್ಕರು ಸಹ ಸಿಹಿ ಗೆಣಸನ್ನು (Sweet Potato) ತಿನ್ನುವುದರಿಂದ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಸಿಹಿ ಗೆಣಸಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿದೆ ಮತ್ತು ಜೀರ್ಣಕ್ರಿಯೆ ಮತ್ತು ಇತರ ದೈಹಿಕ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Kids and Their Bones: ಕೊರೋನಾದಿಂದ ಮಕ್ಕಳನ್ನು ಕಾಡುತ್ತಿದೆ ಮೂಳೆ ಸಮಸ್ಯೆ.. ಪರಿಹಾರ ಏನು?
ಬೆರಿ ಹಣ್ಣುಗಳು
ಸ್ಟ್ರಾಬೆರಿ, ಬೆರಿ ಹಣ್ಣುಗಳು, ರಾಸ್ ಬೆರೀಸ್ ಮುಂತಾದ ಎಲ್ಲಾ ರೀತಿಯ ಬೆರಿಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಇದು ಜೀವಕೋಶದ ಬೆಳವಣಿಗೆ ಮತ್ತು ಅಂಗಾಂಶಗಳ ಆರೋಗ್ಯಕ್ಕೆ ಮುಖ್ಯವಾಗಿದೆ. ಬೆರ್ರಿಗಳಲ್ಲಿ ಇರುವ ಫೈಟೊ-ಪೌಷ್ಠಿಕಾಂಶಗಳು ದೇಹದ ಬೆಳವಣಿಗೆಗೆ ನೆರವಾಗುತ್ತವೆ. ಆದ್ದರಿಂದ ಬೆರಿಗಳನ್ನು ಪ್ರತಿದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪ್ರತಿದಿನ ಸಂಜೆ ಬೆರಿಗಳ ಸಣ್ಣ ಭಾಗಗಳನ್ನು ಸೇವಿಸುವುದು ಆರೋಗ್ಯಕರ ತಿಂಡಿಯ ಆಯ್ಕೆಯಾಗಿದ್ದು ಇದು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸೊಪ್ಪು ತರಕಾರಿಗಳು
ಹದಿಹರೆಯದ ಮಕ್ಕಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಹಸಿರು ಎಲೆಗಳ ತರಕಾರಿಗಳು (Vegetables) ಪ್ರಮುಖ ಪಾತ್ರವಹಿಸುತ್ತವೆ. ಎಲೆಗಳ ಸೊಪ್ಪಿನಲ್ಲಿ ಕಂಡುಬರುವ ವಿಟಮಿನ್‌ಗಳು ಮೂಳೆ ಸಾಂದ್ರತೆಯನ್ನು ಸುಧಾರಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ, ಇದು ಸೊಪ್ಪು ತರಕಾರಿಗಳನ್ನು ಸೇವಿಸುವ ಹೆಚ್ಚುವರಿ ಪ್ರಯೋಜನವಾಗಿದೆ. ಬೆಳೆಯುತ್ತಿರುವ ಮಗುವಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ವಾರಕ್ಕೆ ಎರಡು ಬಾರಿ ಹಸಿರು ಎಲೆಗಳನ್ನು ಸೇವಿಸಿದರೆ ಸಾಕು. ಪ್ರತಿನಿತ್ಯ ನಿಯಮಿತವಾಗಿ ಈ ಆಹಾರಗಳನ್ನು ಸೇವಿಸುವುದರಿಂದ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಒಳ್ಳೆಯ ಹೈಟ್ ಪಡೆದುಕೊಳ್ಳುತ್ತಾರೆ.