ನವದೆಹಲಿ(ಮೇ.26): ದೇಶಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ನಿಯಂತ್ರಿಸುವ ಸಲುವಾಗಿ ಲಸಿಕೆ ಅಭಿಯಾನ ಭರದಿಂದ ಸಾಗಿದೆಹೀಗಿರುವಾಗ ಕೆಲ ರಾಜ್ಯಗಳು ಲಸಿಕೆಯ ಕೊರತೆ ಎದುರಿಸುತ್ತಿವೆ. ಹೀಗಿದ್ದರೂ ಇನ್ನು ಕೆಲ ರಾಜಗ್ಯಗಳು ಲಸಿಕೆಗಳನ್ನು ಹಾಳುಗೆಡವುತ್ತಿರುವ ವರದಿಗಳೂ ಬೆಳಕಿಗೆ ಬಂದಿವೆ. ಈ ಪಟ್ಟಿಯಲ್ಲಿ ಶೇ. 37ರಷ್ಟು ಲಸಿಕೆ ಹಾಳು ಮಾಡುವ ಮೂಲಕ ಝಾರ್ಖಂಡ್ ಮೊದಲ ಸ್ಥಾನದಲ್ಲಿದೆ. ಇನ್ನು ಶೇ. 15.5ರ ಜೊತೆ ನೆರೆ ರಾಜ್ಯ ತಮಿಳುನಾಡು ಎರಡನೇ ಸ್ಥಾನ ಪಡೆದುಕೊಂಡಿದೆ.

2 ವರ್ಷ ಫೈಝರ್‌, ಮಾಡೆ​ರ್ನಾ ಲಸಿಕೆ ಡೌಟ್‌!

ಇದೇ ರೀತಿ ಜಮ್ಮು ಕಾಶ್ಮೀರದಲ್ಲಿ ಶೇ. 10.8, ಮಧ್ಯಪ್ರದೇಶದಲ್ಲಿ ಶೇ. 10.7ರಷ್ಟು ಲಸಿಕೆಗಳು ಪೋಲಾಗುತ್ತಿವೆ. ಇದು ದೇಶದಲ್ಲಿ ಪೋಲಾಗುತ್ತಿರುವ ಒಟ್ಟು ಲಸಿಕೆಗಳ ಸರಾಸರಿ ಶೇ. 6.3ಕ್ಕಿಂತ ಹೆಚ್ಚಿದೆ. ಅತ್ತ ಕೇಂದ್ರ ಸರ್ಕಾರ ರಾಜ್ಯಗಳ ಬಳಿ ಪೋಲಾಗುತ್ತಿರುವ ಲಸಿಕೆಯ ಪ್ರಮಾಣ ಶೇ. 1ಕ್ಕಿಂತ ಕೆಳಗಿಒಳಿಸುವಂತೆ ಮನವಿ ಮಾಡುತ್ತಿದೆ, ಆದರೆ ವಾಸ್ತವತೆ ಮಾತ್ರ ಬೇರೆಯೇ ಇದೆ.

ಮಂಗಖಳವಾರ ಸಭೆ ನಡೆಸಿದ್ದ ಆರೋಗ್ಯ ಇಲಾಖೆ

ಕೇಂದ್ರ ಆರೋಗ್ಯ ಇಲಾಖೆ ಲಸಿಕೆ ಸಂಬಂಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮಂಗಳವಾರ ವರ್ಚುವಲ್ ಮೀಟಿಂಗ್ ನಡೆಸಿತ್ತು. ಇದರಲ್ಲಿ ಕೋವಿನ್‌ ಸಾಫ್ಟ್‌ವೇರ್‌ನಲ್ಲಾಗಬೇಕಾದ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಬದಲಾವಣೆಯಿಂದ ಆರೋಗ್ಯ ಮೂಲಸೌಕರ್ಯದಿಂದ ವಂಚಿತ ಪ್ರದೇಶಗಳಲ್ಲಿ ಕರೋನದ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಎಸ್‌ಒಪಿಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಮೃತ ಸೋಂಕಿತರ ಅಂತ್ಯಸಂಸ್ಕಾರ: ಮೂರು ಲೋಡ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ

ಈ ಸಭೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ಬಗ್ಗೆಯೂ ವಿಸ್ಕೃತವಾದ ವರದಿಯನ್ನು ಮಂಡಿಸಲಾಗಿತ್ತು. ಇದೇ ವೇಳೆ ಕೊರೋನಾ ವಿರುದ್ಧದ ಯುದ್ಧದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಸೋಂಕಿಗೆ ಒಳಗಾಗುವ ಅಪಾಯದಲ್ಲಿರುವ ಸಮೂಹಕ್ಕೆ ಲಸಿಕೆ ಹಾಕುವಲ್ಲಿ ಹಿಂದುಳಿದಿರುವ ರಾಜ್ಯಗಳತ್ತ ಗಮನ ಹರಿಸಲಾಗಿದೆ. ಅಲ್ಲದೇ ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್‌ಲೈನ್‌ ವರ್ಕರ್ಸ್‌ಗೆ ನಿಡಲಾದ ಮೊದಲ ಹಾಗೂ ಎರಡನೇ ಡೋಸ್‌ ಬಗ್ಗೆಯೂ ವಿಮರ್ಶೆ ನಡೆಸಲಾಗಿದೆ. ಇವೆಲ್ಲದರೊಂದಿಗೆ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಸೂಚಿಸಲಾಯ್ತು.

ಜೂನ್‌ವರೆಗಿನ ಯೋಜನೆ ರೂಪಿಸಲು ನಿರ್ದೇಶನ

ಈ ಸಂದರ್ಭದಲ್ಲಿ ಆರೋಗ್ಯ ಇಲಾಕೆಯ ಕಾರ್ಯದರ್ಶಿ ರಾಜೆಶ್ ಭೂಷಣ್ ರಾಜ್ಯಗಳಿಗೆ ಕೋವಿನ್‌ ಮೂಲಕ ಲಸಿಕೆ ಅಭಿಯಾಣಕ್ಕೆ ಮತ್ತಷ್ಟು ವೇಗ ನೀಡಲು ಸೂಚಿಸಿದ್ದಾಋಎ. ಅಲ್ಲದೇ ರಾಜ್ಯಗಳಿಗೆ ಲಭ್ಯವಿರುವ ಸ್ಟಾಕ್‌ ಹಾಗೂ ಕೊರತೆ ಗಮನಹರಿಸಿ ಜೂನ್, 2021ರೊಳಗೆ ಲಸಿಕೆ ಅಭಿಯಾನಕ್ಕೆ ಬೇಕಾದ ಯೋಜನೆ ರೂಪಿಸುವಂತೆ ಆದೇಶಿಸಿದ್ದಾರೆ. 

ಇದರೊಂದಿಗೆ ರಾಜ್ಯಗಳಿಗೆ ಕೇಂದ್ರದ ವತಿಯಿಂದ ನೀಡಬೇಕಾದ ಉಚಿತ ಲಸಿಕೆಗಳು ಜೂನ್ 15ರೊಳಗೆ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona