Asianet Suvarna News Asianet Suvarna News

Tamil Nadu : ಪೌಲ್ಟ್ರಿ ಕಂಪನಿಯಲ್ಲಿ 300 ಕೋಟಿ ತೆರಿಗೆ ವಂಚನೆ ಪತ್ತೆ!

*ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೇವೆ ನೀಡುತ್ತಿರುವ ಕಂಪನಿ
*ತಮಿಳುನಾಡು, ಕರ್ನಾಟಕ, ಕೇರಳದ 40 ಸ್ಥಳಗಳ ಮೇಲೆ ಐಟಿ ದಾಳಿ
*ದಾಳಿ ವೇಳೆ ಲೆಕ್ಕ ಇಡದ 3.3 ಕೋಟಿ ರು. ನಗದು ಪತ್ತೆ

IT raid on SKM Group unaccounted income over Rs 300 crore found
Author
Bengaluru, First Published Nov 3, 2021, 9:39 AM IST

ನವದೆಹಲಿ (ನ.2) : ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಮಿಳುನಾಡು ಮೂಲದ ಪೌಲ್ಟ್ರಿ  ಕಂಪನಿಯೊಂದು 300 ಕೋಟಿ ರು.ನಷ್ಟು ತೆರಿಗೆ ವಂಚನೆ ನಡೆಸಿರುವುದು ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ( Central Board of Direct Taxes) ಮಾಹಿತಿ ನೀಡಿದೆ. ಅ.27ರಂದು ಐಟಿ ಅಧಿಕಾರಿಗಳು, ತಮಿಳುನಾಡು (Tamil Nadu), ಕರ್ನಾಟಕ (Karnataka), ಕೇರಳದ (Kerala) 40 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಕಂಪನಿಯ ಅಧಿಕ ವೆಚ್ಚ ತೋರಿಸುವ ಮೂಲಕ, ಮಾರಾಟದ ದರ ಕಡಿಮೆ ತೋರಿಸುವ ಮೂಲಕ, ಉಪ ಉತ್ಪನ್ನಗಳ ಮಾರಾಟದ ಲೆಕ್ಕವನ್ನು ಮುಚ್ಚಿಡುವ ಮೂಲಕ 300 ಕೋಟಿ ರು. ತೆರಿಗೆ ವಂಚಿಸಿದೆ. ಹೀಗೆ ವಂಚಿಸಿದ ಹಣವನ್ನು ಸ್ಥಿರಾಸ್ತಿ ಖರೀದಿಸಲು ಮತ್ತು ಲೆಕ್ಕಕ್ಕೆ ಇಡದ ಇತರೆ ಕೆಲವು ವೆಚ್ಚಗಳನ್ನು ನಿರ್ವಹಿಸಲು ಬಳಸಿಕೊಳ್ಳಲಾಗಿದೆ.

Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ

ದಾಳಿ ವೇಳೆ ಲೆಕ್ಕ ಇಡದ 3.3 ಕೋಟಿ ರು. ನಗದು ಕೂಡಾ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಅ.27ರಂದು ಐಟಿ ಅಧಿಕಾರಿಗಳು ಕುಕ್ಕಟ ಉದ್ಯಮ, ಖಾದ್ಯ ತೈಲ, ಪಶು ಆಹಾರ ವಲಯದಲ್ಲಿ ತೊಡಗಿಸಿಕೊಂಡಿರುವ ಎಸ್‌ಕೆಎಂ ಗ್ರೂಪ್‌ ಆಫ್‌ ಕಂಪನಿಗಳ (SKM Group of companies) ಮೇಲೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಮಂಡಳಿಯ ಪ್ರಕಾರ, ಶೋಧ ಕಾರ್ಯಾಚರಣೆಯಲ್ಲಿ ಹಲವಾರು ದೋಷಾರೋಪಣೆಯ ದಾಖಲೆಗಳು, ಎಲೆಕ್ಟ್ರಾನಿಕ್ ಡೇಟಾ ರೂಪದಲ್ಲಿ ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!

ದೇಶದಲ್ಲಿ ಶರದ್ ಪವಾರ್ ನೇತೃತ್ವದ NCP ಪಕ್ಷ ಹಾಗೂ ನಾಯಕರು ಭಾರಿ ಸದ್ದು ಮಾಡುತ್ತಿದ್ದಾರೆ. NCB ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ, ಇದೀಗ ಮತ್ತೊರ್ವ NCP ನಾಯಕ, ಮಹಾರಾಷ್ಟ್ರ(Maharashtra) ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಸರದಿ. ಈ ಬಾರಿ ಅಜಿತ್ ಪವಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

24 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣ; SBI ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ ಅರೆಸ್ಟ್!

ಬೇನಾಮಿ ಆಸ್ತಿ ಹೊಂದಿರುವ ಅಜಿತ್ ಪವಾರ್‌ಗೆ ಇದೀಗ ಐಟಿ ಇಲಾಖೆ(Income Tax Department) ಶಾಕ್ ನೀಡಿದೆ. ಅಜಿತ್ ಪವಾರ್‌ಗೆ ಸೇರಿದೆ. ಆದರೆ ಅಜಿತ್ ಪವಾರ್ ಹೆಸರಲ್ಲಿ ಇಲ್ಲದ ಸುಮಾರು 1,000 ರೂಪಾಯಿ ಮೌಲ್ಯದ ಆಸ್ತಿಗಳನ್ನು ಐಟಿ ಇಲಾಖೆ ಸೀಝ್ ಮಾಡಿದೆ. ಇದೀಗ ಪವಾರ್ ಸಂಕಷ್ಟ ಹೆಚ್ಚಾಗಿದೆ.

ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್, ಹಬ್ಬದ ಸೀಸನ್ ಕಾರಣ?

ಮಹಾರಾಷ್ಟ್ರ, ಗೋವಾ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಲ್ಲಿರುವ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯೆ ಬೇನಾಮಿ ವಿಭಾಗ ಸೀಝ್ ಮಾಡಿದೆ. ದೆಹಲಿಯಲ್ಲಿನ 20 ಕೋಟಿ ಮೌಲ್ಯದ ಫ್ಲ್ಯಾಟ್, ಗೋವಾದಲ್ಲಿರುವ 250 ಕೋಟಿ ರೂಪಾಯಿ ಮೌಲ್ಯದ ರೆಸಾರ್ಟ್, ಮುಂಬೈನಲ್ಲಿರುವ 600 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಕಾರ್ಖಾನೆ, ಮಹಾರಾಷ್ಟ್ರದಲ್ಲಿನ ಮನೆ, ಮುಂಬೈನ ಹೊರವಲ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗದಲ್ಲಿರುವ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಭೂಮಿ ಸೇರಿದಂತೆ ಒಟ್ಟು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

Follow Us:
Download App:
  • android
  • ios