Cine World

ಮುದ್ದಾದ ನಟಿ ಬಾಳಲ್ಲಿ ಭೀಕರ ದುರಂತ

ಬಣ್ಣದ ಜಗತ್ತು ನೋಡಲಷ್ಟೇ ಚಂದ. ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳ ನೋವಿನ ಕಥೆಯಂತೂ ಅಘೋರ. 

Image credits: google

ಈ ನಟಿ ಸತ್ತಿದ್ದೂ ಅಂಥ ಸಂಬಂಧದಿಂದಲೇ

ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ಹೆಣ್ಣಿನ ಚಪಲ, ಅವರನ್ನು ನಂಬಿಕೊಂಡ ಹೆಣ್ಣು ಮಕ್ಕಳ ಮೇಲೂ ಭೀಕರ ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಇಜು ಪ್ರಿಯಾ ರಾಜವಂಶ್‌ ದುರಂತ

ನಾಟಕಗಳಲ್ಲಿ ನಟಿಸುತ್ತಿದ್ದ ಪ್ರಿಯಾ ರಾಜವಂಶ್ ಗೆ ನಟನೆ ಅಂದ್ರೆ ಅಚ್ಚುಮೆಚ್ಚು.  ಯಾರೋ ಒಬ್ಬ ಫೋಟೋಗ್ರಾಫರ್ ಕ್ಲಿಕ್ ಮಾಡಿದ ಈ ನಟಿಯ ಫೋಟೋ ನೋಡಿದ ನಿರ್ದೇಶಕ ಚೇತನ್ ಆನಂದ್ ಚಿತ್ರವೊಂದಕ್ಕೆ ಹೀರೋಯಿನ್ ಮಾಡಿದರು.

ಸಿಕ್ತು ಸಿನಿಮಾ ಅವಕಾಶ

ಹಕೀಕತ್ ಚೇಚೇತನ್ ಆನಂದ್, ಈ ಚಿತ್ರದಲ್ಲಿ ಧರ್ಮೇಂದ್ರ ಜೊತೆಗೆ ನಟಿಸಲು ಹೊಸ ನಾಯಕಿಯ ಅನ್ವೇಷಣೆಯಲ್ಲಿದ್ದರು. ಅದಕ್ಕೆ ಪ್ರಿಯಾ ರಾಜವಂಶ್ ಆಯ್ಕೆ ಆದರು.

ಸೌಂದರ್ಯಕ್ಕೆ ಮಾರುಹೋದ ನಿರ್ದೇಶಕ

ಹಕೀಕತ್ ಚಿತ್ರವನ್ನು ನಿರ್ದೇಶಿಸುವಾಗ ಚೇತನ್ ಆನಂದ್ ಪ್ರಿಯಾ ರಾಜವಂಶ್ ಅವರ ಸೌಂದರ್ಯಕ್ಕೆ ಮಾರುಹೋದರು. ನಂತರದ ಚಿತ್ರಗಳಿಗೆ ಅವರೇ ಹೀರೋಯಿನ್ ಆದರು. ಒಟ್ಟಿಗೆ ಕೆಲಸ ಮಾಡುತ್ತಾ ಇಬ್ಬರೂ ಹತ್ತಿರವಾದರು.

ಚೇತನ್ ಆನಂದ್‌ಗೆ ಸಿತ್ತ ಜೊತೆಗಾತಿ

ಆಗಲೇ ಚೇತನ್ ದಾಂಪತ್ಯ ಹಳಸಿತ್ತು. ಪತ್ನಿ ಉಮಾರೊಂದಿಗೆ ಯಾವುದೂ ಸರಿ ಬರಲಿಲ್ಲ. ಇಂಥ ಸಂದರ್ಭದಲ್ಲಿಯೇ ಸಿಕ್ಕ ಪ್ರಿಯಾ ಜೊತೆಯೇ ವಾಸಿಸಲು ಆರಂಭಿಸಿದರು ಚೇತನ್ ಆನಂದ್.

ಚೇತನ್ ಆನಂದ್ ಮಕ್ಕಳಿಗೆ ಇರಿಸುಮುರಿಸು

ತಂದೆಯೊಂದಿಗಿನ ಪ್ರಿಯಾ ಸಂಬಂಧ ಚೇತನ್ ಪುತ್ರರಿಗೆ ಇರಿಸುಮುರಿಸಾಯಿತು. ಚೇತನ್ ಮಕ್ಕಳೊಂದಿಗೆ ಪ್ರಿಯಾರನ್ನೂ ಆಸ್ತಿಗೆ ವಾರಸುದಾರರನ್ನಾಗಿ ಮಾಡಿದ್ದು ಸಿಟ್ಟು ಹೆಚ್ಚಿಸಿತು. 1997ರಲ್ಲಿ ಚೇತನ್ ನಿಧನರಾದರು.

ಪ್ರಿಯಾ ರಾಜವಂಶ್ ಶವ ಪತ್ತೆ

ಒಂಟಿಯಾಗಿದ್ದ ಪ್ರಿಯಾಗೆ ಏನಾಯಿತೋ ಗೊತ್ತಿಲ್ಲ. ಒಂದಿನ ಅವರ ಶವ ಪತ್ತೆಯಾಯಿತು. ಚೇತನ್ ಆನಂದ್ ಮಕ್ಕಳೇ ಆಸ್ತಿಗಾಗಿ ಅವರನ್ನು ಕೊಂದರು ಎಂದೂ ಹೇಳಲಾಗುತ್ತದೆ. 

ಪ್ರಿಯಾ ರಾಜವಂಶ್ ಹತ್ಯೆ ಸುಳಿವು

ಪ್ರಿಯಾಗೆ ಡೈರಿ ಬರೆಯೋ ಅಭ್ಯಾಸವಿತ್ತು. ಚೇತನ್ ಮಕ್ಕಳು ಆಸ್ತಿ ಹಿಂದಿರುಗಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದವರು ಬರೆದಿದ್ದರು. ಇದೇ ಆಧಾರದ ಮೇಲೆ ಪೊಲೀಸರು ಚೇತನ್ ಮಕ್ಕಳನ್ನು ವಶಕ್ಕೆ ಪಡೆದಿದ್ದರು.

ಸಾವಿನ ರಹಸ್ಯ ಬಯಲಾಗಲಿಲ್ಲ!

ಚೇತನ್ ಪುತ್ರರಾದ ಕೇತನ್ ಮತ್ತು ವಿವೇಕ್ ಬಂಧಿತರಾಗಿದ್ದರು. ಇಬ್ಬರಿಗೂ 2002ರಲ್ಲಿ ಜಾಮೀನು ಸಿಕ್ಕಿತು. 2011ರಲ್ಲಿ ಸಾಕ್ಷ್ಯಾಧಾರ ಸಿಗದ ಕಾರಣ ನ್ಯಾಯಾಲಯ ಇಬ್ಬರನ್ನೂ ಖುಲಾಸೆಗೊಳಿಸಿತು.

ಪ್ರೇತಾತ್ಮದೊಂದಿಗೆ ಸಂವಾದಿಸುತ್ತಿದ್ದ ನಟ 31ನೇ ವಯಸ್ಸಿಗೇ ಸತ್ತಿದ್ದು ಹೇಗೆ?

ಶ್ರೀದೇವಿ, ದಿವ್ಯಾ ಭಾರತಿ ಸೇರಿದಂತೆ 7 ತಾರೆಯರ ಸಾವಿನ ಸೀಕ್ರೆಟ್!

ಈ ಖ್ಯಾತ ಬಾಲಿವುಡ್ ನಟರು ಹಾಲೂ ಮಾರ್ತರೆ!

Bigg Bossಗೆ ಬರಲು ಒಲ್ಲೆ ಅಂತಿದ್ದಾರೆ ಸಲ್ಮಾನ್ ಖಾನ್ ಎಕ್ಸ್ ಗರ್ಲ್ ಫ್ರೆಂಡ್!