ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ಮಂಗಳವಾರ ವಿಚಾರಣೆಗೆ ತೆ ಕವಿತಾ ಹಾಜರಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚನೆ ನೀಡಿತ್ತು
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi Liquor Policy Scam) ಸಂಬಂಧಿಸಿದಂತೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) (Telangana Rashtra Samithi) ನಾಯಕಿ ಕಲ್ವಕುಂಟ್ಲಾ ಕವಿತಾ (Kalvakuntla Kavitha) ಅವರ ತೆಲಂಗಾಣ ರಾಜಧಾನಿ ಹೈದರಾಬಾದ್ (Hyderabad) ನಿವಾಸಕ್ಕೆ ಕೇಂದ್ರೀಯ ತನಿಖಾ ದಳದ (Central Bureau of Investigation) (ಸಿಬಿಐ) ಅಧಿಕಾರಿಗಳು ಭಾನುವಾರ ಆಗಮಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ (K Chandrasekhar Rao) ಅವರ ಪುತ್ರಿ ಕವಿತಾ ಅವರ ಹೈದರಾಬಾದ್ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಲ್ಲಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಆವರಣದ ಬಳಿ ಯಾರಿಗೂ ಸಂಚರಿಸಲು ಅವಕಾಶವಿಲ್ಲ. ಇನ್ನು, ಟಿಆರ್‌ಎಸ್ ತನ್ನ ನಾಯಕರು ಮತ್ತು ಪಕ್ಷದ ಸದಸ್ಯರಿಗೆ ವಿಚಾರಣೆ ವೇಳೆ ನಿವಾಸದ ಸುತ್ತ ಜಮಾಯಿಸದಂತೆ ಸೂಚನೆ ನೀಡಿದೆ ಎಂದೂ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ಮಂಗಳವಾರ ವಿಚಾರಣೆಗೆ ತೆ ಕವಿತಾ ಹಾಜರಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚನೆ ನೀಡಿತ್ತು. ಅಲ್ಲದೆ, ಹೈದಾರಾಬಾದ್‌ನಲ್ಲಿರುವ ಕವಿತಾ ಅವರ ಮನೆಯಲ್ಲೇ ವಿಚಾರಣೆ ನಡೆಸಲು ಸಿಬಿಐ ಒಪ್ಪಿಗೆ ನೀಡಿದೆ. ಇದಕ್ಕೂ ಮೊದಲು ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಸಿಎಂಬರ್ 2 ರಂದು ಕವಿತಾಗೆ ನೋಟಿಸ್ ನೀಡಲಾಗಿತ್ತು. ನಾನು ಕಾನೂನಿಗೆ ಬದ್ಧಳಾಗಿರುವ ನಾಗರಿಕಳಾಗಿದ್ದು, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕವಿತಾ ಹೇಳಿದ್ದರು.
ಇದನ್ನು ಓದಿ: Delhi Liquor Policy Case: ED ರಿಮಾಂಡ್ ನೋಟ್‌ನಲ್ಲಿ ಕೆಸಿಆರ್ ಪುತ್ರಿ ಕವಿತಾ ಹೆಸರು!
ಬಳಿಕ, ಡಿಸೆಂಬರ್ 6 ರಂದು ವಿಚಾರಣೆಗಾಗಿ ತನ್ನ ಅನುಕೂಲಕ್ಕೆ ಅನುಗುಣವಾಗಿ ಒಂದು ಸ್ಥಳದಲ್ಲಿ ಭೇಟಿಯಾಗುವಂತೆ ಕೇಂದ್ರೀಯ ಸಂಸ್ಥೆ ಹೇಳಿದ್ದರೂ, ಕವಿತಾ ತನ್ನ ಪೂರ್ವನಿಯೋಜಿತ ವೇಳಾಪಟ್ಟಿಯಿಂದಾಗಿ ಡಿಸೆಂಬರ್ 11 ರ ಮೊದಲು ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೂರಿನ ಜೊತೆಗೆ ಎಫ್‌ಐಆರ್ ಪ್ರತಿಯಲ್ಲಿನ ವಿಷಯಗಳನ್ನು ಪರಿಶೀಲಿಸಿದ್ದೇನೆ ಮತ್ತು ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದು ಕವಿತಾ ತನಿಖಾ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನೀವು ಪ್ರಸ್ತಾಪಿಸಿದಂತೆ, ನನ್ನ ಪೂರ್ವನಿಯೋಜಿತ ವೇಳಾಪಟ್ಟಿಯ ಕಾರಣ 6ನೇ ಡಿಸೆಂಬರ್, 2022 ರಂದು ನಾನು ಭೇಟಿಯಾಗುವ ಸ್ಥಿತಿಯಲ್ಲಿಲ್ಲ. ಈ ತಿಂಗಳ 11, 12 ಅಥವಾ 14 ಅಥವಾ 15 ರಂದು ನಿಮಗೆ ಅನುಕೂಲವಾದಾಗ ಹೈದರಾಬಾದ್‌ನಲ್ಲಿರುವ ನನ್ನ ನಿವಾಸದಲ್ಲಿ ನಾನು ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ದಯವಿಟ್ಟು ಆದಷ್ಟು ಬೇಗ ದೃಢೀಕರಿಸಬಹುದು ಎಂದು ರಾಘವೇಂದ್ರ ವತ್ಸ, ಶಾಖೆಯ ಮುಖ್ಯಸ್ಥ/ ಡಿಐಜಿ, ಸಿಬಿಐ, ಎಸಿಬಿ ದೆಹಲಿಗೆ ಟಿಆರ್‌ಎಸ್ ಎಂಎಲ್‌ಸಿ ಪತ್ರ ಬರೆದಿದ್ದರು.
ಇದನ್ನೂ ಓದಿ: ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ
ಹಾಗೂ, “ನಾನು ಕಾನೂನು ಪಾಲಿಸುವ ನಾಗರಿಕ ಮತ್ತು ತನಿಖೆಗೆ ಸಹಕರಿಸುತ್ತೇನೆ. ತನಿಖೆಗೆ ಸಹಕರಿಸಲು ಮೇಲಿನ ಯಾವುದೇ ದಿನಾಂಕದಂದು ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ. ಇದು ಕಾನೂನಿನ ಅಡಿಯಲ್ಲಿ ಲಭ್ಯವಿರುವ ನನ್ನ ಕಾನೂನು ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ, ”ಎಂದು ಅವರು ಹೇಳಿದರು.
ಆಪ್ ನಾಯಕರ ಪರವಾಗಿ ಆಪ್ ವಕ್ತಾರ ವಿಜಯ್ ನಾಯರ್ ಅವರು ಕವಿತಾ ಹಾಗೂ ಮಾಗುಂತಾ ಶ್ರೀನಿವಾಸ್ ರೆಡ್ಡಿಗೆ ಸಂಬಂಧಿಸಿದ ಸೌತ್ ಗ್ರೂಪ್‌ನಿಂದ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕವಿತಾ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!