Asianet Suvarna News Asianet Suvarna News

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

  • ವಿಶ್ವದ ಅತ್ಯಂತ ಶ್ರೀಮಂತ ಬಾಲಕ
  • ಬಂಗ್ಲೆ ಜೊತೆ ಸೂಪರ್‌ ಕಾರುಗಳನ್ನು ಹೊಂದಿರುವ ಮೊಂಫಾ
  • ನೈಜಿರೀಯಾದ ಈ ಬಾಲಕನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ
Meet 9 Year Old Nigerian Boy Worlds Richest Kid akb
Author
Bangalore, First Published Jan 28, 2022, 5:29 PM IST

ನೈಜೀರಿಯಾ(ಜ.28): ಒಂಭತ್ತನೇ ವಯಸ್ಸಿನಲ್ಲಿ ನಮ್ಮಲ್ಲಿ ಅನೇಕರಿಗೆ ಮಿಲಿಯನ್‌ ಎಂದರೆ ಎಷ್ಟು ಎಂಬುದು ಗೊತ್ತಿರುವುದಿಲ್ಲ. ಹಾಗಂತ ಎಲ್ಲರಿಗೂ ಅದೇ ಸ್ಥಿತಿ ಇರುವುದಿಲ್ಲ. ಕೆಲವರು ಹುಟ್ಟುತ್ತಲೇ ಶ್ರೀಮಂತರಾಗಿರುತ್ತಾರೆ. ಮತ್ತೆ ಕೆಲವರು ಶ್ರಮ ವಹಿಸಿ ಶ್ರೀಮಂತರಾಗುತ್ತಾರೆ. ಆದರೆ ಇಲ್ಲಿ ಒರ್ವ ಒಂಭತ್ತು ವರ್ಷದ ಬಾಲಕ ತನ್ನ ಅದ್ದೂರಿ ಜೀವನಶೈಲಿಯಿಂದಾಗಿ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಕರೆಯಲ್ಪಡುತ್ತಿದ್ದಾನೆ. 

ಮುಹಮ್ಮದ್ ಅವಲ್ ಮುಸ್ತಫಾ ಎಕೆಎ ಮೊಂಫಾ ಜೂನಿಯರ್, (Muhammed Awal Mustapha AKA Mompha Junior) ಎಂಬ ಇಷ್ಟುದ್ಧ ಹೆಸರಿಟ್ಟುಕೊಂಡಿರುವ ಈತ ತನ್ನ ಆರನೇ ವಯಸ್ಸಿನಲ್ಲಿ ತನ್ನ ಮೊದಲ ಬಂಗ್ಲೆಯನ್ನು ಹೊಂದಿದ್ದು, ಹೆಚ್ಚಿನವರು ಜೀವಿತಾವಧಿ ಇಡೀ ಕಳೆದರು ಇಂತಹ ವೈಭೋಗ ಒಂದು ದಿನಕ್ಕೂ ಸಿಗದು ಅತ್ಯಂತ ಶ್ರೀಮಂತಿಕೆಯ ಜೀವನವನ್ನು ಈತ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲ, ಈತ ಖಾಸಗಿ ಜೆಟ್‌ ಹೊಂದಿದ್ದು, ಜಗತ್ತಿನಾದ್ಯಂತ ಪ್ರಯಾಣಿಸುತ್ತಾನೆ. ಜೊತೆಗೆ ಈತ ಹಲವು ಬಂಗ್ಲೆಗಳನ್ನು ಹೊಂದಿದ್ದು, ಹಲವು  ಸೂಪರ್‌ಕಾರುಗಳು ಈತನ ಬಳಿ ಇವೆ.

Elon Musk Job ಉದ್ಯೋಗ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!

ನೈಜೀರಿಯಾದ(Nigeria) ಲಾಗೋಸ್(Lagos), ಮೂಲದವನಾದ ಈ ಮೋಂಫಾ ಜೂನಿಯರ್‌ (Mompha Junior) ಮಲ್ಟಿಮಿಲಿಯನೇರ್ ನೈಜೀರಿಯನ್ ಇಂಟರ್ನೆಟ್ ಸೆಲೆಬ್ರಿಟಿ (internet celebrity) ಇಸ್ಮಾಯಿಲಿಯಾ ಮುಸ್ತಫಾ (Ismailia Mustapha), ಮುಹಮ್ಮದ್ ಅವಲ್ ಮುಸ್ತಫಾ (Muhammed Awal Mustapha)ಅವರ ಮಗ. ಈತ ತನ್ನಇನ್ಸ್ಟಾಗ್ರಾಮ್‌( Instagram) ಖಾತೆಯಲ್ಲಿ 29,800 ಅನುಯಾಯಿಗಳನ್ನು ಹೊಂದಿದ್ದಾನೆ, ಇನ್ಸ್ಟಾಗ್ರಾಮ್‌ನಲ್ಲಿ ಆಗಾಗ ಈತ ತನ್ನ ಭವ್ಯವಾದ ಜೀವನಶೈಲಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾನೆ.  ಈ  ಹುಡುಗ ತನ್ನ ಸೂಪರ್‌ಕಾರ್‌ಗಳ ಪಕ್ಕದಲ್ಲಿ ನಿಂತಿರುವಾಗ ವರ್ಸೇಸ್ (Versace) ಮತ್ತು ಗುಸ್ಸಿಯಂತಹ ( Gucci) ಬ್ರಾಂಡ್‌ಗಳನ್ನು ಒಳಗೊಂಡಂತದ ಸೊಗಸಾದ ಮತ್ತು ಡಿಸೈನರ್ ಬಟ್ಟೆಗಳನ್ನು ಧರಿಸುವುದನ್ನು ಕಾಣಬಹುದು.

 

ಮತ್ತೊಂದು ಫೋಟೋ ಈ ಬಾಲಕ ಖಾಸಗಿ ಜೆಟ್‌ನಲ್ಲಿ ಊಟ ಮಾಡುತ್ತಿರುವುದನ್ನು ತೋರಿಸುತ್ತಿದೆ. ಈ ಯುವ ಬಿಲಿಯನೇರ್ ತನ್ನ ಚಿಕ್ಕ ಸಹೋದರಿಯೊಂದಿಗೆ ತನ್ನ ತಂದೆಯ Instagram ನಲ್ಲಿ ಸದಾ ಕಾಣಿಸಿಕೊಳ್ಳುತ್ತಾನೆ. ತಮ್ಮ ಬಳಿ ಇರುವ ಕಾರುಗಳ ಸಂಗ್ರಹವನ್ನು ಪ್ರದರ್ಶಿಸುವ ಮೊಂಫಾ ಜೂನಿಯರ್‌ ಬಳಿ ಹಳದಿ ಫೆರಾರಿ (yellow Ferrari), ಬೆಂಟ್ಲಿ ಫ್ಲೈಯಿಂಗ್ ಸ್ಪರ್ (Bentley Flying Spur) ಮತ್ತು ರೋಲ್ಸ್-ರಾಯ್ಸ್ ವ್ರೈತ್ (Rolls-Royce Wraith) ಕಾರುಗಳು ಕೂಡ ಇವೆ.

Oxfam India: ಟಾಪ್‌ 10 ಧನಿಕರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೆ 25 ವರ್ಷ ಉಚಿತ ಶಿಕ್ಷಣ!

ಅಲ್ಲಿನ ಮಾಧ್ಯಮ ದಿ ಸನ್‌ನ ವರದಿಯ ಪ್ರಕಾರ, ಮೊಂಫಾ ತಂದೆ 2018 ರಲ್ಲಿ ಮೊಂಫಾ ಜೂನಿಯರ್ ಅವರ ಆರನೇ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ  ಮೊದಲ ಬಂಗ್ಲೆಯನ್ನು  ಖರೀದಿಸಿದ್ದರು. 

 

ನಿಮ್ಮ ಸ್ವಂತ ಮನೆಯನ್ನು ಹೊಂದುವುದು ಅತ್ಯುತ್ತಮ ಭಾವನೆಗಳಲ್ಲಿ ಒಂದಾಗಿದೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಮನೆಯ ಮಾಲೀಕತ್ವವು ಜೀವನದ ದೈನಂದಿನ ಜಂಜಾಟವನ್ನು ಎದುರಿಸಲು ಯೋಗ್ಯವಾದ ಭಾವನೆಯಾಗಿದೆ. ಎಲ್ಲಾ ಏರಿಳಿತಗಳ ನಂತರ ನೀವು ಹೋಗಲು ಒಂದು ಸ್ಥಳವಿದೆ ಎಂದು ಅದು ನಿಮಗೆ ಭರವಸೆ ನೀಡುತ್ತದೆ. ನಿಮ್ಮನ್ನು ಎಂದಿಗೂ ನಿರ್ಣಯಿಸದ ಮತ್ತು ಯಾವಾಗಲೂ ತೆರೆದ ತೋಳುಗಳಿಂದ ನಿಮ್ಮನ್ನು ಆಹ್ವಾನಿಸುವ ಸ್ಥಳ ಮನೆ. ನಿನ್ನ ಹೊಸ ಮನೆಗೆ ನನ್ನ ಮಗ ನಿನಗೆ ಅಭಿನಂದನೆಗಳು. ಡ್ಯಾಡಿಯಿಂದ ನಿನಗೆ ಹುಟ್ಟುಹಬ್ಬದ ಉಡುಗೊರೆ, ಎಂದು ಮೊಂಫಾ ತಂದೆ ಈ ಮನೆಯನ್ನು ಖರೀದಿಸುವಾಗ ಇನ್ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದುಕೊಂಡಿದ್ದರು. ಒಟ್ಟಿನಲ್ಲಿ ಎಲ್ಲದಕ್ಕೂ ಯೋಗವಿರಬೇಕು.

 

Follow Us:
Download App:
  • android
  • ios