ದೆಹಲಿ ಮದ್ಯನೀತಿ ಹಗರಣ: ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಭಾರಿ ಪ್ರತಿಭಟನೆ

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ 5 ವ್ಯಕ್ತಿಗಳು ಮತ್ತು 7 ಕಂಪನಿಗಳ ವಿರುದ್ಧದ ಪೂರಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯ ಗುರುವಾರ ಸ್ವೀಕರಿಸಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಎಎಪಿ ಸರ್ಕಾರವು ಕಳೆದ ವರ್ಷ ಈ ನೀತಿಯನ್ನು ಹಿಂತೆಗೆದುಕೊಂಡಿತ್ತು.

huge bjp protest against arvind kejriwal over delhi liquor policy case ash

ನವದೆಹಲಿ (ಫೆಬ್ರವರಿ 4, 2023): ದೆಹಲಿಯ ಈ ಹಿಂದಿನ ಮದ್ಯ ಮಾರಾಟ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಶನಿವಾರ ದಿಲ್ಲಿಯ ಆಮ್ ಆದ್ಮಿ ಪಕ್ಷದ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಗುಂಪನ್ನು ನಿಯಂತ್ರಿಸಲು ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಲು ಸಹ ಯತ್ನಿಸಿದ್ದಾರೆ. ಇನ್ನು ಕೆಲವರು ಘೋಷಣಾ ಫಲಕಗಳನ್ನು ಹಿಡಿದು ನಿಂತು ದೆಹಲಿ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಸಲ್ಲಿಸಿದ ಎರಡನೇ ಚಾರ್ಜ್‌ಶೀಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೆಸರಿದ್ದು, ಈ ಹಿನ್ನೆಲೆ ಬಿಜೆಪಿ, ದೆಹಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದೆ ಮತ್ತು ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. 

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ 5 ವ್ಯಕ್ತಿಗಳು ಮತ್ತು 7 ಕಂಪನಿಗಳ ವಿರುದ್ಧದ ಪೂರಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯ ಗುರುವಾರ ಸ್ವೀಕರಿಸಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಎಎಪಿ ಸರ್ಕಾರವು ಕಳೆದ ವರ್ಷ ಈ ನೀತಿಯನ್ನು ಹಿಂತೆಗೆದುಕೊಂಡಿತ್ತು.

ಇದನ್ನು ಓದಿ: ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

ಹಣಕಾಸು ಅಪರಾಧಗಳ ತನಿಖೆ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವರದಿ ಮಾಡುವ ಜಾರಿ ನಿರ್ದೇಶನಾಲಯ, ಅಬಕಾರಿ ನೀತಿಯಿಂದ ಗಳಿಸಿದ ₹ 100 ಕೋಟಿ "ಕಿಕ್‌ಬ್ಯಾಕ್" ನ ಒಂದು ಭಾಗವನ್ನು ಕಳೆದ ವರ್ಷದ ಗೋವಾ ವಿಧಾನಸಭಾ ಚುನಾವಣೆಯ ಎಎಪಿ ಪ್ರಚಾರದಲ್ಲಿ ಬಳಸಲಾಗಿದೆ ಎಂದು ಹೇಳಿಕೊಂಡಿದೆ. 

ಆದ್ರೆ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಅವರು ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ ಮತ್ತು ಪ್ರಕರಣವು ನಕಲಿಯಾಗಿದೆ ಮತ್ತು ಬಿಜೆಪಿ ಇತರೆ ಸರ್ಕಾರಗಳನ್ನು ಪತನ ಮಾಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮದ ಆರೋಪಿ ಆಮ್ ಆದ್ಮಿ ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರು ಅರವಿಂದ್‌ ಕೇಜ್ರಿವಾಲ್ ಮತ್ತು ಬಂಧಿತ ಮದ್ಯದ ಸಂಸ್ಥೆಯ ಮುಖ್ಯಸ್ಥರ ನಡುವೆ ಅವರ ಫೋನ್‌ನಿಂದ ಫೇಸ್‌ಟೈಮ್ ವೀಡಿಯೊ ಕಾಲ್‌ ಅನ್ನು ಏರ್ಪಡಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಸಂಸ್ಥೆ ಹೇಳಿಕೊಂಡಿದೆ. ಹಾಗೂ, ಎಎಪಿ ನಾಯಕರ ಪರವಾಗಿ ವಿಜಯ್ ನಾಯರ್ ಅವರು ದೆಹಲಿ ಮದ್ಯ ನೀತಿಯಲ್ಲಿ ಪರವಾನಗಿಗಾಗಿ ₹ 100 ಕೋಟಿ ಮುಂಗಡವಾಗಿ ಪಡೆದಿದ್ದಾರೆ ಎಂದೂ ಸಂಸ್ಥೆ ಆರೋಪಿಸಿದೆ.

ವಿಜಯ್ "ನನ್ನ ಹುಡುಗ" ಮತ್ತು ಅವನನ್ನು ನಂಬಿ ಹಾಗೂ ಅವನೊಂದಿಗೆ ಮುಂದುವರಿಯಿರಿ ಎಂದು ಹೇಳಿದ್ದರು ಎಂದೂ ಇಡಿ ಆರೋಪಪಟ್ಟಿಯಲ್ಲಿ ಹೇಳಿದೆ. ಅರವಿಂದ್ ಕೇಜ್ರಿವಾಲ್ ಅವರು ಇಂಡೋಸ್ಪಿರಿಟ್ಸ್ ಮುಖ್ಯಸ್ಥ ಸಮೀರ್ ಮಹೇಂದ್ರು ಅವರಿಗೆ ಅವರನ್ನು ನಂಬಿ ಮತ್ತು ಅವರೊಂದಿಗೆ ಮುಂದುವರಿಯಿರಿ ಎಂದು ಹೇಳಿದ್ದರು ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿಕೊಂಡಿದೆ. ಜಾರಿ ನಿರ್ದೇಶನಾಲಯದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಸಮೀರ್ ಮಹೇಂದ್ರು ಅವರು ತಮ್ಮ ಹೇಳಿಕೆಯನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಎಎಪಿ ಮೂಲಗಳು ಹೇಳಿವೆ. 

ಇದನ್ನೂ ಓದಿ: ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ

ಈ ಮಧ್ಯೆ, "ಸೌತ್ ಗ್ರೂಪ್" ಎಂಬ ಕಂಪನಿಯಿಂದ ಸಹಕಾರ ಮತ್ತು ಕಿಕ್‌ಬ್ಯಾಕ್‌ ಪಡೆದು ದೆಹಲಿಯ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಎಂದೂ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಹೇಳಿಕೊಂಡಿವೆ. ಈ ಸಂಸ್ಥೆಯಲ್ಲಿ ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ ಕವಿತಾ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್‌ನ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಇದ್ದಾರೆ ಎಂದೂ ಸಂಸ್ಥೆ ಆರೋಪಿಸಿದೆ. 

ಇದರ ಅಡಿಯಲ್ಲಿ, ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಮತ್ತು ಮದ್ಯದ ಪರವಾನಗಿ ಹೊಂದಿರುವವರಿಗೆ ಅನಗತ್ಯ ಅನುಕೂಲಗಳನ್ನು ಮಾಡಿಕೊಡಲಾಗಿದೆ ಎಂದೂ ಏಜೆನ್ಸಿಗಳು ಹೇಳಿಕೊಂಡಿವೆ. 

ಇದನ್ನೂ ಓದಿ: Delhi Liquor Policy Case: 'ಸ್ಟಿಂಗ್ ಆಪರೇಷನ್' ವಿಡಿಯೋ ಹಂಚಿಕೊಂಡ ಬಿಜೆಪಿ

Latest Videos
Follow Us:
Download App:
  • android
  • ios