24 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣ; SBI ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ ಅರೆಸ್ಟ್!
- SBI ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ ಬಂಧಿಸಿದ ಜೈಸಲ್ಮೆರ್ ಪೊಲೀಸ್
- ಸಾಲ ವಂಚನೆ ಪ್ರಕರಣ ಸಂಬಂಧ ಪ್ರತೀಪ್ ಚೌಧರಿ ಅರೆಸ್ಟ್
- 2008ರಲ್ಲಿ ನಡೆದ ಗೋದಾವನ್ ಗ್ರೂಪ್ ಕಂಪನಿ ಸಾಲ ಪ್ರಕರಣ
ನವದೆಹಲಿ(ನ.01): ಸಾಲ ವಂಚನೆ(Loan Scam) ಪ್ರಕರಣ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ(Pratip Chaudhuri) ಅರೆಸ್ಟ್(Arrest) ಆಗಿದ್ದಾರೆ. ಜೈಸಲ್ಮೆರ್ ಪೊಲೀಸರು(Jaisalmer police) ಪ್ರತೀಪ್ ಚೌಧರಿಯನ್ನು ನವದೆಹಲಿ ನಿವಾಸದಲ್ಲಿ ಬಂಧಿಸಿದ್ದಾರೆ. ಹೊಟೆಲ್ ನಿರ್ಮಾಣಕ್ಕೆ ನೀಡಿದ ಸಾಲದಲ್ಲಿ ನಡೆದಿರುವ ವಂಚನೆ ಪ್ರಕರಣ ಸಂಬಂಧ ಪೊಲೀಸರು ಚೌಧರಿಯನ್ನು ಬಂಧಿಸಿದ್ದಾರೆ.
ಮುಂದಿನ 3 ವರ್ಷ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮುಂದುವರಿಕೆ!
2008ರಲ್ಲಿ ಗೋದಾವನ್ ಗ್ರೂಪ್ ಕಂಪನಿ(Godawan Group) ಜೈಸಾಲ್ಮೆರ್‌ನಲ್ಲಿ ಹೊಟೆಲ್ ನಿರ್ಮಾಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 24 ಕೋಟಿ ರೂಪಾಯಿ ಸಾಲ ಪಡೆದಿದೆ. ಸಾಲ ಪಡೆದ ಬಳಿಕ ಮರುಪಾವತಿ ಗೋದಾವನ್ ಗ್ರೂಪ್‌ಗೆ ಕಷ್ಟವಾಗಿದೆ. ಬ್ಯಾಂಕ್ ಹಲವು ಬಾರಿ ನೊಟೀಸ್ ನೀಡಿದ್ದರೂ ಗೋದಾವನ್ ಗ್ರೂಪ್ ಸಾಲ ಮರುಪಾವತಿಸಲು ಮುಂದಾಗಲಿಲ್ಲ.
ಬ್ಯಾಂಕ್ ಜಪ್ತಿ ಕಾನೂನು ಪ್ರಕಾರ ಗೋದಾವನ್ ಗ್ರೂಪ್ ಕಂಪನಿಯ ಸುಮಾರು 200 ಕೋಟಿ ರೂಪಾಯಿ ಆಸ್ತಿಯನ್ನು SBI ಬ್ಯಾಂಕ್ ಜಪ್ತಿ ಮಾಡಿತು. ಈ ವೇಳೆ ಪ್ರತೀಪ್ ಚೌಧರಿ ಸ್ಟೇಟ್ ಬ್ಯಾಂಕ್ ಇಂಡಿಯಾದ ಚೇರ್ಮೆನ್ ಆಗಿದ್ದರು. ಜಪ್ತಿ ಮಾಡಿದ 200 ಕೋಟಿ ರೂಪಾಯಿ ಆಸ್ತಿಯನ್ನು ಕೇವಲ 25 ಕೋಟಿಗೆ ಹರಾಜು ಮಾಡಲಾಗಿದೆ.
ಠೇವಣಿ ಇಟ್ಟ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನ ಬ್ಯಾಂಕಲ್ಲೇ ಕೂಡಿ ಹಾಕೋದಾ?
200 ಕೋಟಿ ರೂಪಾಯಿ ಆಸ್ತಿಯನ್ನು 25 ಕೋಟಿ ರೂಪಾಯಿ ನೀಡಿ ಅಲ್‌ಕೆಮಿಸ್ಟ್ ಎಆರ್‌ಸಿ(Alchemist ARC) ಕಂಪನಿ ಖರೀದಿಸಿತ್ತು. 2016ರಲ್ಲಿ ಗೋದಾವನ್ ಹೊಟೆಲ್‌ನ್ನು ಅಲ್‌ಕೆಮಿಸ್ಟ್ ಕಂಪನಿ ಖರೀದಿ ಮಾಡಿತ್ತು. 2017ರಲ್ಲಿ ತಾವು ಖರೀದಿಸಿದ ಆಸ್ತಿ ವಿವರವನ್ನು 160 ಕೋಟಿ ಎಂದು ಅಲ್‌ಕೆಮಿಸ್ಟ್ ತೋರಿಸಿತ್ತು. ಇಲ್ಲೇ ಬಹುದೊಡ್ಡ ಹರಗಣವೊಂದು ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿತ್ತು.
ಜಪ್ತಿ , ಹರಾಜು ಪ್ರಕ್ರಿಯೆ ಎಲ್ಲವೂ ಪ್ರತೀಪ್ ಚೌಧರಿ ನೇತೃತ್ವದಲ್ಲಿ ನಡೆದಿತ್ತು. ಇತ್ತ ಪ್ರತೀಪ್ ಚೌಧರಿ ನಿವೃತ್ತಿಯಾದ ಬಳಿಕ ಅಲ್‌ಕೆಮಿಸ್ಟ್ ಎಆರ್‌ಸಿ ಕಂಪನಿಯ ನಿರ್ದೇಶಕರಾಗಿ ಸೇರಿಕೊಂಡರು. ಅಷ್ಟರಲ್ಲಿ ಅಲ್‌ಕೆಮಿಸ್ಟ್ ಕಂಪನಿಗೂ ಪ್ರತೀಪ್ ಚೌಧರಿಗೂ ನಂಟಿರುವುದು ಸ್ಪಷ್ಟವಾಗಿದೆ.
ಪ್ರಕರಣದ ಕುರಿತು ಜೈಸಲ್ಮೆರ್ ಚೀಫ್ ಜಸ್ಟೀಸ್ ಪ್ರತೀಪ್ ಚೌಧರಿ ಹಾಗೂ ಇತರ ಎಳು ಮಂದಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದರು. ಚೌಧರಿ ಜೊತೆ ಆರ್‌ಕೆ ಕಪೂರ್, ಎಸ್‌ವಿ ವೆಂಕಟಕೃಷ್ಣನ್, ಸಸಿ ಮೆಥಾಡಿಲ್, ದೇವೇಂದ್ರ ಜೈನ್, ತರುಣ್ ಹಾಗೂ ವಿಜಯ್ ಕಿಶೋರ್ ಸಕ್ಸೇನಾ ವಿರುದ್ಧವೂ ಬಂಧನ ವಾರೆಂಟ್ ಹೊರಡಿಸಲಾಗಿದೆ. ಶೀಘ್ರದಲ್ಲಿ ಇತರ ಏಳು ಮಂದಿಯನ್ನು ಬಂಧಿಸಲಾಗುವುದು ಎಂದು ಜೈಸಲ್ಮೆರ್ ಪೊಲೀಸರು ಹೇಳಿದ್ದಾರೆ. ಇತ್ತ ಕೋರ್ಟ್‌ನಿಂದ ವಾರೆಂಟ್ ಪ್ರತಿ ಪಡೆದ ಜೈಸಲ್ಮೆರ್ ಪೊಲೀಸರು ನೆರವಾಗಿ ನವದೆಹಲಿಯ ಪ್ರತೀಪ್ ಚೌಧರಿ ಮನೆಗೆ ತೆರಳಿ ಬಂಧಿಸಿದ್ದಾರೆ.
ಪ್ರತೀಪ್ ಚೌಧರಿ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಕ್ರಿಯೆ ನೀಡಿದೆ. ಅಲ್‌ಕೆಮಿಸ್ಟ್ ಕಂಪನಿಗೆ ಆಸ್ತಿ ಮಾರಾಟ ಮಾಡುವುಗಾ ಎಲ್ಲಾ ಪ್ರಕ್ರಿಯೆ ಅನುಸರಿಸಲಾಗಿದೆ. ಇದರಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಈ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬ್ಯಾಂಕ್ ಎಲ್ಲಾ ಮಾಹಿತಿ ನೀಡಿದೆ. ಪ್ರಕರಣ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ಹೇಳಿದೆ.
4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS
ಚೌಧರಿ ಬಂಧನ ಆಘಾತ ತಂದಿದೆ. ನರೇಂದ್ರ ಮೋದಿ ಸರ್ಕಾರ ಭಾರತೀಯ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಡೀಫಾಲ್ಟರ್‌ಗಳಿಂದ ವ್ಯವಸ್ಥೆಯು ಮತ್ತೆ ಆಟವಾಡುತ್ತಿದೆಯೇ? ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಹೊಣೆಗಾರಿಕೆಯನ್ನು ಪರಿಚಯಿಸಲು ನ್ಯಾಯಾಂಗ ಪ್ರಕ್ರಿಯೆಗಳ ಕೂಲಂಕುಷ ಪರೀಕ್ಷೆಯ ಸಮಯವಾಗಿದೆ ಎಂದು ಎಸ್‌ಬಿಐನ ಮಾಜಿ ಉಪ ವ್ಯವಸ್ಥಾಪಕ ಸುನಿಲ್ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.