ಮಧ್ಯಪ್ರದೇಶ ನೂತನ ಸರ್ಕಾರ ಇದೀಗ ಮತ್ತೊಂದು ದಿಟ್ಟ ನಡೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಗೋ ಮಾತೆಗೆ ಚಿತ್ರ ಹಿಂಸೆ ನೀಡಿಸಿ ಕೊಂದ ನಾಲ್ವರು ಆರೋಪಿಗಳ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಧ್ವಂಸಗೊಳಿಸಿದೆ.
ಭೋಪಾಲ್(ಡಿ.26) ಮಧ್ಯಪ್ರದೇಶ ನೂತನ ಮುಖ್ಯಮಂತ್ರಿ ಮೋಹನ್ ಯಾದವ್ ತಮ್ಮ ಖಡಕ್ ನಿರ್ಧಾರ, ನಿರ್ಭೀತ ನಡೆಯಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವನಿವರ್ಧಕ ನಿಷೇಧ ಆದೇಶ ಹೊರಡಿಸಿದ್ದರು.ಇದಾದ ಬಳಿಕ ಕೆಲ ಆರೋಪಿಗಳ ಮನೆ ಮೇಲೂ ಬುಲ್ಡೋಜರ್ ಕ್ರಮ ಜರುಗಿಸಿದ್ದರು. ಇದೀಗ ಗೋ ಮಾತೆಗೆ ಚಿತ್ರಹಿಂಸೆ ನೀಡಿ ಕೊಂದ ನಾಲ್ವರು ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.
ಅಗರ್ ಮಾಲ್ವಾ ಜಿಲ್ಲೆಯ ನಾಲ್ವರು ಆರೋಪಿಗಳಾದ ಸೋನು ಮನ್ಸೂರಿ ಐಸಾಕ್, ರಜಾಕ್ ಖಾನ್, ರಾಹುಲ್ ಗುಜ್ಜಾರ್ ಹಾಗೂ ದುರ್ಗಾ ಶಂಕರ್ ಗೋವನ್ನು ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಗೋವಿಗೆ ಚಿತ್ರಹಿಂಸೆ ನೀಡಲಾಗಿದೆ. ತಡ ರಾತ್ರಿ ಈ ಘಟನೆ ನಡೆದಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿದೆ. ಇತ್ತ ಆರೋಪಿಗಳು ಪರಾರಿಯಾಗಿದ್ದರು. ಹಿಂದೂ ಸಂಘಟನೆಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ.
ಬಿಜೆಪಿ ನಾಯಕನ ಕೈಕತ್ತರಿಸಿದ ಆರೋಪಿ ಮನೆ ಧ್ವಂಸ, ಯೋಗಿಯನ್ನೇ ಮೀರಿಸಿದ ಮಧ್ಯಪ್ರದೇಶ ನೂತನ ಸಿಎಂ!
ಆದರೆ ತೀವ್ರವಾಗಿ ಗಾಯಗೊಂಡ ಗೋವು ಮೃತಪಟ್ಟಿದೆ. ಪ್ರಕರಣ ದಾಖಿಸಿದ ಸಂಘಟನೆ ಭಾರಿ ಪ್ರತಿಭಟನೆ ಆರಂಭಿಸಿತ್ತು.ಅಗರ್ ಮಾಲ್ವಾ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂಪರ ಸಂಘಟನೆ ಭಾರಿ ಪ್ರತಿಭಟನೆ ನೆಡೆಸಿತ್ತು. ಸತತ 4 ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿತ್ತು. ಕೊನೆಗೂ ಜಿಲ್ಲಾಧಿಕಾರಿ ಕಠಿಣ ಕ್ರಮದ ಭರವಸೆ ನೀಡಿದ್ದರು.
ಇತ್ತ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ಸೆಕ್ಷನ್ 429, 34 ಹಾಗೂ 11 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಇದೇ ವೇಳೆ ಹಿಂದೂ ಪರ ಸಂಘಟನೆಗಳು ಎಚ್ಚರಿಕೆಯನ್ನು ನೀಡಿದೆ. ಗೋ ಮಾತೆಗೆ ಚಿತ್ರ ಹಿಂಸೆ ನೀಡುವುದು ಮಾಡುವ ಪ್ರತಿಯೊಬ್ಬರಿಗೂ ಎಚ್ಚರಿಕೆ ಎಂದಿದೆ.
ಧಾರ್ಮಿಕ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ನಿಷೇಧ, ಮಧ್ಯಪ್ರದೇಶ ಸಿಎಂ ಆದೇಶ
ಮಧ್ಯಪ್ರದೇಶಧ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಮೋಹನ್ ಯಾದವ್ ರಾಜ್ಯದ ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದರು. ‘300 ವರ್ಷಗಳ ಹಿಂದಿನವರೆಗೆ ಜಗತ್ತಿನ ಸಮಯವನ್ನು ಭಾರತವೇ ನಿರ್ಧರಿಸುತ್ತಿತ್ತು. ಜಗತ್ತಿನ ಸಮಯ ನಿರ್ಧರಿಸುವ ಪುರಾತನ ಯಂತ್ರ ಈಗಲೂ ಉಜ್ಜಯಿನಿಯಲ್ಲಿದೆ. ಅದರ ಪುನರುತ್ಥಾನಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದರು.
