ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್
ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ. ಇಂದು ರಥ ಯಾತ್ರೆ ನಡೆಯುತ್ತಿದ್ದು, ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ರಥ ಯಾತ್ರೆ ನಡೆದಿದೆ. ಇಲ್ಲಿವೆ ಫೋಟೋಸ್

ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೇ ಪುರಿಯ ಜಗನ್ನಾಥ ದೇವಾಲಯದ ರಥ ಯಾತ್ರೆ ನಡೆದಿದೆ.

ಪುರೋಹಿತರೂ, ದೇವಲಾಯದ ಪರಿಚಾರಕರೂ ಮಾತ್ರ ಸಂಪೂರ್ಣ ಭದ್ರತೆಯಲ್ಲಿ ರಥ ಯಾತ್ರೆ ನಡೆಸಿದ್ದಾರೆ.

ರಥ ಯಾತ್ರೆಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದ ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಷರತ್ತು ಬದ್ಧ ಆಚರಣೆಗೆ ಅನುಮತಿ ನೀಡಿತ್ತು.

ಸಂಪೂರ್ಣ ಭದ್ರತೆಯೊಂದಿಗೆ, ಅಗತ್ಯ ಪುರೋಹಿತರ ಸಮ್ಮುಖದಲ್ಲಿ 7 ದಿನದ ರಥ ಯಾಥ್ರೆ ನಡೆಸಲು ಸಪ್ರೀಂ ಅನುಮತಿ ನೀಡಿತ್ತು.

ಪ್ರತಿ ವರ್ಷ ಭಕ್ತ ಜನ ಸಾಗರದಿಂದ ತುಂಬಿ ಹೋಗುತ್ತಿದ್ದ ರಥ ಯಾತ್ರೆ ಆಚರಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

ದೇವಾಲಯದ ರಥ ಯಾತ್ರೆ ಆಚರಣೆ ಆರಂಭವಾಗುವ ಮುನ್ನ ಸಂಪೂರ್ಣ ದೇವಾಲಯ ಸ್ಯಾನಿಟೈಸ್ ಮಾಡಲಾಗಿತ್ತು.

ಪುರೋಹಿತರು ಬಾಲಭದ್ರ ದೇವರ ಮೂರ್ತಿಯನ್ನು ರಥದಲ್ಲಿಟ್ಟಿದ್ದಾರೆ. ರಥ ಯಾತ್ರೆ ಆಚರಣೆ ನಡೆಸುವ ಪುರೋಹಿತರು ಮಾತ್ರ ಇದ್ದು, ಹಲವು ಸಂಗೀತೋಪಕರಣಗಳನ್ನು ನುಡಿಸಿ, ಸಂಪ್ರದಾಯದಂತೆ ರಥದೊಮದಿಗೆ ಹೆಜ್ಜೆ ಹಾಕಿದ್ದಾರೆ.

ಪುರಿಯ ಮಹಾರಾಜ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಚಿನ್ನದ ಹಿಡಿಯುಳ್ಳ ಪೊರಕೆಯಿಂದ ರಥ ಶುಚಿಗೊಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಜಗನ್ನಾಥ ರಥ ಯಾತ್ರೆಯ ದಿನ ಭಕ್ತರಿಗೆ ಶುಭಾಶಯಗಳು. ಈ ಆಚರಣೆ ಜನರಿಗೆ ಖುಷಿ, ಆರೋಗ್ಯ, ಸೌಭಾಗ್ಯ ತಂದು ಕೊಡಲಿ. ಜೈ ಜಗನ್ನಾಥ್ ಎಂದು ಶುಭಾಶಯ ತಿಳಿಸಿದ್ದಾರೆ.

ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.

ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.

ಗಿಜಿಗಿಡುತ್ತಿದ್ದ ರಥ ಯಾಥ್ರೆಯಲ್ಲಿ ಇಂದು ಭದ್ರತಾ ಸಿಬ್ಬಂದಿ, ಪುರೋಹಿತರಷ್ಟೇ ಇದ್ದರು

ಭಕ್ತಾದಿಗಳು ದೂರದರ್ಶನದ ಮೂಲಕವೇ ರಥ ಯಾಥ್ರೆ ಕಣ್ತುಂಬಿಕೊಂಡರು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ