ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇಡಿ ಶಾಕ್‌; ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕಿಕ್‌ಬ್ಯಾಕ್‌ನಿಂದ ಲಾಭ ಪಡೆದ "ಸೌತ್ ಕಾರ್ಟೆಲ್" ನ ಭಾಗವಾಗಿ ಕೆ. ಕವಿತಾ ಇದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ್ದು, ಸಮನ್ಸ್‌ಗೆ ಬಲವಾಗಿ ಪ್ರತಿಕ್ರಿಯಿಸಿದ ಕೆ. ಕವಿತಾ ಈ ಆರೋಪಗಳನ್ನು ತಳ್ಳಿಹಾಕಿದ್ದು ಮತ್ತು ಕಾನೂನು ಅಭಿಪ್ರಾಯಗಳನ್ನು ಪಡೆಯುವುದಾಗಿ ಹೇಳಿದ್ದರು.

kcrs daughter to be questioned again in delhi liquor policy case tomorrow ash

ನವದೆಹಲಿ (ಮಾರ್ಚ್‌ 8, 2023): ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ತನಿಖೆ ಮುಂದುವರಿಸಿದ್ದು, ಕೆಸಿಅರ್‌ ಪುತ್ರಿಯನ್ನು ಮತ್ತೆ ವಿಚಾರಣೆಗೆ ಕರೆದಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ನಾಳೆ ವಿಚಾರಣೆ ನಡೆಸಲಿದೆ. ಜಾರಿ ನಿರ್ದೇಶನಾಲಯವು ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದು, ಇತ್ತೀಚೆಗಷ್ಟೇ ಕೆಸಿಆರ್‌ ಪುತ್ರಿ ಆಪ್ತ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಮಾರ್ಚ್ 13 ರವರೆಗೆ ಇಡಿ ಕಸ್ಟಡಿಗೆ ಮತ್ತು ಮದ್ಯದ ಉದ್ಯಮಿ ಅಮನದೀಪ್ ಧಲ್ ಅವರನ್ನು ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಒಂದು ದಿನದ ನಂತರ ಕೆ. ಕವಿತಾ ಅವರಿಗೆ ಸಮನ್ಸ್ ಬಂದಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕಿಕ್‌ಬ್ಯಾಕ್‌ನಿಂದ ಲಾಭ ಪಡೆದ "ಸೌತ್ ಕಾರ್ಟೆಲ್" ನ ಭಾಗವಾಗಿ ಕೆ. ಕವಿತಾ ಇದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ್ದು, ಸಮನ್ಸ್‌ಗೆ ಬಲವಾಗಿ ಪ್ರತಿಕ್ರಿಯಿಸಿದ ಕೆ. ಕವಿತಾ ಈ ಆರೋಪಗಳನ್ನು ತಳ್ಳಿಹಾಕಿದ್ದು ಮತ್ತು ಕಾನೂನು ಅಭಿಪ್ರಾಯಗಳನ್ನು ಪಡೆಯುವುದಾಗಿ ಹೇಳಿದ್ದರು. "ಕಾನೂನು ಪಾಲಿಸುವ ನಾಗರಿಕನಾಗಿ, ನಾನು ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಆದರೂ, ಧರಣಿ ಮತ್ತು ಮೊದಲೇ ಫಿಕ್ಸ್‌ ಆಗಿರುವ ಇತರೆ ಅಪಾಯಿಂಟ್‌ಮೆಂಟ್‌ಗಳ ಕಾರಣ, ನಾನು ಹಾಜರಾಗುವ ದಿನಾಂಕದ ಬಗ್ಗೆ ಕಾನೂನು ಅಭಿಪ್ರಾಯಗಳನ್ನು ಪಡೆಯುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಮದ್ಯ ಹಗರಣ: ಇಂದು ವಿಚಾರಣೆಗೆ ಬರುವಂತೆ ಮನೀಶ್‌ ಸಿಸೋಡಿಯಾಗೆ ಸಿಬಿಐ ಸಮನ್ಸ್‌; ಹೆಚ್ಚಿನ ಸಮಯ ಕೇಳಿದ ಸಚಿವ

ನಮ್ಮ ನಾಯಕ, (ತೆಲಂಗಾಣ) ಸಿಎಂ ಕೆಸಿಆರ್ ಮತ್ತು ಇಡೀ ಬಿಆರ್‌ಎಸ್ ಪಕ್ಷದ ವಿರುದ್ಧದ ಹೋರಾಟ ಹಾಗೂ ಧ್ವನಿಯ ವಿರುದ್ಧದ ಈ ಬೆದರಿಕೆಯ ತಂತ್ರಗಳು ನಮ್ಮನ್ನು ತಡೆಯುವುದಿಲ್ಲ ಎಂದು ಕೇಂದ್ರದ ಆಡಳಿತ ಪಕ್ಷವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಕೆಸಿಆರ್ ಗಾರು ನೇತೃತ್ವದಲ್ಲಿ ನಾವು ನಿಮ್ಮ ವೈಫಲ್ಯಗಳನ್ನು ಬಹಿರಂಗಪಡಿಸಲು ಮತ್ತು ಭಾರತದ ಉಜ್ವಲ ಹಾಗೂ ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತಲು ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ಕವಿತಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಬ್ಬಾಳಿಕೆಯ ಜನವಿರೋಧಿ ಆಡಳಿತದ ಮುಂದೆ ತೆಲಂಗಾಣ ಎಂದಿಗೂ ತಲೆಬಾಗುವುದಿಲ್ಲ ಮತ್ತು ಜನರ ಹಕ್ಕುಗಳಿಗಾಗಿ ನಾವು ನಿರ್ಭಯವಾಗಿ ಮತ್ತು ಉಗ್ರವಾಗಿ ಹೋರಾಡುತ್ತೇವೆ ಎಂದು ನಾನು ದೆಹಲಿಯಲ್ಲಿ ಅಧಿಕಾರಕ್ಕಾಗಿ ಹಪಾಹಪಿಸುವವರಿಗೆ ನೆನಪಿಸುತ್ತೇನೆ ಎಂದೂ ಹೇಳಿದರು.

ನವೆಂಬರ್ 2021 ರಲ್ಲಿ ಪ್ರಾರಂಭವಾದ ದೆಹಲಿ ಮದ್ಯ ನೀತಿಯನ್ನು ಕಳೆದ ವರ್ಷ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾದ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಹಿಂತೆಗೆದುಕೊಂಡಿತು. "ಸೌತ್ ಕಾರ್ಟೆಲ್" ಲಾಬಿಯಿಂದ ಕಿಕ್‌ಬ್ಯಾಕ್‌ನೊಂದಿಗೆ ಮದ್ಯದ ನೀತಿಯನ್ನು ಮಾರ್ಪಡಿಸುವಾಗ ಹಲವಾರು ಅಕ್ರಮಗಳನ್ನು ಎಸಗಲಾಗಿದೆ ಎಂದು ಇಡಿ ಮತ್ತು ಸಿಬಿಐ ಎರಡೂ ಆರೋಪಿಸಿವೆ. ಈ ಸೌತ್‌ ಕಾರ್ಟೆಲ್‌ ಗುಂಪಿನಲ್ಲಿ ಕೆ. ಕವಿತಾ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್‌ನ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಇದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ದೆಹಲಿ ಮದ್ಯನೀತಿ ಹಗರಣ: ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಭಾರಿ ಪ್ರತಿಭಟನೆ

ಇನ್ನೊಂದೆಡೆ, ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ನ್ಯಾಯಾಲಯವು ಮಾರ್ಚ್ 20 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಕವಿತಾ ಆಪ್ತ, ಲಾಬಿಗಾರ ಪಿಳ್ಳೈ:
ಬಂಧಿತ ಅರುಣ್‌ ಪಿಳ್ಳೈ, ಹೈದರಾಬಾದ್‌ ಮೂಲದ ಮದ್ಯ ಉದ್ಯಮಿಯಾಗಿದ್ದು, ದಿಲ್ಲಿಯಲ್ಲಿ ಅಬಕಾರಿ ಲೈಸೆನ್ಸ್‌ ಗಿಟ್ಟಿಸಲು ಭಾರಿ ಲಾಬಿ ಮಾಡಿದ್ದ ‘ದಕ್ಷಿಣದ ಮದ್ಯ ಉದ್ಯಮಿ’ಗಳ ಪ್ರಮುಖ ಲಾಬಿಗಾರ ಎನ್ನಲಾಗಿದೆ. ಕೆಸಿಆರ್‌ ಅವರ ಪುತ್ರಿ ಕವಿತಾ ಅವರಿಗೂ ಈ ಲಾಬಿ ಗುಂಪಿಗೂ ನಂಟಿದೆ. ಮದ್ಯ ಕಂಪನಿಯೊಂದರಲ್ಲಿ ಶೇ.65ರಷ್ಟು ಪಾಲು ಕವಿತಾರದ್ದು ಎಂದು ತಿಳಿದುಬಂದಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಕವಿತಾ ವಿಚಾರಣೆ ನಡೆದಿತ್ತು.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

Latest Videos
Follow Us:
Download App:
  • android
  • ios