ಡಿಸ್ನಿಯ ಪ್ರಸಿದ್ಧ ದಿ ಲಯನ್ ಕಿಂಗ್ ಸಿನಿಮಾದಲ್ಲಿ ಯುವ ನಲಾ ನಾ ಪಾತ್ರ ಮಾಡಿ ಪ್ರಸಿದ್ಧಿಗೆ ಬಂದಿದ್ದ ನಟಿ ಇಮಾಮಿ ಸ್ಮಿತ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆಕೆಯ ಬಾಯ್‌ಫ್ರೆಂಡ್ ಜೋರ್ಡಾನ್ ಡಿ. ಜಾಕ್ಸನ್-ಸ್ಮಾಲ್‌ನನ್ನು ಬಂಧಿಸಲಾಗಿದೆ. ಡಿಸೆಂಬರ್ 21ರಂದು ಈ ಘಟನೆ ನಡೆದಿದೆ.
ಲಾಸ್ ಏಂಜಲೀಸ್: ಡಿಸ್ನಿಯ ಪ್ರಸಿದ್ಧ ದಿ ಲಯನ್ ಕಿಂಗ್ ಸಿನಿಮಾದಲ್ಲಿ ಯುವ ನಲಾ ನಾ ಪಾತ್ರ ಮಾಡಿ ಪ್ರಸಿದ್ಧಿಗೆ ಬಂದಿದ್ದ ನಟಿ ಇಮಾಮಿ ಸ್ಮಿತ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆಕೆಯ ಬಾಯ್‌ಫ್ರೆಂಡ್ ಜೋರ್ಡಾನ್ ಡಿ. ಜಾಕ್ಸನ್-ಸ್ಮಾಲ್‌ನನ್ನು ಬಂಧಿಸಲಾಗಿದೆ. ಡಿಸೆಂಬರ್ 21ರಂದು ಈ ಘಟನೆ ನಡೆದಿದೆ.
ನ್ಯೂಜೆರ್ಸಿಯ ಮಿಡಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, ಡಿಸೆಂಬರ್ 21 ರಂದು ಇಮಾನಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. 911ಗೆ ಕರೆ ಬಂದ ನಂತರ ಪ್ರತಿಕ್ರಿಯಿಸಿದ ನ್ಯೂಜೆರ್ಸಿಯ ಎಡಿಸನ್ ಪೊಲೀಸರಿಗೆ ನಟಿ ಇರಿತಕ್ಕೊಳಗಾಗಿರುವುದು ಕಂಡು ಬಂದಿದ್ದು, ಕೂಡಲೇ ಅವರನ್ನು ರಾಬರ್ಟ್ ವುಡ್ ಜಾನ್ಸನ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಸ್ಮಿತ್ ಮತ್ತು ಜಾಕ್ಸನ್ ಸ್ಮಾಲ್ ಪರಸ್ಪರ ಪರಿಚಿತರಾಗಿದ್ದು, ಇದೊಂದು ಹಠಾತ್ ಆಗಿ ನಡೆದ ಘಟನೆ ಅಲ್ಲ ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ಸ್ಮಿತ್ ಅವರ ಚಿಕ್ಕಮ್ಮ ಕಿರಾ ಹೆಲ್ಪರ್ ಘಟನೆಗೆ ಸಂಬಂಧಿಸಿದಂತೆ GoFundMe ಅಭಿಯಾನ ನಡೆಸಿದ್ದು, ಅವರ ಪೋಸ್ಟ್‌ನಲ್ಲಿ ಜಾಕ್ಸನ್, ಇಮಾನಿಯ ಗೆಳೆಯ ಎಂದು ಅವರು ಹೇಳಿದ್ದಾರೆ. ಇಮಾಮಿ ಬಾಳಿ ಬದುಕಬೇಕಿತ್ತು. ಇಡೀ ಜೀವನ ಅವಳ ಮುಂದಿತ್ತು. ಅತ್ಯಂತ ಪ್ರತಿಭಾನ್ವಿತೆಯಾಗಿದ್ದಳು ಅವಳು ಮುಖ್ಯವಾಗಿ ಡಿಸ್ನಿಯ 'ಲಯನ್ ಕಿಂಗ್' ನಲ್ಲಿ ಬ್ರಾಡ್‌ವೇಯಲ್ಲಿ ಯಂಗ್ ನಲಾ ಪಾತ್ರವನ್ನು ನಿರ್ವಹಿಸಿದಳು. ಎಂದು ಆಕೆಯ ಚಿಕ್ಕಮ್ಮ ಬರೆದಿದ್ದಾರೆ. ನಟಿ ಇಮಾಮಿಯ ಪೋಷಕರನ್ನು ಬೆಂಬಲಿಸುವುದಕ್ಕಾಗಿ ಗೋ ಫಂಡ್ ಮೀ ಅಭಿಯಾನ ನಡೆಸಲಾಗಿದ್ದು, 55,000 ಯುಎಸ್ ಡಾಲರ್ ಸಂಗ್ರಹಿಸುವ ಗುರಿ ಹೊಂದಿದ್ದಾರೆ.
ಇದನ್ನೂ ಓದಿ: ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಜಾಕ್ಸನ್ ವಿರುದ್ಧ ಫಸ್ಟ್ ಡಿಗ್ರಿ ಮರ್ಡರ್ ಪ್ರಕರಣ ದಾಖಲಾಗಿದೆ.ಎರಡನೇ ದರ್ಜೆಯ ಮಗುವಿನ ಕಲ್ಯಾಣಕ್ಕೆ ಅಪಾಯವನ್ನುಂಟುಮಾಡುವುದು, ಮೂರನೇ ದರ್ಜೆಯ ಕಾನೂನುಬಾಹಿರ ಉದ್ದೇಶಕ್ಕಾಗಿ ಶಸ್ತ್ರಾಸ್ತ್ರ ಹೊಂದುವುದು ಮತ್ತು ನಾಲ್ಕನೇ ದರ್ಜೆಯ ಕಾನೂನುಬಾಹಿರ ಶಸ್ತ್ರಾಸ್ತ್ರ ಹೊಂದುವುದು ಸೇರಿದಂತೆ ಹಲವು ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ. ಆತನನ್ನು ಮಿಡ್ಲ್‌ಸೆಕ್ಸ್ ಕೌಂಟಿ ವಯಸ್ಕರ ತಿದ್ದುಪಡಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಮಿತ್ ತನ್ನ ಮೂರು ವರ್ಷದ ಮಗ, ಪೋಷಕರಾದ ಮೋನಿಕ್ ರಾನ್ಸ್-ಹೆಲ್ಪರ್ ಮತ್ತು ರೌನಿ ಹೆಲ್ಪರ್, ಆಕೆಯ ಚಿಕ್ಕಮ್ಮ ಮತ್ತು ಇಬ್ಬರು ಕಿರಿಯ ಸಹೋದರರನ್ನು ಅಗಲಿದ್ದಾರೆ.
ಇದನ್ನೂ ಓದಿ: ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ: ಸೋದರಿಯರಿಬ್ಬರು ಸಾವಿಗೆ ಶರಣು

