PM Modi US Visit: ಭಾರತದ ಪ್ರಧಾನಿಗೆ 'ನಮೋ' ಎಂದ ಅಮೆರಿಕದ ರಾಜಕಾರಣಿಗಳು
ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕದ ಜಂಟಿ ಸದನವನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. ಅಮೆರಿಕದ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎನ್ನುವ ಹೆಮ್ಮೆಯೂ ಇವರದಾಗಿದೆ. ಇದರ ಬೆನ್ನಲ್ಲಿಯೇ ಅಮೆರಿಕದ ಸೆನೆಟ್ ಸದಸ್ಯರು ಮೋದಿ ಮಾತಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಜೂ.23): 15ಕ್ಕೂ ಅಧಿಕ ಬಾರಿ ಸ್ಟ್ಯಾಂಡಿಂಗ್ ಓವಿಯೇಷನ್‌ಗಳು, ಮೋದಿ-ಮೋದಿ ಎನ್ನುವ ಹರ್ಷೋದ್ಘಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕದಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ಬಾರಿ ಮೋದಿ ದೇಶದ ಪ್ರಜಾಸತಾತ್ಮಕ ಮೌಲ್ಯಗಳು, ಭಾರತ-ಅಮೆರಿಕದ ಸಂಬಂಧದ ಬಗ್ಗೆ ಭಾಷಣದಲ್ಲಿ ಮಾತನಾಡುವಾಗ ಅಮೆರಿಕದ ಕಾಂಗ್ರೆಸ್‌ಮನ್ (ಸಂಸತ್ ಸದಸ್ಯರು) ಮೋದಿ-ಮೋದಿ ಎಂದು ಹರ್ಷೋದ್ಘಾರ ಮಾಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಅವರು ಮುಖ್ಯವಾಗಿ ಉಗ್ರವಾದ, ಭಾರತದಲ್ಲಿ ಮುಸ್ಲಿಮರ ಪ್ರಜಾಸತ್ತಾತ್ಮಕ ಹಕ್ಕುಗಳು, ಟ್ರೇಡ್ ಯೂನಿಯನ್, ಭಾರತದಲ್ಲಿನ ರಾಜಕೀಯ ಪಕ್ಷಗಳು ಮತ್ತು ಭಾಷೆಗಳ ಬಗ್ಗೆ ಮಾತನಾಡಿದರು. ಭಾರತದಲ್ಲಿ ನಾನು ಸಾವಿರಾರು ಭಾಷಣಗಳಲ್ಲಿ ಮಾತನಾಡಿರಬಹುದು. ಆದರೆ, ನಾವೆಲ್ಲೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲಿಯೇ ಇಡೀ ಸದನದಲ್ಲಿ ಕರತಾಡನ ವ್ಯಕ್ತವಾಯಿತು.
ಇಂದು ನಾನು ಕಾಂಗ್ರೆಸ್ ಸದನದಲ್ಲಿ ಭಾರತದ ಪ್ರಧಾನಮಂತ್ರಿಯವರು ಮಾಡಿದ ಜಂಟಿ ಭಾಷಣದಲ್ಲಿ ಭಾಗವಹಿಸಿದ್ದೆ. ಜಾಗತಿಕವಾಗಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ಮತ್ತು ನಮ್ಮ ಆರ್ಥಿಕತೆಯನ್ನು ಬೆಳೆಸಲು ಯುಎಸ್-ಭಾರತ ಪಾಲುದಾರಿಕೆ ನಿರ್ಣಾಯಕವಾಗಿದೆ ಎಂದು ಕಾಂಗ್ರೆಸ್‌ಮನ್ ಕ್ರೇಗ್ ಸ್ಟಾಂಟನ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಮಹತ್ವದ ಅವಕಾಶವಾಗಿದೆ. ಅಮೆರಿಕ ಮತ್ತು ಭಾರತದ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆ ಎರಡರಲ್ಲೂ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಆಳಗೊಳಿಸಲು ಇದಕ್ಕಿಂತ ಮಹತ್ವದ ಸಮಯ ಬೇರೆ ಇರಲಿಲ್ಲ ಎಂದು ಸಂಸದ ಮಾರ್ಕ್ ವಾರ್ನರ್ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಭಾಷಣದ ಬೆನ್ನಲ್ಲೇ ವಿವಿಧ ಸಂಸದರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡಿ ಮೋದಿಯನ್ನು ಅಭಿನಂದಿಸಿದ್ದಾರೆ ಮತ್ತು ಅವರ ಭಾಷಣವನ್ನು ಶ್ಲಾಘಿಸಿದ್ದಾರೆ. ಸಂಸದ ಕೊಲೀನ್ ಆಲ್ರೆಡ್ ಅವರು ತಮ್ಮ ಪೋಸ್ಟ್‌ನಲ್ಲಿ, "ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪ್ರಜಾಪ್ರಭುತ್ವಗಳು ಕೈಜೋಡಿಸಬೇಕು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಆರ್ಥಿಕ ಮತ್ತು ಅಧಿಕೃತ ಸಹಕಾರವು ಬಲಗೊಳ್ಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಅವರು ಬರೆದುಕೊಂಡಿದ್ದಾರೆ.
ಮಾತುಕತೆಗಳ ಮೂಲಕ ಬೇಳೆಕಾಳುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ನನ್ನ ಬೇಡಿಕೆಯ ವರ್ಷಗಳ ನಂತರ, ಭಾರತವು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ರೈತರಿಗೆ ಮತ್ತು ನಮ್ಮ ಮಿತ್ರ ರಾಷ್ಟ್ರವಾದ ಭಾರತದೊಂದಿಗೆ ಅಮೆರಿಕದ ಸಂಬಂಧಕ್ಕೆ ಇದು ಉತ್ತಮ ಸುದ್ದಿ ಎಂದು ಸಂಸದ ಸ್ಟೀವ್ ಡೈನ್ಸ್ ಪೋಸ್ಟ್ ಮಾಡಿದ್ದಾರೆ. ಸಂಸದ ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್, 'ನನ್ನ ಸ್ನೇಹಿತನನ್ನು ಸಂಸತ್ತಿಗೆ ಸ್ವಾಗತಿಸಿರುವುದಕ್ಕೆ ಬಹಳ ಸಂತಸವಾಗಿದೆ' ಎಂದು ಬರೆದುಕೊಂಡಿದ್ದಾರೆ.
PM Modi US Visit: ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಮೋದಿ, ಬೈಡೆನ್
ನಮ್ಮ ಉಭಯ ದೇಶಗಳ ನಡುವಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಮಾನವೀಯ ಸಂಬಂಧಗಳನ್ನು ಬಲಪಡಿಸಲು ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತಿರುವಾಗ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿನಿಧಿಗಳ ಸಭೆಗೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ಸಂಸದ ಜಿಮ್ಮಿ ಪನೆಟ್ಟಾ ಪೋಸ್ಟ್ ಮಾಡಿದ್ದಾರೆ.
ಭಾರತ-ಅಮೆರಿಕಾದ ಡಿಎನ್‌ಎಯಲ್ಲಿಯೇ ಪ್ರಜಾಪ್ರಭುತ್ವವಿದೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಸ್ವಾಗತಿಸುತ್ತಿರುವುದನ್ನು ಅದೃಷ್ಟ ಎಂದು ಪರಿಗಣಿಸುತ್ತೇನೆ. ಇಂದು, ಪ್ರಧಾನಿ ಮೋದಿ ಅವರು ವಿಶ್ವದ ಪ್ರಜಾಪ್ರಭುತ್ವದ ದೊಡ್ಡ ಸಂಕೇತಗಳಲ್ಲಿ ಒಂದಾದ ಯುಎಸ್ ರಾಜಧಾನಿಗೆ ಆಗಮಿಸಿದರು. "ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಸಂಬಂಧಗಳನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಸ್ಪೀಕರ್ ಕೆವಿನ್ ಮೆಕಾರ್ಥಿ ಬರೆದುಕೊಂಡಿದ್ದಾರೆ. ಕೆವಿನ್ ಮೆಕಾರ್ಥಿ ಭಾಷಣದ ಬಳಿಕ ಮೋದಿ ಅವರ ಆಟೋಗ್ರಾಫ್ ಪಡೆದುಕೊಳ್ಳುತ್ತಿರುವ ಚಿತ್ರ ಕೂಡ ವೈರಲ್ ಆಗಿದೆ.