ತಮಿಳು ಹಾಗೂ ತೆಲುಗು ಚಿತ್ರರಂಗದ ಹಾಟ್ ನಟಿ ಇಲಿಯಾನಾ ಇದಕ್ಕಿದಂತೆ ಮೇಲಿಂದ ಮೇಲೆ ಚಿತ್ರಕಥೆಗಳನ್ನು ರಿಜೆಕ್ಟ್‌ ಮಾಡುತ್ತಿರುವುದು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.  ಚಿತ್ರರಂಗದಲ್ಲಿ ಅವಕಾಶ ಇಲ್ಲ ಎಂದು ಅಲ್ಲೊಮ್ಮೆ ಇಲ್ಲೊಮ್ಮೆ ಸಂದರ್ಶನದಲ್ಲಿ ಆರೋಪ ಮಾಡುವ ನಟಿ ಈಗ ರಿಜೆಕ್ಟ್‌ ಮಾಡಲು ಕಾರಣವೇನು?

ಬಿಕಿನಿ ತೊಟ್ಟ ದಕ್ಷಿಣ ಭಾರತದ ಸ್ಟಾರ್ ನಟಿ; 5 ಗಂಟೆಗೆ 5 ಲಕ್ಷ ವೀವ್ಸ್!

ಟಾಲಿವುಡ್ ಹಾಗೂ ಕಾಲಿವುಡ್ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿರುವ ನಟಿ ಇಲಿಯಾನಾ ಪ್ರಾರಂಭದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಕಂಡಂತ ನಟಿ. ಆದರೀಗ ಯಾರಿಗೂ ಹೇಳದಂತೆ ಚಿತ್ರರಂಗದಿಂದ ಸೈಲೆಂಟ್ ಆಗಿ ದೂರ ಉಳಿದಿದ್ದಾರಂತೆ. ಬಾಲಿವುಡ್‌ನಲ್ಲಿ ನಟ ರಣಬೀರ್‌ ಕಪೂರ್‌ಗೆ ಜೊಡಿಯಾಗಿ 'ಬರ್ಫಿ' ಚಿತ್ರದ ಮೂಲಕ ಬಿ-ಟೌನ್‌ಗೆ ಪಾದಾರ್ಪಣೆ ಮಾಡಿದ್ದರೂ ಅಷ್ಟೇನು ಯಶಸ್ಸು ಸಿಗಲಿಲ್ಲ. ಹಲವು ವರ್ಷಗಳ  ನಂತರ ಅಭಿಷೇಕ್ ಬಚ್ಚನ್‌ ಜೊತೆ 'ದ ಬಿಗ್ ಬುಲ್' ಸಿನಿಮಾ ಮಾಡುತ್ತಿದ್ದಾರೆ.

ಇನ್ನು ಬಾಲಿವುಡ್‌ನ 'ಅಂಧಾಧುನ್' ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಲು ತಂಡವೊಂದು ಮುಂದಾಗಿದೆ. ಚಿತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಇಲಿಯಾನಾ ಕಾಣಿಸಿಕೊಳ್ಳಬೇಕೆಂದು ನಿರ್ದೇಶಕರು ಕಥೆ ಹೇಳಲು ಹೋದರೆ  ನೆಗೆಟಿವ್ ಎಂದು ತಿಳಿದಾಕ್ಷಣ ರಿಜೆಕ್ಟ್‌ ಮಾಡಿದ್ದಾರೆ ಎನ್ನಲಾಗಿದೆ.

ಅಯ್ಯಯ್ಯೋ.. ಇಲಿಯಾನಗೆ ಇದ್ಯಂತೆ ಗಂಭೀರ ಕಾಯಿಲೆ!

ರಿಜೆಕ್ಟ್‌ ಮಾಡಲು ಕಾರಣವೇನು?

ಸ್ಲಿಂ ಫಿಗರ್ ಆಗಿದ್ದ ಇಲಿಯಾನಾ ಇದ್ದಕ್ಕಿದಂತೆ ದಪ್ಪ ಆಗಿರುವುದಕ್ಕೆ ಸಿನಿಮಾ ಆಫರ್‌ಗಳನ್ನು ರಿಜೆಕ್ಟ್‌ ಮಾಡುತ್ತಿದ್ದಾರೆ ಎಂದು ಚಿತ್ರರಂಗದಲ್ಲಿ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು! ಇಲಿಯಾನಾ ಸ್ವಲ್ಪ ದಪ್ಪ ಆಗಿದ್ದಾರೆ ಆದರೆ ದಪ್ಪಗಾಗಿರುವ ಕಾರಣಕ್ಕೆ ಸಿನಿಮಾ ಆಫರ್‌ ರಿಜೆಕ್ಟ್‌ ಮಾಡುತ್ತಿಲ್ಲ.'ನಾನು ಫಿಟ್ನೆಸ್ ಕಡೆ ಗಮನ ಕೊಡಬೇಕಿದೆ. ಹೆಚ್ಚಾಗಿ ನಾಯಕಿಯ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.ದಪ್ಪ ಇರುವೆ ಅಥವಾ ಸುಮ್ಮನೆ ಇರುವೆ ಎಂದು ನೆಗೆಟಿವ್ ಕತೆ ಒಪ್ಪಿಕೊಳ್ಳುವುದಿಲ್ಲ. ನಾನು ಶೀಘ್ರದಲ್ಲಿ ಕಮ್‌ಬ್ಯಾಕ್ ಮಾಡುವೆ' ಎಂದು ಹೇಳಿದ್ದಾರೆ.

ವರ್ಷಗಳ ನಂತರ ನಾಗಾರ್ಜುನ ಜೊತೆ:

ನಟ ನಾಗಾರ್ಜುನ ಗೆ ಜೋಡಿಯಾಗಿ ಕಾಣಿಸಿಕೊಳ್ಳಬೇಕೆಂಬುದು ಇಲಿಯಾನಾ ಬಹಳ ವರ್ಷದ ಕನಸು. 2013ರಲ್ಲೇ ಅಭಿನಯಿಸಬೇಕಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಆ ಅವಕಾಶವನ್ನು ಪಡೆದುಕೊಂಡಿದ್ದಾರೆ. ನಾಗಾರ್ಜುನ ಅಭಿನಯಿಸುತ್ತಿರುವ ಥ್ರಿಲ್ಲರ್‌ ಸಿನಿಮಾದಲ್ಲಿ ಇಲಿಯಾನಾ ಕಾಣಿಸಿಕೊಳ್ಳಲಿದ್ದಾರೆ. ಏಳು ವರ್ಷದ ಇಲಿಯಾನಾ ಕನಸು ನನಸಾಗಿದೆ.