Asianet Suvarna News Asianet Suvarna News

ಸಂಸತ್‌ ಭವನದಲ್ಲೇ ಪುರುಷ ಸೆನೆಟರ್‌ನಿಂದ ಲೈಂಗಿಕ ದೌರ್ಜನ್ಯ; ಕಚೇರಿಯಿಂದ ಹೊರಬರಲೂ ಭಯ: ಮಹಿಳಾ ಸೆನೆಟರ್‌ ಸ್ಫೋಟಕ ಆರೋಪ

ಲಿಡಿಯಾ ಥೋರ್ಪ್ ಸಂಪ್ರದಾಯವಾದಿ ಡೇವಿಡ್ ವ್ಯಾನ್ ವಿರುದ್ಧ ತನ್ನ ಆರೋಪಗಳನ್ನು ಪುನರುಚ್ಚರಿಸಿದರು. ಆದರೆ, ಡೇವಿಡ್‌ ವ್ಯಾನ್‌ ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿದರು. 

lidia thorpe sexually assaulted by powerful men in parliament australian lawmaker ash
Author
First Published Jun 15, 2023, 2:05 PM IST

ಸಿಡ್ನಿ, ಆಸ್ಟ್ರೇಲಿಯಾ (ಜೂನ್ 15, 2023): ಸಂಸತ್ತಿನಲ್ಲಿ ತನಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆಸ್ಟ್ರೇಲಿಯಾದ ಮಹಿಳಾ ಸೆನೆಟರ್‌ವೊಬ್ಬರು ಆರೋಪ ಮಾಡಿದ್ದಾರೆ. ಬುಧವಾರ ತಾನು ಮಾಡಿದ್ದ ಆರೋಪವನ್ನು ಗುರುವಾರ ಮತ್ತೆ ಪುನರುಚ್ಛರಿಸಿದ್ದು, ಈ ಕಟ್ಟಡವು ಮಹಿಳೆಯರಿಗೆ ಕೆಲಸ ಮಾಡಲು "ಸುರಕ್ಷಿತ ಸ್ಥಳವಲ್ಲ" ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಸೆನೆಟ್‌ ಭಾಷಣದ ವೇಳೆ ಕಣ್ಣೀರು ಹಾಕಿದ ಸ್ವತಂತ್ರ ಸೆನೆಟರ್‌ ಲಿಡಿಯಾ ಥೋರ್ಪ್ ಅವರು ತನ್ನ ವಿರುದ್ಧ ಅವಾಚ್ಯವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ, "ಅನುಚಿತವಾಗಿ ಸ್ಪರ್ಶಿಸಲಾಗಿದೆ" ಮತ್ತು "ಪ್ರಬಲ ಪುರುಷರು" ಸೆಕ್ಸ್‌ ಮಾಡಲು ಒತ್ತಾಯಿಸಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. 

ಇದನ್ನು ಓದಿ: ಲೈಂಗಿಕ ಕಿರುಕುಳ ಕೇಸಲ್ಲಿ ಕೇರಳ ಮಾಜಿ ಸಿಎಂ, ಬಿಜೆಪಿಯ ಎ.ಪಿ. ಅಬ್ದುಲ್ಲಕುಟ್ಟಿಗೆ ಸಿಬಿಐ ಕ್ಲೀನ್ ಚಿಟ್

ಬುಧವಾರ ತನ್ನ ಸಹವರ್ತಿ ಸೆನೆಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಲಿಡಿಯಾ ಥೋರ್ಪ್ ಬುಧವಾರ ಮೊದಲ ಬಾರಿಗೆ ಆರೋಪಿಸಿದ್ದರು. ಆದರೆ, ಸಂಸತ್ತಿನಿಂದ ನಿರ್ಬಂಧಕ್ಕೊಳಗಾಗುವ ಬೆದರಿಕೆಯ ಅಡಿಯಲ್ಲಿ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೆ, ಗುರುವಾರ, ಲಿಡಿಯಾ ಥೋರ್ಪ್ ಸಂಪ್ರದಾಯವಾದಿ ಡೇವಿಡ್ ವ್ಯಾನ್ ವಿರುದ್ಧ ತನ್ನ ಆರೋಪಗಳನ್ನು ಪುನರುಚ್ಚರಿಸಿದರು. ಆದರೆ, ಡೇವಿಡ್‌ ವ್ಯಾನ್‌ ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿದರು.

ಹಾಗೆ, ತಮ್ಮ ಮೇಲಿನ ಆರೋಪಗಳಿಂದ ಛಿದ್ರಗೊಂಡಿದ್ದೇನೆ ಮತ್ತು ಜರ್ಜರಿತರಾಗಿದ್ದೇನೆ ಎಂದು ಹೇಳಿದರು. ಹಾಗೂ,  ಸ್ಥಳೀಯ ಮಾಧ್ಯಮಗಳಿಗೆ ಲಿಡಿಯಾ ಥೋರ್ಪ್‌ ಅವರ ಆರೋಪ "ಸಂಪೂರ್ಣವಾಗಿ ಸುಳ್ಳು" ಎಂದು ಡೇವಿಡ್‌ ವ್ಯಾನ್‌ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಲಿಬರಲ್ ಪಾರ್ಟಿ ಗುರುವಾರ ಡೇವಿಡ್‌ ವ್ಯಾನ್‌ ಅವರನ್ನು ಅಮಾನತುಗೊಳಿಸಿದೆ. 

ಇದನ್ನೂ ಓದಿ: Pune Crime: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ

ಆಸ್ಟ್ರೇಲಿಯದ ತೀವ್ರ ಮಾನನಷ್ಟ ಕಾನೂನುಗಳಿಂದ ಆಪಾದನೆಗಳನ್ನು ಸಂರಕ್ಷಿಸಲಾಗಿದ್ದರೂ, ಡೇವಿಡ್‌ ವ್ಯಾನ್ ಈ ವಿಷಯದಲ್ಲಿ ವಕೀಲರನ್ನು ತೊಡಗಿಸಿಕೊಂಡಿದ್ದಾರೆ ಮತ್ತು ಸಂಸದೀಯ ನಿಯಮಗಳನ್ನು ನ್ಯಾವಿಗೇಟ್ ಮಾಡಲು ತನ್ನ ಹೇಳಿಕೆಯನ್ನು ಪುನಃ ಹೇಳಬೇಕಾಯಿತು ಎಂದು ಲಿಡಿಯಾ ಥೋರ್ಪ್ ಹೇಳಿದರು.

ಅಲ್ಲದೆ, "ಲೈಂಗಿಕ ದೌರ್ಜನ್ಯ" ಎಂದರೆ ವಿಭಿನ್ನ ಜನರಿಗೆ ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ ಎಂದು ಹೇಳಿದ ಲಿಡಿಯಾ ಥೋರ್ಪ್ ತನ್ನ ಅನುಭವಗಳನ್ನು ವಿವರಿಸಿದರು. "ನಾನು ಅನುಭವಿಸಿದ್ದೇನೆಂದರೆ ನನ್ನನ್ನು ಹಿಂಬಾಲಿಸಲಾಗುತ್ತಿದೆ, ಸೆಕ್ಸ್ ಮಾಡುವಂತೆ ಆಕ್ರಮಣಕಾರಿಯಾಗಿ ಪ್ರತಿಪಾದಿಸಲಾಗಿದೆ ಮತ್ತು ಅನುಚಿತವಾಗಿ ಸ್ಪರ್ಶಿಸಲಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Murugha Mutt sexual assault case: ಪೋಕ್ಸೋ ಕಾಯ್ದೆಯಡಿ ಶಿವಮೂರ್ತಿ ಶ್ರೀಗಳ ಬಂಧನ

"ನಾನು ಕಚೇರಿಯ ಬಾಗಿಲಿನಿಂದ ಹೊರಬರಲು ಹೆದರುತ್ತಿದ್ದೆ. ನಾನು ಸ್ವಲ್ಪ ಬಾಗಿಲು ತೆರೆಯುತ್ತೇನೆ ಮತ್ತು ಹೊರಹೋಗುವ ಮೊದಲು ಅಲ್ಲಿ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸುತ್ತೇನೆ" ಎಂದೂ ಅವರು ಇತರ ಸೆನೆಟರ್‌ಗಳಿಗೆ  ತಿಳಿಸಿದರು. "ನಾನು ಈ ಕಟ್ಟಡದೊಳಗೆ ಕಾಲಿಟ್ಟಾಗಲೆಲ್ಲಾ ನನ್ನೊಂದಿಗೆ ಯಾರಾದರೂ ಇರಬೇಕಾಗಿತ್ತು" ಎಂದೂ ಅವರು ಹೇಳಿದರು.
 

Follow Us:
Download App:
  • android
  • ios