Asianet Suvarna News Asianet Suvarna News

ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ಪುರಿ ರಥ ಯಾತ್ರೆಗೆ ಭಕ್ತರಿಗಿಲ್ಲ ಪ್ರವೇಶ; ಜೂ.23ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಲಾಕ್‌ಡೌನ್ ಮಾಡಿ ಕೊರೋನಾ ನಿಯಂತ್ರಣಕ್ಕ ಒತ್ತಡಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಸರ್ಕಾರ ಕೂಡ ಲಾಕ್‌ಡೌನ್ ಸುಳಿವು ನೀಡಿದೆ. ದೇಶದಲ್ಲಿ ಗಡಿ ಬಿಕ್ಕಟ್ಟು ಕಾವು ಇನ್ನೂ ಆರಿಲ್ಲ, ಇದೀಗ ಚೀನಾ ಜೊತೆಗೆ ಕಾಂಗ್ರೆಸ್ ಮಾಡಿದ ಒಪ್ಪಂದವೇ ಇದಕ್ಕೆಲ್ಲಾ ಕಾರಣ ಎಂದು ಜೆಪಿ ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಇದೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥನ ರಥ ಯಾತ್ರೆ ನಡೆಯುತ್ತಿದೆ.  ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌, ಪತ್ನಿಗೆ ನಿಖಿಲ್ ಕುಮಾರಸ್ವಾಮಿ ಅಚ್ಚರಿ ಗಿಫ್ಟ್ ಸೇರಿದಂತೆ ಜೂನ್ 23ರ ಟಾಪ್ 10 ಸುದ್ದಿ ಇಲ್ಲಿವೆ.

Karnataka coronavirus to puri jagannath rath yatra top 10 news of june 23
Author
Bengaluru, First Published Jun 23, 2020, 5:01 PM IST

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೋವಿಡ್‌19: ಗುರುವಾರ ಲಾಕ್‌ಡೌನ್ ಭವಿಷ್ಯ ನಿರ್ಧಾರ?

Karnataka coronavirus to puri jagannath rath yatra top 10 news of june 23

ಸಮುದಾಯಕ್ಕೂ ಹಬ್ಬುವ ಹಂತಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಶತಕ ಮೀರಿ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ರಾಜ್ಯದಲ್ಲೇ ಮತ್ತೊಮ್ಮೆ ಲಾಕ್‌ಡೌನ್ ಮಾಡಲಾಗುತ್ತಾ ಅಥವಾ ಬೆಂಗಳೂರನ್ನ ಮಾತ್ರ ಲಾಕ್‌ಡೌನ್ ಮಾಡಲಾಗುತ್ತಾ? ಎಂಬುದು ಗುರುವಾರ ನಿರ್ಧಾರವಾಗಲಿದೆ. ಲಾಕ್‌ಡೌನ್ ಬಗ್ಗೆ ಕ್ಯಾಬಿನೆಟ್‌ ಸಭೆಯಲ್ಲಿ ಮತ್ತೊಮ್ಮೆ ಪರಾಮರ್ಶಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್

Karnataka coronavirus to puri jagannath rath yatra top 10 news of june 23

ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ. ಇಂದು ರಥ ಯಾತ್ರೆ ನಡೆಯುತ್ತಿದ್ದು, ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ರಥ ಯಾತ್ರೆ ನಡೆದಿದೆ. 

ಚೀನಾ ಜೊತೆ ಕಾಂಗ್ರೆಸ್ ಮಾಡಿದ ಒಪ್ಪಂದಿಂದಾಗಿ ಯುದ್ಧ: ರಾಹುಲ್ ವಿರುದ್ಧ ನಡ್ಡಾ ವಾಗ್ದಾಳಿ

Karnataka coronavirus to puri jagannath rath yatra top 10 news of june 23

ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶವನ್ನು ವಿಭಜಿಸುವ, ಸೈನಿಕರನ್ನು ಹತಾಶೆಗೊಳಿಸುವಂತಹ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಒಳಗಾದ ಕರ್ನಾಟಕ ಕ್ರಿಕೆಟರ್ಸ್

Karnataka coronavirus to puri jagannath rath yatra top 10 news of june 23

ಕ್ರೀಡಾಚಟುವಟಿಕೆಗಳು ಆರಂಭಕ್ಕೆ ಮುನ್ಸೂಚನೆ ಸಿಕ್ಕಿರುವುದರಿಂದ ಒಂದು ಡಜನ್‌ಗೂ ಹೆಚ್ಚು ಕರ್ನಾಟಕದ ಕ್ರಿಕೆಟಿಗರು ಚಿನ್ನಸ್ವಾಮಿ ಮೈದಾನ ಪ್ರವೇಶಿಸಿದ್ದಾರೆ. ಇದರ ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೂ ಒಳಪಟ್ಟರು.

'ಆ' ಪಾತ್ರಗಳೇ ಬೇಕು; ದಪ್ಪಗಾದರೇನು ನಾನು ಮಾಡಲು ರೆಡಿ ಎಂದ ನಟಿ!

Karnataka coronavirus to puri jagannath rath yatra top 10 news of june 23

ತಮಿಳು ಹಾಗೂ ತೆಲುಗು ಚಿತ್ರರಂಗದ ಹಾಟ್ ನಟಿ ಇಲಿಯಾನಾ ಇದಕ್ಕಿದಂತೆ ಮೇಲಿಂದ ಮೇಲೆ ಚಿತ್ರಕಥೆಗಳನ್ನು ರಿಜೆಕ್ಟ್‌ ಮಾಡುತ್ತಿರುವುದು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.  ಚಿತ್ರರಂಗದಲ್ಲಿ ಅವಕಾಶ ಇಲ್ಲ ಎಂದು ಅಲ್ಲೊಮ್ಮೆ ಇಲ್ಲೊಮ್ಮೆ ಸಂದರ್ಶನದಲ್ಲಿ ಆರೋಪ ಮಾಡುವ ನಟಿ ಈಗ ರಿಜೆಕ್ಟ್‌ ಮಾಡಲು ಕಾರಣವೇನು?

ನಿಖಿಲ್ ಕುಮಾರಸ್ವಾಮಿ ಪತ್ನಿಗೆ ಕೊಟ್ರು ಸರ್ಪ್ರೈಸ್‌ ಬರ್ತಡೇ ಗಿಫ್ಟ್‌! ಏನದು?

Karnataka coronavirus to puri jagannath rath yatra top 10 news of june 23

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಈಗ ಸೋಷಿಯಲ್ ಮೀಡಿಯಾದ ಸ್ಟಾರ್ ಕಪಲ್ ಆಗಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಸೆರೆ ಹಿಡಿದ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಶೇರ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್‌ ಹರಿದು ಬರುತ್ತವೆ. ಇನ್ನು ಜೂನ್‌ 21ರಂದು ರೇವತಿ ಹುಟ್ಟು ಹಬ್ಬಕ್ಕೆ ನಿಖಿಲ್ ಕೊಟ್ಟ  ಸರ್ಪ್ರೈಸ್‌ ಗಿಫ್ಟ್ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.

29 ದಿನಗಳ ನಂತರ ಕೊಡಗಿನಲ್ಲಿ ಕೊರೋನಾ ಸಕ್ರಿಯ..! ಮತ್ತೆ ಹೆಚ್ಚಿದ ಆತಂಕ

Karnataka coronavirus to puri jagannath rath yatra top 10 news of june 23

ಕೊಡಗು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂರು ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊಡ​ಗಿ​ನಲ್ಲಿ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಕೊರೋನಾ ಪ್ರಕ​ರ​ಣ​ಗ​ಳು ಸಕ್ರಿ​ಯ​ಗೊಂಡಿ​ದೆ.

‘ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌ ಈಗ ಸೂಪರ್‌ಹಿಟ್‌!

Karnataka coronavirus to puri jagannath rath yatra top 10 news of june 23

ಪೂರ್ವ ಲಡಾಖ್‌ ಗಡಿ ಸಂಘರ್ಷದಲ್ಲಿ ಚೀನಾ 20 ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಭಾರತದಲ್ಲಿ ಜೋರಾಗಿದೆ. ಇದರ ಬೆನ್ನಲ್ಲೇ ಚೀನಾ ಮೂಲದ ಟಿಕ್‌ಟಾಕ್‌ ವಿಡಿಯೋ ಆ್ಯಪ್‌ಗೆ ಪರ್ಯಾಯ ಎಂದೇ ಪರಿಗಣಿಸಲ್ಪಟ್ಟಿರುವ ಬೆಂಗಳೂರು ಮೂಲದ ‘ಚಿಂಗಾರಿ’ ಆ್ಯಪ್‌ ಅನ್ನು 72 ಗಂಟೆಗಳಲ್ಲಿ 5 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಫಸ್ಟ್‌ನೈಟ್ ಮರುದಿನವೇ ವಿಧವೆಯಾದ ಮದುಮಗಳು, ಮದುವೆಗೆ ಬಂದವರಿಗೆ ಕೊರೋನಾ ಪಾಸಿಟಿವ್!

Karnataka coronavirus to puri jagannath rath yatra top 10 news of june 23

ದೆಹಲಿಯಿಂದ ತನ್ನ ಮನೆಗೆ ಮರಳಿದ್ದ ಯುವಕನೊಬ್ಬ ಅಂದುಕೊಂಡಂತೆ ಗ್ರ್ಯಾಂಡ್‌ ಆಗಿಯೇ ಮದುವೆಯಾಗಿದ್ದು, ಈ ದಂಪತಿಯ ಫಸ್ಟ್ ನೈಟ್ ಕೂಡಾ ನಡೆದಿದೆ. ಆದರೆ ಇದಾದ ಮರುದಿನವೇ ಮದುಮಗಳು ವಿಧವೆಯಾಗದ್ದಾಳೆ. ಇದರಿಂದ ಸಂಭ್ರಮದಲ್ಲಿದ್ದ ಮನೆಯಲ್ಲಿ ಕ್ಷಣಮಾತ್ರದಲ್ಲಿ ಶೋಕ ಆವರಿಸಿಕೊಂಡಿದೆ. 

KSRTC ಕಂಡಕ್ಟರ್‌, ಡ್ರೈವರ್‌ ಭದ್ರತಾ ಕಾರ್ಯಕ್ಕೆ!

Karnataka coronavirus to puri jagannath rath yatra top 10 news of june 23

ಕೊರೋನಾದಿಂದ ಆರ್ಥಿಕ ನಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ನಿಗಮ ಹಣ ಉಳಿಸಲು ನಿಗಮದ ಭದ್ರತಾ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆಯನ್ನು ರದ್ದುಗೊಳಿಸಲು ತೀರ್ಮಾನಿಸಿದೆ. ಈ ಹುದ್ದೆಗಳಿಗೆ ತಾತ್ಕಾಲಿಕವಾಗಿ ನಿಗಮದ ಚಾಲನಾ ಸಿಬ್ಬಂದಿಯನ್ನೇ (ಚಾಲಕ ಮತ್ತು ನಿರ್ವಾಹಕ) ಬಳಸಿಕೊಳ್ಳಲು ಮುಂದಾಗಿದೆ.
 
Follow Us:
Download App:
  • android
  • ios