ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಮೂರು ಓವರ್‌ನಲ್ಲಿ ಆರ್‌ಸಿಬಿ 31 ರನ್‌ಗಳ ಜತೆಯಾಟವಾಡಿತು. ಈ ವೇಳೆ ಪಂದ್ಯಕ್ಕೆ ಕೆಲಕಾಲ ಮಳೆರಾಯ ಅಡ್ಡಿ ಮಾಡಿತು.

ಬೆಂಗಳೂರು(ಮೇ.18): ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಶತಾಯಗತಾಯ 18 ರನ್ ಅಂತರದ ಗೆಲುವು ಸಾಧಿಸಿ ಪ್ಲೇ ಆಫ್‌ಗೇರುವ ಲೆಕ್ಕಾಚಾರದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಬಾರಿಸಿದೆ. ಆರ್‌ಸಿಬಿ ಪ್ಲೇ ಆಫ್‌ಗೇರಬೇಕಿದ್ದರೇ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 200 ರನ್‌ಗಳೊಳಗಾಗಿ ಕಟ್ಟಿ ಹಾಕಬೇಕಿದೆ. ನಾಯಕ ಫಾಫ್ ಡು ಪ್ಲೆಸಿಸ್ ಸ್ಪೋಟಕ ಅರ್ಧಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ, ಪಾಟೀದಾರ್ ಹಾಗೂ ಕ್ಯಾಮರೋನ್ ಗ್ರೀನ್ ಜವಾಬ್ದಾರಿಯ ಬ್ಯಾಟಿಂಗ್ ನಡೆಸಿದರು.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಮೂರು ಓವರ್‌ನಲ್ಲಿ ಆರ್‌ಸಿಬಿ 31 ರನ್‌ಗಳ ಜತೆಯಾಟವಾಡಿತು. ಈ ವೇಳೆ ಪಂದ್ಯಕ್ಕೆ ಕೆಲಕಾಲ ಮಳೆರಾಯ ಅಡ್ಡಿ ಮಾಡಿತು.

ಯೋ ಬರ್ಕೋ..ಇವತ್ತು ಗೆಲ್ಲೋದು ನಮ್ RCB ಹುಡುಗರೇ, ಭವಿಷ್ಯ ನುಡಿದ ಶಿವ ರಾಜ್‌ಕುಮಾರ್!

ಮಳೆ ನಿಂತ ಬಳಿಕ ಇನಿಂಗ್ಸ್ ಆರಂಭಿಸಿದ ಆರ್‌ಸಿಬಿ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ಚೆನ್ನೈ ಸ್ಪಿನ್ನರ್‌ಗಳು ಯಶಸ್ವಿಯಾದರು. ಮಿಚೆಲ್ ಸ್ಯಾಂಟ್ನರ್ ಹಾಗೂ ಮಹೀಶ್ ತೀಕ್ಷಣ ಎದುರು ರನ್ ಗಳಿಸಲು ಫಾಫ್ ಹಾಗೂ ವಿರಾಟ್ ಪರದಾಡಿದರು. ಪರಿಣಾಮ ಮೊದಲ ಪವರ್ ಪ್ಲೇನಲ್ಲಿ 6 ಅಂತ್ಯದ ವೇಳೆಗೆ 42 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್‌ಗಳು ಪವರ್‌ ಪ್ಲೇನ ಮೂರು ಓವರ್‌ನಲ್ಲಿ ಕೇವಲ 11 ರನ್ ನೀಡಿದರು.

ಸ್ಪಿನ್ ಹಾಗೂ ಬೌನ್ಸ್ ಆಗುತ್ತಿದ್ದ ಪಿಚ್‌ನಲ್ಲಿ ಮತ್ತೆ ಲಯ ಕಂಡುಕೊಳ್ಳಲು ಆರ್‌ಸಿಬಿ ಬ್ಯಾಟರ್‌ಗಳಿಗೆ ಕೊಂಚ ಸಮಯ ಬೇಕಾಯಿತು. ಬಳಿಕ ಕೊಹ್ಲಿ ಹಾಗೂ ಫಾಫ್ ಸಹಜ ಆಟ ಮುಂದುವರೆಸಿದರು. ಹೀಗಾಗಿ ಮೊದಲ ವಿಕೆಟ್‌ಗೆ ಫಾಫ್ ಹಾಗೂ ಕೊಹ್ಲಿ 9.4 ಓವರ್‌ನಲ್ಲಿ 78 ರನ್‌ಗಳ ಜತೆಯಾಟವಾಡಿದರು. ಆರೆಂಜ್ ಕ್ಯಾಪ್ ಒಡೆಯ ವಿರಾಟ್ ಕೊಹ್ಲಿ 29 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.

RCB vs CSK ಪಂದ್ಯ ರದ್ದಾದರೇ ಯಾರಿಗೆ ಲಾಭ? 5 ಓವರ್ ಪಂದ್ಯ ನಡೆದರೆ ಆರ್‌ಸಿಬಿ ಎಷ್ಟು ರನ್ ಬಾರಿಸಿದ್ರೆ ಪ್ಲೇ ಆಫ್‌ಗೇರುತ್ತೆ?

ಇನ್ನು ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಆಕ್ರಮಣಕಾರಿ ಆಟವಾಡಿದ ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 35 ಎಸೆತಗಳನ್ನು ಎದುರಿಸಿ ಈ ಆವೃತ್ತಿಯಲ್ಲಿ 4ನೇ ಅರ್ಧಶತಕ ಸಿಡಿಸಿದರು. ಮಹತ್ವದ ಪಂದ್ಯದಲ್ಲಿ ನಾಯಕನ ಆಟವಾಡಿದ ಫಾಫ್ 39 ಎಸೆತಗಳನ್ನು ಎದುರಿಸಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಮತ್ತೆ ಸಿಡಿದ ಪಾಟೀದಾರ್-ಗ್ರೀನ್: ನಾಯಕ ಫಾಫ್ ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ಕ್ಯಾಮರೋನ್ ಗ್ರೀನ್ ಹಾಗೂ ರಜತ್ ಪಾಟೀದಾರ್ ಸ್ಪೋಟಕ ಜತೆಯಾಟವಾಡುವ ಮೂಲಕ ಆರ್‌ಸಿಬಿ ತಂಡಕ್ಕೆ ಆಸರೆಯಾದರು. ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕೇವಲ 28 ಎಸೆತಗಳಲ್ಲಿ 71 ರನ್‌ಗಳ ಜತೆಯಾಟವಾಡಿತು. ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಪಾಟೀದಾರ್ ಕೇವಲ 23 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 41 ರನ್ ಸಿಡಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಕ್ಯಾಮರೋನ್ ಗ್ರೀನ್ ಕೇವಲ 17 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 38 ರನ್ ಸಿಡಿಸಿದರೆ, ದಿನೇಶ್ ಕಾರ್ತಿಕ್ 14 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್ ಸಿಡಿಸಿದರು