ನಾನು ಇದ್ದಿದ್ದರೆ ಬಾಂಗ್ಲಾ ಹಿಂದೂಗಳನ್ನು ರಕ್ಷಣೆ ಮಾಡುತ್ತಿದ್ದೆ : ಟ್ರಂಪ್
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ ಶುರುವಾಗಿದೆ. ಕಮಲಾ ಹ್ಯಾರಿಸ್ ಹಿಂದೂಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ ಹಾಗೂ ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದ್ದಾರೆ
ವಾಷಿಂಗ್ಟನ್ (ನ.2): ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ ಶುರುವಾಗಿದೆ. ಕಮಲಾ ಹ್ಯಾರಿಸ್ ಹಿಂದೂಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ ಹಾಗೂ ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದ್ದಾರೆ. ದೀಪಾವಳಿ ಶುಭಾಶಯ ತಿಳಿಸುವ ವೇಳೆ ಮೊದಲ ಬಾರಿ ಟ್ರಂಪ್ ಬಾಂಗ್ಲಾ ಹಿಂದೂಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದಿರುವ ಟ್ರಂಪ್ ತಾವು ಗೆದ್ದರೆ ಭಾರತದ ಜತೆ ಮತ್ತಷ್ಟು ಬಾಂಧವ್ಯ ವೃದ್ಧಿಸುವೆ ಎಂದಿದ್ದಾರೆ.
‘ಬಾಂಗ್ಲಾದೇಶದಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರ ಮೇಲಾಗುತ್ತಿರುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ ನನ್ನ ಕಣ್ಗಾವಲಿನಲ್ಲಿದ್ದಿದ್ದರೆ ಇದು ಎಂದಿಗೂ ಇದು ಸಂಭವಿಸುತ್ತಿರಲಿಲ್ಲ’ ಎಂದಿದ್ದಾರೆ.ಇನ್ನು ಇದೇ ವೇಳೆ ಟ್ರಂಪ್ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಮೇಲೆ ಕಿಡಿ ಕಾರಿದ್ದು ‘ಕಮಲಾ ಮತ್ತು ಜೋ ಅಮೆರಿಕ ಮತ್ತು ಪ್ರಪಂಚದಾದ್ಯಂತ ಹಿಂದೂಗಳನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದಿದ್ದಾರೆ.
ಹ್ಯಾಲೋವೀನ್ ಪಾರ್ಟಿಯಲ್ಲಿ ಮಗುವಿನ ಕಾಲು ಕಚ್ಚಿದ ಜೋ ಬೈಡನ್
ಹಿಂದೂ ಸಂಘಟನೆಗಳ ಸ್ವಾಗತ:
ಟ್ರಂಪ್ ಹೇಳಿಕೆಯನ್ನು ಅಮೆರಿಕದಲ್ಲಿನ ಹಿಂದೂ ಸಂಘಟನೆಗಳು ಸ್ವಾಗತಿಸಿದ್ದು, ಟ್ರಂಪ್ ನಿಜವಾಗಿಯೂ ಹಿಂದೂ ಸಂಘಟನೆಗಳ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದಿವೆ.
ಟ್ರಂಪ್ ಸೇಡಿನ ರಾಜಕೀಯ: ಕಮಲಾ ಕಿಡಿ
‘ಡೊನಾಲ್ಡ್ ಟ್ರಂಪ್ ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೆದ್ದರೆ ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ತರುತ್ತಾರೆ. ನಾನು ಗೆದ್ದರೆ ಮಾಡಬೇಕಾದ ಕೆಲಸಗಳ ಪಟ್ಟಿ ತರುವೆ’ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಹರಿಹಾಯ್ದರ.ಲಾಸ್ ವೇಗಸ್‌ನಲ್ಲಿ ಮಾತನಾಡಿದ ಕಮಲಾ, ‘ಟ್ರಂಪ್ ಯಾರು ಎಂಬುದು ನಮಗೆಲ್ಲರಿಗೂ ಗೊತ್ತಿದೆ.
ನಿಮ್ಮ ಜೀವನವನ್ನು ಹೇಗೆ ಉತ್ತಮಗೊಳಿಸಬೇಕೆಂದು ಯೋಚಿಸುವ ವ್ಯಕ್ತಿಯಲ್ಲ. ಅವರು ಹೆಚ್ಚು ಅಸ್ಥಿರವಾಗಿರುವ, ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದಾರೆ. ಒಂದು ವೇಳೆ ಅವರು ಮತ್ತೆ ಆಯ್ಕೆಯಾದರೆ, ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ಹಿಡಿದು ತರುತ್ತಾರೆ. ಒಂದು ವೇಳೆ ನಾನು ಗೆದ್ದರೆ ನಿಮ್ಮ ಪರವಾಗಿ ಮಾಡಬೇಕಾದ ಕೆಲಸದ ಪಟ್ಟಿ ತರುವೆ’ ಎಂದರು.ಇನ್ನು ಈ ರ್‍ಯಾಲಿ ವೇಳೆ ಅಮೆರಿಕದ ಪ್ರಸಿದ್ಧ ಗಾಯಕಿ ಜೆನ್ನಿಫರ್ ಲೋಪೆಜ್ ಅವರು ಕಮಲಾ ಹ್ಯಾರಿಸ್‌ಗೆ ಬೆಂಬಲ ಸೂಚಿಸಿದರು.
ಕಮಲಾ ವಿರುದ್ಧ ಸೋತರೆ ಕೋರ್ಟ್‌ಗೆ ಟ್ರಂಪ್ ಮೊರೆ?
ಅಮೆರಿಕ ಅಧ್ಯಕ್ಷ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತಾವು ನ.5ರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಸೋತರೆ ಕೋರ್ಟ್ ಮೊರೆ ಹೋಗುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.2020ರಲ್ಲಿ ಜೋ ಬೈಡೆನ್ ವಿರುದ್ಧ ಸೋತಾಗಲೂ ಅವರು ಚುನಾವಣಾ ಅಕ್ರಮ ನಡೆದಿದೆ ಎಂದು ಹಲವು ಮೊಕದ್ದಮೆ ಹಾಕಿದ್ದರು. ಆದರೆ ಅವರಿಗೆ ಯಶ ಸಿಕ್ಕಿರಲಿಲ್ಲ.ಆದರೆ ಈ ಸಲ ನ.5ರಂದು ಆರಂಭವಾಗುವ ಮತ ಎಣಿಕೆ ಬೇಗ ಮುಗಿಯದೇ ಹಲವು ದಿನ ಮುಂದುವರಿಯುವ ಸಂಭವವಿದೆ. ಆರಂಭದಲ್ಲೇ ಹಿನ್ನಡೆ ಕಂಡರೆ ಅವರು ಚುನಾವಣಾ ಅಕ್ರಮಗಳ ಆರೋಪ ಹೊರಿಸಿ ಕೋರ್ಟ್ ಕದ ಬಡಿಯುವ ಸಾಧ್ಯತೆ ಇದೆ ಎಂದು ಅವರಿಗೆ ಹತ್ತಿರದ ಮೂಲಗಳು ಹೇಳಿವೆ.
ಅಮೆರಿಕ ನಿರ್ಬಂಧ: ಭಾರತದ ಕಂಪನಿಗಳ ಸಂಖ್ಯೆ 15ಕ್ಕೇರಿಕೆ
ವಾಷಿಂಗ್ಟನ್: ಉಕ್ರೇನ್ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿದ್ದಕ್ಕೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಭಾರತದ ಕಂಪನಿಗಳ ಸಂಖ್ಯೆ ಶುಕ್ರವಾರ 4ರಿಂದ 15ಕ್ಕೆ ಏರಿದೆ.ಅಮೆರಿಕ ವಿಶ್ವಾದ್ಯಂತ 275 ಕಂಪನಿಗಳ ಮೇಲೆ ರಷ್ಯಾ ಜತೆ ನಂಟು ಹೊಂದಿದ್ದಕ್ಕೆ ವಹಿವಾಟಿನಿಂದ ನಿರ್ಬಂಧ ಹೇರಿದೆ. ಇವುಗಳಲ್ಲಿ ಭಾರತದ 15 ಕಂಪನಿಗಳಿವೆ. ಇದರ ಜತೆ ಚೀನಾ, ಸ್ವಿಜರ್ಲೆಂಡ್, ಥಾಯ್ಲೆಂಡ್ ಹಾಗೂ ಟರ್ಕಿ ಕಂಪನಿಗಳೂ ಸೇರಿವೆ ಎಂದು ಅಮೆರಿಕದ ಖಜಾನೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕಾದಲ್ಲಿ ಟ್ರಂಪ್ ಗೆದ್ದರೆ ಭಾರತ, ಇತರ ದೇಶಗಳ ವಲಸಿಗರಿಗೆ ಆಪತ್ತು?
ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಡೆನ್ವಾಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್; ಎಮ್ಸಿಸ್ಟೆಕ್, ಗ್ಯಾಲಕ್ಸಿ ಬೇರಿಂಗ್ಸ್, ಆರ್ಬಿಟ್ ಫಿಂಟ್ರೇಡ್; ಇನ್ನೋವಿಯೊ ವೆಂಚರ್ಸ್, ಕೆಜಿಡಿ ಎಂಜಿನಿಯರಿಂಗ್, ಲೋಕೇಶ್ ಮೆಷಿನ್ಸ್ ಲಿಮಿಟೆಡ್ ಅನ್ನು ಸಹ ಒಳಗೊಂಡಿವೆ; ಪಾಯಿಂಟರ್ ಎಲೆಕ್ಟ್ರಾನಿಕ್ಸ್, ಆರ್‌ಆರ್ಜಿ ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಶಾರ್ಪ್ಲೈನ್ ಆಟೋಮೇಷನ್ ಪ್ರೈವೇಟ್- ಇವು ನಿರ್ಬಂಧಿತ ಭಾರತದ ಕಂಪನಿಗಳು.