Asianet Suvarna News Asianet Suvarna News

ದೆಹಲಿಯ ಔರಂಗಜೇಬ್‌ ಲೇನ್‌ ಇನ್ನು ಅಬ್ದುಲ್‌ ಕಲಾಂ ರಸ್ತೆ, ಮರು ನಾಮಕರಣ ಮಾಡಿದ NDMC!

ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಅಧಿಕಾರಿಗಳು ಬುಧವಾರ ಲುಟ್ಯೆನ್ಸ್‌ನ ದೆಹಲಿಯಲ್ಲಿರುವ ಔರಂಗಜೇಬ್ ಲೇನ್‌ನ ಮರುನಾಮಕರಣವನ್ನು ದೃಢಪಡಿಸಿದ್ದಾರೆ. ಈ ಲೇನ್‌ಗೆ ಈಗ ಡಾ ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಹೆಸರಿಸಲಾಗಿದೆ.
 

Lutyens Delhi  Aurangzeb Lane renamed Dr APJ Abdul Kalam Lane san
Author
First Published Jun 29, 2023, 3:02 PM IST

ನವದೆಹಲಿ (ಜೂ.29): ಲುಟ್ಯೆನ್ಸ್ ದೆಹಲಿಯಲ್ಲಿರುವ ಔರಂಗಜೇಬ್ ಲೇನ್ ಅನ್ನು ಡಾ ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಎನ್‌ಡಿಎಂಸಿ ಅಧಿಕಾರಿಗಳು ಬುಧವಾರ ಪ್ರಕಟಿಸಿದ್ದಾರೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ತನ್ನ ಸದಸ್ಯರ ಸಭೆಯಲ್ಲಿ ರಸ್ತೆಯ ಮರುನಾಮಕರಣವನ್ನು ಅನುಮೋದನೆ ಮಾಡಲಾಗಿದೆ. ಎನ್‌ಡಿಎಂಸಿ ಆಗಸ್ಟ್ 2015 ರಲ್ಲಿ ಔರಂಗಜೇಬ್ ರಸ್ತೆಯ ಹೆಸರನ್ನು ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಬದಲಾಯಿಸಿತ್ತು. ಔರಂಗಜೇಬ್ ಲೇನ್ ಅಬ್ದುಲ್ ಕಲಾಂ ರಸ್ತೆಯನ್ನು ಪೃಥ್ವಿ ರಾಜ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. "ನವದೆಹಲಿಯ ಮುನ್ಸಿಪಲ್ ಕಾಯಿದೆ, 1994, ಸೆಕ್ಷನ್ 231 ರ ಉಪ-ವಿಭಾಗ (1) ರ ಷರತ್ತು (ಎ) ಪ್ರಕಾರ ಎನ್‌ಡಿಎಂಸಿ ಪ್ರದೇಶದ ಅಡಿಯಲ್ಲಿ 'ಔರಂಗಜೇಬ್ ಲೇನ್' ಅನ್ನು 'ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಲೇನ್' ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಮುಂದೆ ಅಜೆಂಡಾ ಐಟಂ ಅನ್ನು ಇರಿಸಲಾಗಿತ್ತು" ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.  "ಔರಂಗಜೇಬ್ ಲೇನ್ ಅನ್ನು ಡಾ ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಅನುಮೋದಿಸಿದೆ. ಜನರ ಭಾವನೆಗಳನ್ನು ಗೌರವಿಸಲು, ನಮ್ಮ ಹಿಂದಿನದುಕಾಲದ ಮಹಾನ್ ಪುರುಷರು ಮತ್ತು ಮಹಿಳೆಯರನ್ನು ಗುರುತಿಸಿ ಗೌರವಿಸುವ ಅಗತ್ಯತೆ, ರಸ್ತೆಗಳು / ಬೀದಿಗಳು / ಸಂಸ್ಥೆಗಳಿಗೆ ಮರುನಾಮಕರಣ ಮಾಡಲಾಗಿದೆ. " ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕಾನೂನುಗಳ (ವಿಶೇಷ ನಿಬಂಧನೆಗಳು) ಎರಡನೇ ಕಾಯಿದೆ, 2011 ರ ಸಿಂಧುತ್ವದ ವಿಸ್ತರಣೆಗೆ ಎನ್‌ಡಿಎಂಸಿ ಸಹ ತನ್ನ ಒಪ್ಪಿಗೆಯನ್ನು ನೀಡಿದೆ. ಕೌನ್ಸಿಲ್ ತನ್ನ ಅನುಮೋದನೆಯನ್ನು ನೀಡಿತು ಮತ್ತು ದೊಡ್ಡ ಒಳಚರಂಡಿ ಮಾರ್ಗಗಳ ಹೂಳು ತೆಗೆಯುವ ಮತ್ತು ಪುನರ್ವಸತಿ ಕೆಲಸಕ್ಕಾಗಿ ಅಂದಾಜು 25 ಕೋಟಿ ರೂಪಾಯಿಗಳ ವೆಚ್ಚವನ್ನು ಮಂಜೂರು ಮಾಡಿದೆ.

PM Modi US Visit: ಭಾರತದ ಪ್ರಧಾನಿಗೆ 'ನಮೋ' ಎಂದ ಅಮೆರಿಕದ ರಾಜಕಾರಣಿಗಳು

"ಎನ್‌ಡಿಎಂಸಿ ಪ್ರದೇಶದ ಒಳಚರಂಡಿ ವ್ಯವಸ್ಥೆಯು 80 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ, ಇದು ಅದರ ಉಪಯುಕ್ತ ಜೀವನವನ್ನು ಮೀರಿದೆ ಮತ್ತು ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ಇವುಗಳು ಅಸಮರ್ಪಕವಾಗಿವೆ" ಎಂದು ಉಪಾಧ್ಯಾಯ ಹೇಳಿದ್ದಾರೆ.

 

ಸಂಸತ್‌ ಭವನದಲ್ಲೇ ಪುರುಷ ಸೆನೆಟರ್‌ನಿಂದ ಲೈಂಗಿಕ ದೌರ್ಜನ್ಯ; ಕಚೇರಿಯಿಂದ ಹೊರಬರಲೂ ಭಯ: ಮಹಿಳಾ ಸೆನೆಟರ್‌ ಸ್ಫೋಟಕ ಆರೋಪ

Follow Us:
Download App:
  • android
  • ios