ಅಮೆರಿಕಾದಲ್ಲಿ ಟ್ರಂಪ್ ಗೆದ್ದರೆ ಭಾರತ, ಇತರ ದೇಶಗಳ ವಲಸಿಗರಿಗೆ ಆಪತ್ತು?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದರೆ ವಲಸಿಗರಿಗೆ ಕಡಿವಾಣ ಹಾಕುವುದಾಗಿ ಹಾಗೂ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ದ ಪೌರತ್ವ ಹಕ್ಕನ್ನು ಮೊಟಕುಗೊಳಿಸುವುದಾಗಿ ಹೇಳಿದ್ದಾರೆ. ಇದು ಭಾರತ ಸೇರಿದಂತೆ ಹಲವು ದೇಶಗಳ ವಲಸಿಗರಲ್ಲಿ ಆತಂಕ ಮೂಡಿಸಿದೆ. ಎಲಾನ್ ಮಸ್ಕ್ ಕೂಡ ಒಮ್ಮೆ ಅಕ್ರಮ ವಲಸಿಗರಾಗಿದ್ದರು ಎಂಬ ಸ್ಪೋಟಕ ವರದಿ ಹೊರಬಿದ್ದಿದೆ.
ಅಟ್ಲಾಂಟಾ: ನವಂಬರ್ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಕಡಿವಾಣ ಹಾಕುವುದಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ ಹಾಗೂ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ದ ಪೌರತ್ವದ ಹಕ್ಕನ್ನು ಮೊಟಕುಗೊಳಿಸುವುದಾಗಿ ಹೇಳಿದ್ದಾರೆ. ಇದು ಭಾರತ ಹಾಗೂ ಇತರ ದೇಶಗಳಿಂದ ಅಮೆರಿಕಕ್ಕೆ ವಲಸೆ ಬಂದವರಿಗೆ ನಡುಕ ಮೂಡಿಸುತ್ತಿದೆ. ಟ್ರಂಪ್ ಗೆದ್ದರೆ ಈ ಕ್ರಮಗಳನ್ನು ಅವರು ಜಾರಿಗೊಳಿಸಬಹುದು. ಇದರಿಂದ ತಮಗೆ ತೊಂದರೆ ಆಗಬಹುದು ಎಂಬುದು ಅವರ ಆತಂಕಕ್ಕೆ ಕಾರಣ.
ಅಮೆರಿಕ ಚುನಾವಣೆಗೆ 8 ದಿನ ಬಾಕಿ
ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದು, ಅವರನ್ನು ಗಡೀಪಾರು ಮಾಡಲಾಗುವುದು. ಅಕ್ರಮ ವಲಸಿಗರ ಮಕ್ಕಳು ಅಮೆರಿಕದಲ್ಲಿ ಜನಿಸಿದ್ದರೂ ಅವರಿಗೆ ಅಮೆರಿಕ ಪೌರತ್ವ ನೀಡುವುದಿಲ್ಲ ಎಂಬುದು ಟ್ರಂಪ್ ನಿಲುವು. ಅಮೆರಿಕದಲ್ಲಿ ಯಾರೇ ಜನಿಸಿದರೂ ಅವರಿಗೆ ಜನ್ಮಸಿದ್ದ ಪೌರತ್ವ ಸಿಗುತ್ತೆ ಆದರೆ ಅಂಥದ್ದರಲ್ಲಿ ಅಕ್ರಮ ವಲಸಿಗರ ಮಕ್ಕಳು ಅಮೆರಿಕದಲ್ಲಿ ಜನಿಸಿದರೆ ಅವರಿಗೆ ಪೌರತ್ವ ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಟ್ರಂಪ್ ಬಗ್ಗೆ ಕಾನೂನು ತಜ್ಞರು ಕಿಡಿಕಾರಿದ್ದಾರೆ.
ಈ ದೇಶದಲ್ಲಿ ಅಕ್ರಮವಾಗಿ ಕೆಲಸ ಮಾಡಿದ್ರು ಪ್ರಪಂಚದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್
'ಟ್ರಂಪ್ ನಡೆಗಳಿಂದ ನಾವು ಚಿಂಚಿತರಾಗಿದ್ದೇವೆ. ಆದರೆ ಅವರ ವಿರೋಧಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ಅಕ್ರಮ ವಲಸೆಗೆ ವಿರೋಧ ಇದ್ದರೂ ಟ್ರಂಪ್ರಷ್ಟು ಕಠಿಣ ನಿಲುವು ಹೊಂದಿಲ್ಲ. ಹೀಗಾಗಿ ಬಹುತೇಕ ವಲಸಿಗರು ಕಮಲಾ ಪರವಾಗಿದ್ದಾರೆ ಎಂದು ಭಾರತ ಹಾಗೂ ಬಾಂಗ್ಲಾ ವಲಸಿಗರು ಹೇಳುತ್ತಿದ್ದಾರೆ.
ಎಲಾನ್ ಮಸ್ಕ್ ಅಮೆರಿಕಕ್ಕೆ ಅಕ್ರಮ ವಲಸಿಗ?
ವಾಷಿಂಗ್ಟನ್: ಅಕ್ರಮ ವಲಸಿಗರನ್ನು ಅಮೆರಿಕದ ಡೆಮಾಕ್ರೆಟಿಕ್ ಪಕ್ಷ ತಡೆಯುತ್ತಿಲ್ಲ ಎಂದು ಆರೋಪಿಸುತ್ತಿರುವ ವಿಶ್ವದ ನಂ.1 ಶ್ರೀಮಂತ, ಉದ್ಯಮಿ ಎಲಾನ್ ಮಸ್ಕ್, ಖುದ್ದು ಅಮೆರಿಕಕ್ಕೆ ಬಂದಿದ್ದ ಅಕ್ರಮ ವಲಸಿಗ ಎಂದು 'ವಾಷಿಂಗ್ಟನ್ ಪೋಸ್ಟ್' ಸ್ಪೋಟಕ ವರದಿ ಪ್ರಕಟಿಸಿದೆ. ಮಸ್ಕ್ ಅವರು, ಲಕ್ಷಾಂತರ ಅಕ್ರಮ ವಲಸಿಗರ ಗಡೀಪಾರು ಮಾಡುವ ಭರವಸೆ ನೀಡಿರುವ ಅಮೆರಿಕದ ನಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಅವರ ಕಟ್ಟಾ ಬೆಂಬಲಿಗರು. ಇದರ ನಡುವೆಯೇ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ.
ಕಮಲಾ ಹ್ಯಾರೀಸ್ ಪ್ರೆಗ್ನೆಂಟ್, ಹೊಟ್ಟೆ ಹಿಡಿದ ಟ್ರಂಪ್! ಎಲೆಕ್ಷನ್ ಹೊತ್ತಿಗೆ ಇದೆಂಥ ಫೋಟೋ ವೈರಲ್?
ದಕ್ಷಿಣ ಆಫ್ರಿಕಾ ಮೂಲದ ವಲಸಿಗನಾಗಿದ್ದ ಮಸ್ಕ್, 90ರ ದಶಕದಲ್ಲಿ ವಿದ್ಯಾರ್ಥಿ ವೀಸಾ ಪಡೆದು ಅಮೆರಿಕಕ್ಕೆ ಬಂದಿದರು. ಆದರೆ ಬಳಿಕವೂ ಕಾನೂನುಬಾಹಿರವಾಗಿ ಅಮೆರಿಕದಲ್ಲಿ ತಂಗಿದ್ದರು ಹಾಗೂ ಕಂಪನಿಯೊಂದನ್ನು ಹುಟ್ಟು ಹಾಕಿದಾಗ ಗಡೀಪಾರಾಗುವ ಆತಂಕ ಎದುರಿಸಿದ್ದರು. ಇ-ಮೇಲ್ ಒಂದರಲ್ಲಿ ತಾವು ಅಕ್ರಮ ವಲಸಿಗ ಎಂಬುದನ್ನು ಒಪ್ಪಿಕೊಂಡಿದ್ದರು ಎಂದು ವರದಿ ಹೇಳಿದೆ.